ಕೂಡ್ಲಿಗಿ:ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಜಾಥಾ…!!!

Listen to this article

ಕೂಡ್ಲಿಗಿ:ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ_ವಿರೋಧಿ ದಿನಾಚರಣೆ-ಜಾಥಾ-, ವಿಜಯನಗರ ಜಿಲ್ಲೆ ಕೂಡ್ಲಿಗಿ:ಪೊಲೀಸ್ ಇಲಾಖೆ ಹಾಗೂ SAVTಕಾಲೇಜ್ ಸಹಯೋಗದಲ್ಲಿ, ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಆಚರಿಸಲಾಯಿತು. ಪಟ್ಟಣದ SAVT ಕಾಲೇಜ್ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ, ಪಟ್ಟಣರ ನಾಗರೀಕರಲ್ಲಿ ಸಾರ್ವಜನಿಕರಲ್ಲಿ ಜಾಥಾ ಮಾಡಿಸುವುದಕ್ಕೆ ಜಾಗ್ರತಿ ಜಾಥಾ ಹಮ್ಮಿಕೊಳ್ಳಲಾಯಿತು. SAVT ಕಾಲೇಜ್ ವಿದ್ಯಾರ್ಥಿಗಳು ಮಾದಕ ವ್ಯಸನ, ಹಾಗೂ ಕಳ್ಳಸಾಗಾಣಿಕೆ ವಿರೋಧಿಸಿ ಘೋಷಣೆಗಳನ್ನು ಕೂಗುತ್ತ ಜಾಗ್ರತಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಶ್ರೀಬಸವೇಶ್ವರ ವೃತ್ತದಿಂದ ಜಾಗೃತಿ ಜಾಥಾ ಪ್ರ‍ಾರಂಭಗೊಂಡು, ಪಟ್ಟಣದ ಪ್ರಮುಖ ಬೀದಿ ರಸ್ತೆಗಳು ಹಾಗೂ ವೃತ್ತಗಳಲ್ಲಿ ಸಂಚರಿಸಿ ಜಾಗ್ರತೆ ಮೂಡಿಸಲಾಯಿತು. ಜಾಗ್ರತಿ ಜಾಥಾಕ್ಕೆ ಚಾಲನೆ ನೀಡಿದ DYSP ಮಲ್ಲೇಶಪ್ಪ ವಿ ಮಲ್ಲಾಪುರ ಮಾತನಾಡಿದರು, ಮಾದಕ ದ್ರವ್ಯದಿಂದ ಮುಕ್ತವಾದ ಸುಸ್ಥಿರ ಸಮಾಜ ನಿರ್ಮಾಣದ ಉದ್ಧೇಶದಿಂದ. ಪ್ರತಿ ಜೂನ್ 26 ಅನ್ನು ಅಂತರರಾಷ್ಟ್ರೀಯ ಡ್ರಗ್ ದುರುಪಯೋಗ ವಿರೋಧಿ ದಿನ, ಅಥವಾ ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಮಾದಕ ವಸ್ತುಗಳು ಸಮಾಜಕ್ಕೆ ನಾಡಿಗೆ ಅಷ್ಟೇ ಅಲ್ಲ ದೇಶಕ್ಕೇ ಮಾರಕವಾಗಿದ್ದು, ಮಾದಕ ದ್ರವ್ಯ ಸೇವನೆ ತಡೆಗಟ್ಟುವಿಕೆಗಾಗಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು. ಗಾಂಜಾ ಅಪೀಮು ಬಳಕೆಗೆ ಸರ್ಕಾರ ನಿಷೇಧ ಏರಿದೆ, ತಂಬಾಕು ಮದ್ಯ ವ್ಯಸನ ಸಾರ್ವಜನಿಕ ಸ್ಥಳಗಳಲ್ಲಿ ಬಳಕೆ ಕಾನೂನು ವಿರೋಧಿಯಾಗಿದೆ. ಯುವ ಪೀಳಿಗೆ ಚಟಗಳಿಗೆ ದಾಸರಾಗುತ್ತಿದ್ದು ಅದು ಸಾಜಿಕ ಪಿಡುಗಾಗಿ ಕಾಡುತ್ತಿದೆ, ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗ‍ಾವಹಿಸಬೇಕಿದೆ ಎಂದರು. ವಿದ್ಯಾರ್ಥಿಗಳು ಯುವಕರು ತಾತ್ಕಾಲಿಕವಾಗಿ ಆನಂದ ನೀಡುವ, ಮಾದಕ ದ್ರವ್ಯ ವಸ್ತುಗಳ ಅವಲಂಬನೆಗೆ ಒಳಗಾಗುವುದನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ವ್ಯಸನಿಗಳ ಸಹವಾಸ ಸ್ನೇಹಿತರ ಒತ್ತಾಯ, ದೈಹಿಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು. ಹೀಗೆ ಅನೇಕ ಕಾರಣಗಳಿಗಾಗಿ ಜನರು, ಮಾದಕ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದಾಗಿ ಸಾಮಾಜಿಕ ಆರ್ಥಿಕ ಮಾತ್ರವಲ್ಲ ಆರೋಗ್ಯದಲ್ಲಿಯೂ ನಷ್ಟಕ್ಕೀಡಾಗುತ್ತಿದ್ದು, ಹಲವರು ಕಾನೂನು ಭಾಹೀರ ಚಟುವಟಿಕೆ ಅಪರಾಧಗಳಲ್ಲೂ ಭಾಗಿಯಾಗೋ ಸಾಧ್ಯತೆ ಹೆಚ್ಚಿರುತ್ತದೆ. ಕಾರಣ ಸರ್ವರೂ ಮಾದಕ ವಸ್ತುಗಳ ಬಳಕೆ ಹಾಗೂ ಸಾಗಾಣಿಕೆಯನ್ನ ವಿರೋಧಿಸಬೇಕಿದೆ, ಇಲಾಖೆಯೊಂದಿಗೆ ಸಹಕರಿಸಿ ಮಾದಕ ವಸ್ತುಗಳ ನಿಷೇಧ ಕಾರ್ಯಕ್ಕೆ ಸರ್ವರೂ ಸಹಕರಿಸಬೇಕಾಗಿದೆ ಎಂದರು. ಸಿಪಿಐ ಸುರೇಶ ತಳವಾರ, ಪಿಎಸ್ಐ ಧನುಂಜಯ ಕುಮಾರ ಹಾಗೂ ಸಿಬ್ಬಂದಿಯವರು ಇದ್ದರು. ಜಾಥಾದಲ್ಲಿ SAVT ಕ‍ಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು, ನಂತರ SAVT ಕಾಲೇಜು ಸಭಾಂಗಣದಲ್ಲಿ ದಿನಾಚರಣೆ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ಜರುಗಿತು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend