ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಆಯುರ್ವೇದದ ಒಂದು ಅವಿಭಾಜ್ಯ ಅಂಗವಾಗಿದೆ ಡಾ. ಗಂಗಾಧರ್ ವರ್ಮ…!!!

Listen to this article

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಆಯುರ್ವೇದದ ಒಂದು ಅವಿಭಾಜ್ಯ ಅಂಗವಾಗಿದೆ ಡಾ. ಗಂಗಾಧರ್ ವರ್ಮ..

ಚಿತ್ರದುರ್ಗ :- 10 ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಅಮೃತ ಆಯುರ್ವೇದ ಮೆಡಿಕಲ್ ಕಾಲೇಜ್ ಚಿತ್ರದುರ್ಗದಲ್ಲಿ, ಸ್ವಸ್ಠವೃತ್ತ ಮತ್ತು ಯೋಗ ವಿಭಾಗದ ವತಿಯಿಂದ ಅಂತರ ಜಿಲ್ಲಾ ಯೋಗ ಸ್ಪರ್ಧೆ ಸಂಯೋಗ -2024 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆಯ ಜಿಲ್ಲೆಯ ಎಲ್ಲಾ 06 ಆಯುರ್ವೇದ ಕಾಲೇಜುಗಳಾದ ಅಶ್ವಿನಿ ಅಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡಾವಣಗೆರೆ, ಸುಶೃತ ಅಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡಾವಣಗೆರೆ, ತಪೋವನ ಅಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡಾವಣಗೆರೆ, ಶ್ರೀ ರಾಘವೇಂದ್ರ ಅಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಮಲ್ಲಾಡಿಹಳ್ಳಿ, ಚಿತ್ರದುರ್ಗ, ಬಾಪೂಜಿ ಅಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಚಿತ್ರದುರ್ಗ, ವಿಧ್ಯಾರ್ಥಿಗಳು ಭಾಗವಹಿಸಿದ್ದವು.
ಅಂತರ ಜಿಲ್ಲಾ ಯೋಗ ಸ್ಪರ್ಧೆ ಸಂಯೋಗ -2024 ಕಾರ್ಯಕ್ರಮದಲ್ಲಿ ಯೋಗ ಪ್ರಬಂಧ, ಯೋಗ ನೃತ್ಯ, ಯೋಗ ಭಾವಚಿತ್ರ ಹಾಗೂ ವೈಯಕ್ತಿಕ ಯೋಗ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಗಳಲ್ಲಿ 450 ಯೋಗಾಭ್ಯರ್ತಿಗಳು ಭಾಗಿಯಾಗಿದ್ದರು.
ಸಮಾರಂಭದ ಮುಖ್ಯ ಅಥಿಗಳಾಗಿ ಶ್ರೀಯುತ ಡಾ. ಗಂಗಾಧರ್ ವರ್ಮ ಮತ್ತು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ರವರು ಆಗಮಿಸಿದ್ದರು.
ಡಾ. ಗಂಗಾಧರ್ ವರ್ಮ ಮಾತನಾಡಿ
ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು, ಅಯುರ್ವೇದದ ಒಂದು ಅವಿಬಾಜ್ಯ ಅಂಗವಾಗಿದೆ ಮತ್ತು ಇವು ಮನುಶ್ಯನ ಮಾನಸಿಕ ಹಾಗು ಶಾರೀರಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು. ಹಾಗೆಯೇ ಪಂಚಕೋಷಗಳು ಮತ್ತು ಅದರ ಪ್ರಾಮಖ್ಯತೆಯನ್ನು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ರವರು ಮಾತನಾಡಿ
ಸ್ವಸ್ಥ ಮತ್ತು ದೇಹಕ್ಕೆ ರೋಗಗಳು ಬಾರದೆ ಇರುವುದನ್ನು ಪ್ರತಿ ದಿನವು ಯೋಗಭ್ಯಾಸ ಮಾಡುವುದರಿಂದ ಲಭಿಸುತ್ತದೆ ಎಂದು ಹೇಳಿದರು.
ಕಾರ್ಯದರ್ಶಿಗಳಾದ ಶ್ರೀ. ಭರತ್. ಎಲ್ ರವರು ಈ ತರಹದ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ವಿಧ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಉತ್ತಮವಾದ ವೇದಿಕೆಯಗುತ್ತದೆ ಮತ್ತು ಇನ್ನು ಇಂತಹ ಹವಾರು ಕಾರ್ಯಕ್ರಮಗಳನ್ನು ಬರುವ ದಿನಗಳಲ್ಲಿ ಹಮ್ಮಿಕೊಳ್ಳಲು ಸೂಚಿಸಿದರು.
ಪ್ರೊಫೆಸರ್ ಡಾ ನವೀನ್ ಬಿ ಸಜ್ಜನ್ ರವರು ಕಾಲೆಜಿನಲ್ಲಿ ಪ್ರತಿದಿನ ನಡೆಯುವ ಯೋಗಾಭ್ಯಾಸ ಮತ್ತು ರೋಗಿಗಳಿಗೆ ದೊರಕುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಪ್ರಶಾಂತ್. ಎಂ. ಎಸ್., ಪ್ರಾಂಶುಪಾಲರು ಅಮೃತ ಆಯುರ್ವೇದ ಕಾಲೇಜ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಿತ್ಯ ಯೋಗಭ್ಯಾಸವನ್ನು ಮಾಡುವುದರಿಂದ ಆಗುವ ಪ್ರಯೋಜನಗಳು, ದೇಹ ದಂಡನೆಯನ್ನು ಮಾಡುವ ವಿಧಿ, ಅಂತಕರಣ ಶುದ್ದಿ ಹಾಗು ಪ್ರಾಣಾಯಾಮ ಮಾಡುವುದರಿಂದ ಆಗುವ ಲಾಭಗಳನ್ನು ತಿಳಿಸಿದರು.
ನಂತರ ಸ್ಪರ್ಧೆಯಲ್ಲಿ ಗೆದ್ದಂತಹ ವಿಧ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಯೋಗ ಚಾಂಪಿಯಶಿಪ್ ಶೀಲ್ಡ್ ನ್ನು ಅಮೃತ ಆಯುರ್ವೇದ ಮೆಡಿಕಲ್ ಕಾಲೇಜಿನ ವಿಧ್ಯಾರ್ಥಿಗಳು ಪಡೆದುಕೊಂಡರು.
ಸ್ವಾಗತ ಭಾಷಣವನ್ನು ಯೋಗ ಗುರುಗಳಾದ ಶ್ರೀ. ತಿಪ್ಪೇಸ್ವಾಮಿ. ಎಮ್ ರವರು ಮಾಡಿದರು ಹಾಗೂ ವಂದನಾರ್ಪಣೆಯನ್ನು ಡಾ. ಚೈತ್ರ ರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಭೋಧಕ ಮತ್ತು ಭೋಧಕೇತರ ವರ್ಗದವರು ಉಪ ಸ್ಥಿತಿಯಲ್ಲಿದ್ದರು…

ವರದಿ.ಎಂ, ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend