ಕೂಡ್ಲಿಗಿ ತಾಲ್ಲೂಕಿನಲ್ಲಿ ಪಾಳೆಯಗಾರರ ಆಳ್ವಿಕೆಯಿದ್ದುದರಿಂದ ಅನೇಕ ಐತಿಹಾಸಿಕ ಕುರುಹುಗಳು ಇಂದಿಗೂ ಕಾಣಸಿಗುತ್ತವೆ…!!!

Listen to this article

ಕೂಡ್ಲಿಗಿ: ಕೂಡ್ಲಿಗಿ ತಾಲ್ಲೂಕಿನಲ್ಲಿ ಪಾಳೆಯಗಾರರ ಆಳ್ವಿಕೆಯಿದ್ದುದರಿಂದ ಅನೇಕ ಐತಿಹಾಸಿಕ ಕುರುಹುಗಳು ಇಂದಿಗೂ ಕಾಣಸಿಗುತ್ತವೆ. ಕೆಲವು ಅಲಕ್ಷಿತವಾಗಿದ್ದರೂ ಸುಸ್ಥಿತಿಯಲ್ಲಿವೆ. ಸುಸ್ಥಿತಿಯಲ್ಲಿರುವ ವಿಶಿಷ್ಟವಾದ ಬುರುಜೊಂದು ತಾಲ್ಲೂಕಿನ ಗುಂಡುಮುಣುಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಓಬಳಶೆಟ್ಟಿಹಳ್ಳಿಯಲ್ಲಿದೆ.

ಓಬಳಶೆಟ್ಟಿಹಳ್ಳಿ ಪುಟ್ಟ ಗ್ರಾಮ. ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ ದೂರವಿರುವ ಗ್ರಾಮದಲ್ಲಿ ಅನೇಕ ಐತಿಹಾಸಿಕ ಕುರುಹುಗಳಿವೆ. ಇವುಗಳಲ್ಲಿ ಇಂದಿಗೂ ಸುಸ್ಥಿತಿಯಲ್ಲಿರುವ ಕೋಟೆಯ ಬುರುಜು. ಇದರ ವೈಶಿಷ್ಟ್ಯವೆಂದರೆ ಬುರುಜಿನ ಒಳಗೆ ಹೋಗಲು ಎತ್ತರದಲ್ಲಿ ಪುಟ್ಟ ಬಾಗಿಲೊಂದನ್ನು ನಿರ್ಮಿಸಲಾಗಿದೆ.

ಈ ಬಾಗಿಲೊಳಗೆ ಸೇರಿ ಒಳಗಿನಿಂದ ಬಾಗಿಲನ್ನು ಭದ್ರಪಡಿಸಿಕೊಂಡರೆ ಯಾವ ಶತ್ರುಗಳೂ ಏನೂ ಮಾಡಲಾರರು ಅಂತಹ ವಿಶೇಷ ರೀತಿಯಲ್ಲಿ ಬುರುಜನ್ನು ನಿರ್ಮಿಸಲಾಗಿದೆ. ಆದರೆ ಈಗ ಕಟ್ಟಿಗೆಯ ಬಾಗಿಲಿಲ್ಲ. ಅದರ ಸುತ್ತಲ ಚೌಕಟ್ಟನ್ನು ಮಾತ್ರ ನೋಡಬಹುದಾಗಿದೆ.

ಸುಮಾರು 30 ಅಡಿ ಎತ್ತರವಿರುವ ಬುರುಜನ್ನು ಕಲ್ಲುಗಳಿಂದ ಸುಭದ್ರವಾಗಿ, ಸುಂದರವಾಗಿ ನಿರ್ಮಿಸಲಾಗಿದ್ದು, ಇದರೊಳಗೆ ಯಾರೂ ನುಸುಳಲು ಸಾಧ್ಯವಿಲ್ಲ. ಬುರುಜಿನ ಒಳಗೆ ಈಗ ಸಾಕಷ್ಟು ಗಿಡಮರಗಳು ಬೆಳೆದಿರುವು ದರಿಂದ ಸಂಪೂರ್ಣವಾಗಿ ಒಳಗೇನಿದೆ ಎಂಬುದು ತಿಳಿಯುವುದಿಲ್ಲ. ಆದರೂ ಭದ್ರವಾಗಿರುವ ಈ ಬುರುಜಿನ ಸುತ್ತಲೂ ಕೋವಿಕಿಂಡಿಗಳಿದ್ದು, ಒಳಗಿ ನಿಂದಲೇ ಬಂದೂಕಿನ ಮೂಲಕ ಶತ್ರುಗಳನ್ನು ಸುಲಭವಾಗಿ ಹೊಡೆದು ರುಳಿಸುವಂತೆ ನಿರ್ಮಾಣ ಮಾಡ ಲಾಗಿದೆ.

ಗ್ರಾಮದ ಸುತ್ತಲೂ ಇದೇ ರೀತಿಯ ಬುರುಜುಗಳು, ಕೋಟೆ ಗೋಡೆ ಇದ್ದಿರಬಹುದಾಗಿದೆ. ಆದರೆ ಅದರ ಯಾವ ಕುರುಹುಗಳೂ ಈಗ ಸಿಗುವುದಿಲ್ಲ. ಏಕೆಂದರೆ ಬುರುಜಿನ ಪಕ್ಕದಲ್ಲಿಯೇ ದೇವತೆಯ ದೇವಸ್ಥಾನ ವೊಂದಿದ್ದು, ಗ್ರಾಮದೊಳಗೆ ಗುಂಡೋ ಬಳೇಶ್ವರ ಎಂಬ ದೇವಸ್ಥಾನವಿದೆ. ಇಲ್ಲಿಯೂ ಐತಿಹಾಸಿಕ ಕುರುಹು ಗಳಿರುವ ದೇವರಿದ್ದು, ಈ ಕುರಿತು ಸ್ಥಳೀಯರು ಸ್ಥಳ ಮಹಿಮೆಯನ್ನು ತಿಳಿಸುತ್ತಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ಗ್ರಾಮದ ಬುರುಜು ಮಹತ್ವವನ್ನು ಪಡೆಯುತ್ತದೆ. ಬುರುಜಿನ ಸುತ್ತಲೂ ಗಿಡಮರ, ಪೊದೆಗಳು ಬೆಳೆದಿದ್ದು, ಅವನ್ನು ಸ್ವಚ್ಛಗೊಳಿಸಿದಲ್ಲಿ, ತಾಲ್ಲೂಕಿನಲ್ಲಿಯೇ ಅಪರೂಪವೆನಿಸುವ ಈ ಬುರುಜಿನ ಸೌಂದರ್ಯವನ್ನು ಎಲ್ಲರೂ ವೀಕ್ಷಿಸಬಹುದಾಗಿದೆ, ಅಲ್ಲದೆ ಸಂರಕ್ಷಿಸುವುದೂ ಸುಲಭವಾಗುತ್ತದೆ.

ವಲಸೆಯಲ್ಲಿರುವ ಬುರುಜನ್ನು ಅಲ್ಲಲ್ಲಿ ಮಧ್ಯೆ ಮರದ ದಿಮ್ಮಿಗಳನ್ನು ಬಳಸಿ ನಿರ್ಮಿಸಲಾಗಿದೆ. ಈಗಲೂ ವಲಸೆಯ ಬುರುಜಿನಲ್ಲಿ ಅವುಗಳನ್ನು ಸ್ಪಷ್ಟವಾಗಿಯೇ ನೋಡಬಹುದಾಗಿದೆ. ಈ ರೀತಿಯಲ್ಲಿ ಓಬಳಶೆಟ್ಟಿಹಳ್ಳಿ ಹಾಗೂ ವಲಸೆಯ ಕೋಟೆ ಬುರುಜುಗಳು ವಿಶಿಷ್ಟವೆನಿಸುತ್ತವೆ.

ತಾಲ್ಲೂಕಿನಲ್ಲಿ ಇದೇ ರೀತಿಯಲ್ಲಿ ವಲಸೆ, ಜರಿಮಲೆ, ಗುಡೇಕೋಟೆ ಮುಂತಾದ ಸ್ಥಳಗಳಲ್ಲಿ ಕೋಟೆ, ಬುರುಜುಗಳಿರುವ, ಐತಿಹಾಸಿಕ ಕುರುಹುಗಳಿರುವ ಪ್ರದೇಶಗಳಿವೆ. ಪ್ರಾಚ್ಯ ವಸ್ತು ಸಂಶೋಧನ ಇಲಾಖೆಯವರು ಹಾಗೂ ಸಂಶೋಧಕರು ಸಂಶೋಧನೆ ನಡೆಸಿದಲ್ಲಿ ಹೆಚ್ಚಿನ ಮಾಹಿತಿ ಬೆಳಕಿಗೆ ಬರುವ ಸಾಧ್ಯತೆಗಳಿವೆ…

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend