ಕೂಡ್ಲಿಗಿ:ತಾಲೂಕಿನಾಧ್ಯಂತ ವಿಶ್ವ ಪರಿಸರ ದಿನಾಚರಣೆ…!!!

Listen to this article

ಕೂಡ್ಲಿಗಿ:ತಾಲೂಕಿನಾಧ್ಯಂತ ವಿಶ್ವ ಪರಿಸರ ದಿನಾಚರಣೆ-ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ಜೂ5ರಂದು ವಿಶ್ವ ಪರಿಸರ ದಿನ ಪ್ರಯುಕ್ತ ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು. ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಪರಿಸರ ದಿನಾಚರಣೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ(ಹೊಸಹಳ್ಳಿ)ಲ್ಲಿ, ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲರಾದ ಶೋಭರವರ ನೇತೃತ್ವದಲ್ಲಿ, ವಸತಿ ಶಾಲೆ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವಸತಿ ಶಾಲೆಯ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು. ವಸತಿ ಶಾಲೆ ಮೇಲ್ವಿಚಾರಕರಾದ ಶ್ಯಾಮ್ ಸುಂದರ್, ಶಿಕ್ಷಕಿಯರಾದ ಛಾಯಾ, ಸುಧಾ, ಅನುಲಾ, ಶೋಭಾ, ಶಾಲಿನಿ ಹಾಗೂ ವಿದ್ಯಾರ್ಥಿಗಳು. ಸಿಬ್ಬಂದಿಯವರಾದ ಗೀತಮ್ಮ, ಕೆ.ರೇಣುಕಮ್ಮ, ಷೇಶಮ್ಮ, ಪ್ರಕಾಶ, ಚಿರಂಜೀವಿ, ಶರಣಪ್ಪ, ಸಂತೋಷ ಮುಂತಾದವರಿದ್ದರು. *ಮೊರಬ ಗ್ರ‍ಾ ಪಂ ವ್ಯಾಪ್ತಿಯಲ್ಲಿ ಆಚರಣೆ*- ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಮೊರಬ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ , ಹಾಗೂ ವ್ತಾಪ್ತಿಯ ಮೊರಬನಹಳ್ಳಿ, ಮೊರಬ ಗೊಲರಹಟ್ಟಿ ಶಾಲೆಗಳಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ, ಅಧ್ಯಕ್ಷರಾದ ವಿ.ದುರುಗಮ್ಮ ಹಾಗೂ ಉಪಾಧ್ಯಕ್ಷರಾದ ಕರಿಯಪ್ಪ. ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆ ಆಚರಿಸಿದರು. *ನ್ಯಾಯಾಲಯ ಹಾಗೂ ಅರಣ್ಯ ಇಲಾಖೆಯಿಂದ ಪರಿಸರ ಆಚರಣೆ*- ನ್ಯಾಯಾಲಯ ಇಲಾಖೆ, ವಕೀಲರ ಸಂಘ. ಕಾನೂನು ಸೇವಾ ಸಮಿತಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ. ತಾಲೂಕಿನ ಕಕ್ಕುಪ್ಪಿ ಅರಣ್ಯ ಪ್ರದೇಶದಲ್ಲಿ, ಪರಿಸರ ದಿನಾಚರಣೆ ಆಚರಿಸಲಾಯಿತು. ಹಿರಿಯ ಶ್ರೆೇಣಿ ನ್ಯಾಯಾಧೀಶರಾದ ಜೆ.ಯೋಗೇಶ, ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಸಿ.ಮಹಾಲಕ್ಷ್ಮೀ ಉಪಸ್ಥಿತಿಯಲ್ಲಿ. ವಲಯ ಅರಣ್ಯಾಧಿಕಾರಿ, ಜಿ.ಎಸ್.ಸಂದೀಪ್ ನಾಯಕ ಅಧ್ಯಕ್ಷತೆಯಲ್ಲಿ ಆವರಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಮಲ್ಲಿಕಾರ್ಜುನಯ್ಯ, ಹಾಗೂ ಉಪಾಧ್ಯಕ್ಷರಾದ ಹೆಚ್.ವೆಂಕಟೇಶ್ ಮತ್ತು ಕಾರ್ಯದರ್ಶಿ ಡಿ.ಕೆ.ಬಿ ರಾಜು. ಅಪರ ಸರ್ಕಾರಿ ವಕೀಲರಾದ ಕೆ.ಜಿ.ಶಿವಪ್ರಕಾಶ್. ಸಹಾಯಕ ಸರ್ಕಾರಿ ಅಭಿಯೋಜಕರಾದ ವೈ.ಶಿಲ್ಪ ಸೇರಿದಂತೆ ವಕೀಲರ ಸಂಘದ ಪಾಧಿಕಾರಿಗಳು ಸದಸ್ಯರು. ಕಾನೂನು ಸೇವಾ ಸಮತಿ ಸಿಬ್ಬಂದಿ, ಹಾಗೂ ಅರಣ್ಯ ಇಲಾಖಾ ಸಿಬ್ಬಂದಿ ಇದ್ದರು.ಕೂಡ್ಲಿಗಿ ಪಟ್ಟಣದ ಎಸ್.ಬಿ.ಟಿ.ಎಂ ಪ್ರೌಢಶಾಲಾ ಆವರಣದಲ್ಲಿ, ಸಸಿ ನಾಟಿ ಮಾಡುವ ಮೂಲಕ. ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ, ವೈ.ರವಿಕುಮಾರವರ ಅಧ್ಯಕ್ಷತೆಯಲ್ಲಿ.
*ಸಾಮಾಜಿಕ ಅರಣ್ಯ ಇಲಾಖೆಯಿಂದ ಪರಿಸರ ದಿನಾಚರಣೆ*- ಎಸ್.ಬಿ.ಟಿ.ಎಮ್.ಶಾಲೆ, ತಾಲೂಕು ಪಂಚಾಯ್ತಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ. ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸಾಮಾಜಿಕ ಅರಣ್ಯ ಇಲಾಖೆ RFO ಶ್ರೀಮತಿ ಕೆ.ಜೆ.ಲತಾ, ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಶಾಲೆಯ ಮುಖ್ಯ ಶಿಕ್ಷಕ ಎಂ.ಬಸವರಾಜ್ ಎಂ, BEd ತರಬೇತಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ತಾಲೂಕ ಐ.ಇ.ಸಿ ಸಂಯೋಜಕರು ಹಾಜರಿದ್ದರು…

ವಿ, ಜಿ, ವೃಷಬೇಂದ್ರಿ.ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend