ಕೃಷಿಕ ಸಮಾಜದಿಂದ ಮುಂಗಾರು ಪೂರ್ವಭಾವಿ ಸಭೆ…!!!

Listen to this article

ಕೂಡ್ಲಿಗಿ ತಾಲೂಕು ಕೃಷಿ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ಕೃಷಿಕ ಸಮಾಜದ ಸಭೆ ಜರುಗಿಸಿ ಈ ಮುಂಗಾರು ಹಂಗಾಮಿಗೆ ರಸಗೊಬ್ಬರ ಬೀಜ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಲು ಈ ದಿನ ಕೃಷಿಕ ಸಮಾಜದ ಸಭೆಯಲ್ಲಿ ತೀರ್ಮಾನಿಸಲಾಯಿತು ಕೃಷಿ ಅಧಿಕಾರಿಗಳಾದ ಸುನಿಲ್ ಅವರು ಮಾತನಾಡಿ ಈ ಬಾರಿ ಮುಂಗಾರು ಬೇಗನೆ ಕಾಲಿಟ್ಟಿದ್ದು ನಮ್ಮ ತಾಲೂಕಿನ ಅತ್ಯಂತ ಅತಿ ಹೆಚ್ಚು ಮಳೆಯಾಗಿದೆ ಆದ್ದರಿಂದ ಜೋಳದ ಬೀಜ ಮೆಕ್ಕೆಜೋಳ ತೊಗರಿ ಶೇಂಗಾ ಎಲ್ಲಾ ರೀತಿಯ ಬೀಜಗಳನ್ನು ರೈತರಿಗೆ ತೊಂದರೆಯಾಗದಂತೆ ದಾಸ್ತಾನು ಮಾಡಲಾಗಿದೆ ರೈತರು ನಮ್ಮ ಇಲಾಖೆಯಿಂದ ಸಿಗುವ ಬೀಜಗಳನ್ನು ಸಹಾಯಧನದಲ್ಲಿ ಖರೀದಿ ಮಾಡಿ ಸಕಾಲಕ್ಕೆ ಬಿತ್ತನೆ ಮಾಡಲು ರೈತರಿಗೆ ಕರೆ ನೀಡಿದರು ಅದೇ ರೀತಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ವಿಶ್ವನಾಥ ರೇಷ್ಮೆ ಇಲಾಖೆಯ ಅಧಿಕಾರಿಗಳಾದ ಲಕ್ಷ್ಮಿ ನಾರಾಯಣ ಇವರು ಕೂಡ ಸಭೆಯಲ್ಲಿ ಭಾಗವಹಿಸಿ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ತರಕಾರಿ ಬೀಜಗಳ ಕಿಟ್ಟನ್ನು ಉಚಿತವಾಗಿ ವಿತರಿಸಲಾಗುವುದು ಎಂದರು ಮುತ್ತು ಅನೇಕ ನುಗ್ಗೆ ಬಾಳೆ ಪಪ್ಪಾಯಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ನರೇಗಾ ದಡಿ ಸಹಾಯಧನವನ್ನು ವಿತರಿಸಲಾಗುವುದು ಎಂದರು ರೇಷ್ಮೆ ಬೆಳೆಗಾರರಿಗೂ ಕೂಡ ಒಂದು ಎಕರೆ ನಾಟಿ ಮಾಡಿದರೆ ಅದಕ್ಕೂ ಕೂಡ ಸಹಾಯಧನ ವಿತರಿಸಲಾಗುವುದು ಎಂದರು ಕೃಷಿಕ ಸಮಾಜದ ನಿರ್ದೇಶಕರಾದ ಎಮ್ ಬಸವರಾಜ್ ಅವರು ಮಾತನಾಡಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಾಲಕ್ಕೆ ಸರಿಯಾಗಿ ಬೀಜ ಮತ್ತು ಗೊಬ್ಬರಗಳನ್ನು ವಿತರಣೆ ಮಾಡಬೇಕೆಂದು ಹೇಳಿದರು.

ಅದೇ ರೀತಿಯಾಗಿ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ದನಗೌಡ ಇವರು ಮಾತನಾಡಿ ಕಾಳ ಸಂತೆಯಲ್ಲಿ ಗೊಬ್ಬರ ಬೀಜ ಮಾರಾಟ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು ಕೃಷಿಕ ಸಮಾಜದ ಉಪಾಧ್ಯಕ್ಷರಾದ ಜಂಬಣ್ಣ ಇವರು ಮಾತನಾಡಿ ನಾವು ನಮ್ಮ ಎಫ್ ಸಿ ಓ ಮುಖಾಂತರ ಗೊಬ್ಬರವನ್ನು ವಿತರಣೆ ಮಾಡುತ್ತಿದ್ದೇವೆ ನಮ್ಮ ತಾಲೂಕಿನಲ್ಲಿರುವ ಎಲ್ಲಾ ಎಫ್. ಪಿ. ಓ. ಗಳು ಗೊಬ್ಬರಗಳನ್ನು ತರಿಸಿಕೊಂಡು ರೈತರಿಗೆ ಆಯಾ ಭಾಗದಲ್ಲಿ ವಿತರಣೆ ಮಾಡಿದರೆ ರೈತರು ಸಿಟಿಗೆ ಬರುವುದನ್ನು ತಪ್ಪಿಸಬಹುದು ಎಂದರು ಮತ್ತು ವೃತ ಖರ್ಚಾಗುವುದನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು ಆತ್ಮ ಯೋಜನೆಯ ಶ್ರವಣ್ ಕುಮಾರ್ ಸರ್ ಅವರು ಮಾತನಾಡಿ ಇಲಾಖೆಯಿಂದ ಸಿಗುವ ಎಲ್ಲಾ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಂಡು ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಸಮಗ್ರ ಕೃಷಿಯನ್ನು ಮಾಡಿ ಹೆಚ್ಚು ಲಾಭ ಗಳಿಸಿ ಕೊಳ್ಳಬಹುದು ಒಂದೇ ಬೆಳೆಗೆ ಮಾರುಹೋಗದೆ ವಿವಿಧ ಬೆಳೆಗಳನ್ನು ಮತ್ತು ಅಕ್ಕಡಿ ಗಳನ್ನು ಹಾಕುವುದರ ಮುಖಾಂತರ ರೈತರು ಲಾಭಗಳಿಸಬಹುದು ಎಂದರು ಕೃಷ್ಕ ಸಮಾಜದ ಕೊಟ್ರೇಶಪ್ಪ ಚಂದ್ರಯ್ಯ ಸ್ವಾಮಿ ಸಿದ್ದಪ್ಪ ಲಾಯರ್ ಲಕ್ಷ್ಮಿ ದೇವಿ ಸದಸ್ಯರು ಭಾಗವಹಿಸಿದ್ದರು…

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend