ಸಿಂದಗಿ ಘಟನೆ ಖಂಡನೀಯ: ಪೊಲೀಸ್ ಗೂಂಡಾ ಗಿರಿಗೆ ದಿಕ್ಕಾರ..ವಂದೇ ಮಾತರಂ ವಿ.ಜಿ.ವೃಷಭೇಂದ್ರ ಆಕ್ರೋಶ…!!!

Listen to this article

ಸಿಂದಗಿ ಘಟನೆ ಖಂಡನೀಯ: ಪೊಲೀಸ್ ಗೂಂಡಾ ಗಿರಿಗೆ ದಿಕ್ಕಾರ..ವಂದೇ ಮಾತರಂ ವಿ.ಜಿ.ವೃಷಭೇಂದ್ರ ಆಕ್ರೋಶ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಪೊಲೀಸ್ ರು ಕಾನೂನು ಸುವ್ಯವಸ್ಥೆ ಕಾಪಾಡೋರು, ಅವರೇ ಅಕ್ರಮ ಅಪರಾಧ ಕಾನೂನು ಬಾಹೀರ ಚಟುವಟಿಕೆಗಳ ವಾರಸುದಾರರಾದರೆ ಯಾರು.!? ಗತಿ. ಇಂತಹ ಭ್ರಷ್ಟ ಅಧಿಕಾರಿ ಹಾಗೂ ಭ್ರಷ್ಟ ಸಿಬ್ಬಂದಿಗಳ ವಿರುದ್ಧ, ಸಾಮಾಜಿಕ ಕಳ ಕಳಿಯುಳ್ಳ ಸಿಂದಗಿಯ ಹೊಸದಿಗಂತ ಪತ್ರಕರ್ತ ಗುಂಡು ಕುಲಕರ್ಣಿ ಮೇಲೆ. ಅಲ್ಲಿಯ ಸ್ಥಳೀಯ ಠಾಣಾ ಪೊಲೀಸ್ ಸಬ್ ಇನ್ಸಪೆಕ್ಟರ್, ಹಾಗೂ ಕೆಲ ಸಿಬ್ಬಂದಿ ದುಂಡಾವರ್ತನೆ ತೋರಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ. ಇದು ಪ್ರಜ‍ಪ್ರಭುತ್ವದ ಕಗ್ಗೊಲೆಯಾಗಿದೆ, ಘಟನೆಯನ್ನ ತೀವ್ರವಾಗಿ ತಾವು ಖಂಡಿಸುತ್ತಿರುವುದಾಗಿ ಪತ್ರಕರ್ತ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಹೇಳಿಕೆ ನೀಡಿದ್ದಾರೆ. ಅವರು ಮಾತನಾಡಿ ಘಟನೆಯನ್ನ ವಿವರಿಸಿದರು, ಸಿಂದಗಿ ತಾಲೂಕಿನ ಹೊಸದಿಗಂತ ತಾಲೂಕು ವರದಿಗಾರ ಗುಂಡು ಕುಲಕರ್ಣಿರವರು. ತಾಲೂಕಿನ ಹಲವೆಡೆಗಳಲ್ಲಿ ಅಕ್ರಮ ಮರಳು ದಂಧೆ ಜರುಗುತ್ತಿರುವುದರ ಕುರಿತಾದ, ವಸ್ಥು ನಿಷ್ಠೆಯ ವರದಿಯನ್ನು ತಮ್ಮ ಪತ್ರಿಕೆಗೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಸಿಂದಗಿ ಠಾಣೆಯ ಸಿಪಿಐ ಪಿಎಸ್ಐ ಹಾಗೂ ಸಿಬ್ಬಂದಿಯಗಳು, ವರದಿಗಾರ ಗುಂಡು ಕುಲಕರ್ಣಿಯವರನ್ನು ರಾತ್ರೋ ರಾತ್ರಿ ಅಪಹರಣ ಮಾಡಿ. ವರದಿ ಗಾರನ ಮೇಲೆ ಗೂಂಡಾಗಳಂತೆ ವರ್ತಿಸಿ ಅವಾಶ್ಚ ಶಬ್ದಗಳ ಮೂಲಕ ನಿಂದಿಸಿ ಪಿಸ್ತೂಲ್ ತೋರಿಸಿ ದಮಕಿ ಹಾಕೋ ಮೂಲಕ, ಜೀವ ಬೆಧರಿಕೆ ಹಾಕಿ ದುಂಡಾವರ್ತನೆ ತೋರಿರುವುದಾಗಿ ತಿಳಿದು ಬಂದಿದೆ. ಕಾನೂನು ಸುವ್ಯವಸ್ಥೆ ಶಾಂತಿ ಪಾಲನೆ, ಮಾಡಬೇಕಾಗಿರುವ ಪೊಲೀಸ್ ಇಲಾಖಾಧಿಕಾರಿ ಹಾಗೂ ಸಿಬ್ಬಂದಿ, ಅಕ್ರಮ ಕೋರರೊಡನೆ ಕೈಜೋಡಿಸಿದರೆ ಹೇಗೆ.!?. ಅದನ್ನ ಖಂಡಿಸಿ ನಿಷ್ಠಾವಂತ ವರದಿಗಾರರಾದ, ಗುಂಡು ಕುಲಕರ್ಣಿಯವರು ವಸ್ಥು ನಿಷ್ಠ ವರದಿ ಮಾಡಿದ್ದಕ್ಕಾಗಿ. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ಅಕ್ರಮ ಕೋರರ ಚೇಲಾಗಳಂತೆ ವರ್ತಿಸಿರುವುದು ನಾಚಿಕೆಗೇಡಿತನದ ಸಂಕೇತವಾಗಿದೆ. ಪ್ರಜಾ ಪ್ರಭುತ್ವದ ಬಹು ಮುಖ್ಯ ಅಂಗವಾದ ಪತ್ರಿಕಾರಂಗದ ನಿಷ್ಠಾವಂತ ಪ್ರತಿನಿಧಿಯ ಮೇಲೆ, ಕಾನೂನು ಪರಿಪಾಲಕರೇ ಗೂಂಡಾಗಳಂತೆ ವರ್ತಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ, ಜಿಲ್ಲಾಢಳಿತ ಕ್ರಮ ಜರುಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿರುವುದಾಗಿ ಅವರು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ತಪ್ಪಿತಸ್ಥರ ವಿರುದ್ಧ, ಶಿಸ್ಥು ಕ್ರಮ ಜರುಗಿಸಿ ಕೂಡಲೇ ಅಮಾನತ್ತು ಆದೇಶ ನೀಡಬೇಕೆಂದು ದೂರು ಸಲ್ಲಿಸಿ ಹಕ್ಕೊತ್ತಾಯ ಮಾಡಲಾಗಿದೆ. ಸರ್ಕಾರ ಪತ್ರಕರ್ತರ ರಕ್ಷಣೆಗೆ ಕಾಯ್ದೆಯನ್ನ ಜಾರಿ ತರಲಾಗಿದೆಯಾದರೂ, ಅದು ಸಮರ್ಪಕವಾಗಿ ಅನುಷ್ಠಾನ ಆಗಬೇಕಿದೆ ಎಂದರು.,.

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend