ಕೂಡ್ಲಿಗಿ:ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ವಿದ್ಯಾಗೆ-SSLCಯಲ್ಲಿ 561 (89.76%)ಅಂಕಗಳು…!!!

Listen to this article

ಕೂಡ್ಲಿಗಿ:ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ವಿದ್ಯಾಗೆ-SSLCಯಲ್ಲಿ 561 (89.76%)ಅಂಕಗಳು…ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ, ವಿದ್ಯಾ ತಂದೆ ರುದ್ರಪ್ಪ ರವರು. 2023-2024ನೇ ಸಾಲಿನ SSLC ಪರೀಕ್ಷೆಯಲ್ಲಿ. ಒಟ್ಟು 561‍ (ಶೇ89.76ರಷ್ಟು)ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಅವರು ಈಗ ಚಿತ್ರದುರ್ಗ ಕಾಲೇಜೊಂದರಲ್ಲಿ, PUC ವಿಜ್ಞಾನ ವಿಭಾಗದಲ್ಲಿ(PCMB) ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಮ್ಮ ಮಗಳ ಸಾಧನೆಗೆ ಮುಖ್ಯ ಕಾರಣ, ಅವಳ ನಿರಂತರ ಅಧ್ಯಯನದ ಶ್ರಮವಾಗಿದ್ದು. ಮತ್ತು ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭರವರು, ಹಾಗೂ ಶಿಕ್ಷಕರೆಲ್ಲರ ಪಾತ್ರ ಪ್ರಮುಖದ್ದಾಗಿದೆ. ಅದಕ್ಕಾಗಿ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ಮತ್ತು ಸರ್ವ ಸಿಬ್ಬಂದಿಗೆ, ತಾವು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುವುದಾಗಿ ರುದ್ರಪ್ಪ ತಿಳಿಸಿದ್ದಾರೆ. ‍ವಿದ್ಯಾರವರು ವೈಧ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿ, ವಿಜ್ಞಾನ ವಿಭಾಗದಲ್ಲಿ ಸೇವೆ ಸಲ್ಲಿಸುವ ಗುರಿ ಹೊಂದಿರುವುದಾಗಿ ವಿದ್ಯಾರವರ ತಂದೆ ರುದ್ರಪ್ಪ ಹಾಗೂ ತಾಯಿ ಬಸಮ್ಮ ತಿಳಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿ ವಿದ್ಯಾಳ ತಂದೆ ರುದ್ರಪ್ಪರವರು, ಸಂಡೂರು ತಾಲೂಕು ವಡೇರಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ವಿದ್ಯಾಳ ತಾಯಿ ಗೃಹಿಣಿ ಇದ್ದು, ವಿದ್ಯಾಳ ಇಬ್ಬರು ಸಹೋದರಿಯರು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾಳು ವಿದ್ಯಾಭ್ಯಾಸದಲ್ಲಿ ಮೊದಲಿನಿಂದಲೂ ಮುಂದು, ಹಾಗೂ ಪ್ರಬಂಧ ಬರೆಯುದು ಸೇರಿದಂತೆ ಪಠ್ಯತರ ಚಟುವಟಿಕೆಗಳಲ್ಲಿ. ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಾಗೂ ಹಲವು ಸ್ಪರ್ಧೆಗಳಲ್ಲಿ, ಭಾಗವಹಿಸಿ ಗುರುತಿಸಿಕೊಂಡಿದ್ದಾರೆ ಎಂದು. ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ, ಶ್ರೀಮತಿ ಶೋಭ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿ ವಿದ್ಯಾರವರು ನಮ್ಮ ವಸತಿ ಶಾಲೆಯ ಆದರ್ಶ ಹಾಗೂ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದು, ಅವರು ಉನ್ನತ ಪದವಿ ಗಳನ್ನು ಪಡೆಯಲಿ. ದೊಡ್ಡ ಹುದ್ದೆಯನ್ನ ಅಲಂಕರಿಸಿ ನಾಡ ಸೇವೆ ಮಾಡಲಿ ಎಂದು, ವಸತಿ ಶಾಲೆಯ ಶಿಕ್ಷಕ ವೃಂಧ ಹಾಗೂ ಸಿಬ್ಬಂದಿ ವಿದ್ಯಾರ್ಥಿನಿ ವಿದ್ಯಾ ರವರಿಗೆ ಈ ಮೂಲಕ ಅಭಿನಂದಿಸಿ ಹಾರೈಸಿದ್ದಾರೆ…

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend