ಹೂವಿನಹಡಗಲಿ:ಶ್ರೀಗ್ರಾಮದೇವತೆ ಊರಮ್ಮದೇವಿ ಉತ್ಸವ…!!!

Listen to this article

ಹೂವಿನಹಡಗಲಿ:ಶ್ರೀಗ್ರಾಮದೇವತೆ ಊರಮ್ಮದೇವಿ ಉತ್ಸವ – ವಿಜಯನಗರ ಜಿಲ್ಲೆ ಹೂವಿನ ಹಡಗಲಿ:ಪಟ್ಟಣದ ಗ್ರಾಮ ದೇವತೆ ಶ್ರೀಊರಮ್ಮ ದೇವಿಯ ರಥೊತ್ಸವ, ಗುರುವಾರ ವಿಜೃಂಭಣೆಯಿಂದ ಜರುಗಿತು. ಧಾರ್ಮಿಕ ನಿಯಮಾನುಸಾರ ದೇವಿ ಚೌತಿ ಮನೆಯ ಮುಂಭಾಗದಲ್ಲಿ, ಎಲ್ಲಾ ಕಾರ್ಯಕ್ರಮಗಳನ್ನು ಜರುಗಿಸಿದ ನಂತರ ದೇವಿಯ ಉತ್ಸವಕ್ಕೆ ಚಾಲನೆ ನೀಡಲ‍ಾಯಿತು. ಸಂಪ್ರದಾಯದಂತೆ ಬೆನ್ನುಗೋಡೆಯಿಂದ ಪಟ್ಟಣದ ಗೌಡರ ಮನೆ, ಬಣಕಾರ, ಶಾನಬೋಗರ ಮನೆ, ಹಾಗೂ ಪ್ರಮುಖ ದೇವಾಲಯಗಳಿಗೆ ತೆರಳಿದ ದೇವಿ ಉತ್ಸವ ಮೂರ್ತಿಗೆ ಉಡಿ ತುಂಬಲಾಯಿತು. ಪಟ್ಟಣದ ಗೋಣಿ ಬಸವೇಶ್ವರ ದೇವಸ್ಥಾನದಿಂದ, ವಾಲಿಯರ ಓಣಿಯ ಮೂಲಕ ಬಂದ ದೇವಿ ಉತ್ಸವ ಮೂರ್ತಿಯು ಚೌತಿ ಮನೆಯ ಕಟ್ಟೆ ಬಳಿ ರಥಾರೋಹಣ ಮಾಡಿತು. ವಿವಿಧ ಜನಪದ ಕಲಾ ತಂಡಗಳು, ಉತ್ಸವದಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದವು. ಪದ್ದತಿಯಂತೆ ದೇವಿಯ ಮೂರ್ತಿಯನ್ನು, ಪಟ್ಟಣದ ಪೊಲೀಸ್ ಠಾಣೆಗೆ ಕರೆತಂದು ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀಊರಮ್ಮ ದೇವಿಯ ಪಾದಗಟ್ಟೆವರೆಗೆ, ಉತ್ಸವ ಮೂರ್ತಿ ತೆರಳಿ ಧಾರ್ಮಿಕ ವಿದಿವಿಧಾನಗಳನ್ನು ಜರುಗಿಸಲಾಯಿತು. ಒಂಬತ್ತು ವರ್ಷಗಳ ನಂತರ ಜರುಗಿದ ಅಧಿ ದೇವತೆ ಜಾತ್ರಾ ಮಹೋತ್ಸವ ದಲ್ಲಿ, ಪಟ್ಟಣದ ಲಕ್ಷಾಂತರ ಭಕ್ತರು ಸೇರಿದಂತೆ. ಹಡಗಲಿಯ ಸುತ್ತ ಮುತ್ತ ಗ್ರಾಮಗಳ ಹಾಗೂ, ನೆರೆ ಹೊರೆ ತಾಲೂಕುಗಳ ಅಸಂಖ್ಯಾತ ಭಕ್ತರು. ಶ್ರೀದೇವತೆಯ ದರ್ಶನ ಪಡೆದರು. ಮಹಿಳೆಯರು ಮಕ್ಕಳು ವೃದ್ಧರು, ಯುವಕರು ಯುವತಿಯರು, ವಿವಿದ ಸಮುದಾಯಗಳ ಸರ್ವರೂ ಉತ್ಸವದಲ್ಲಿ ಪ‍ಾಲ್ಗೊಂಡು ದೇವಿ ಕೃಪೆಗೆ ಪ‍ಾತ್ರರಾದರು….

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend