ರಾಯಚೂರು, ಕೊಪ್ಪಳ, ಬಳ್ಳಾರಿ, ಮತ್ತು ವಿಜಯನಗರ ಹಾಲು ಒಕ್ಕೂಟದಿಂದ ಮೆವಿನ ಬೀಜ ವಿತರಣೆ ಮಾಡಲಾಯಿತು…!!!

Listen to this article

ಹಿಂದಿನ ವರ್ಷ ಮಳೆ ಇಲ್ಲದೆ ಮೇವಿನ ಕೊರತೆ ಎದುರಾಗುತ್ತಿರುವದರಿಂದ ಹೈನುಗಾರಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು ಇದನ್ನು ಮನಗಂಡು ಈ ಬಾರಿ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟದಿಂದ ಉಚಿತವಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮೆಕ್ಕೆಜೋಳದ ಬೀಜ ಮತ್ತು ಜೋಳದ ಬೀಜವನ್ನು ಉಚಿತವಾಗಿ ವಿತರಿಸಲಾಯಿತು ಮೆಕ್ಕೆ ಜೋಳದ ಬೀಜ ಒಂದು ಬಾರಿ ಕಟಾವಿಗೆ ಬಂದರೆ ಅದೇ ಜೋಳದ ಬೀಜ ಮೂರು ಬಾರಿ ಕಟಾವು ಮಾಡಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ ಇದು ಹೈನುಗಾರಿಕೆಗೆ ಉತ್ತೇಜನ ನೀಡಲು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಉಚಿತವಾಗಿ ಮೇವಿನ ಬೀಜವನ್ನು ವಿತರಣೆ ಮಾಡಲಾಗಿದೆ ಹೈನುಗಾರಿಕೆಯಲ್ಲಿ ರೈತರಿಗೆ ನಷ್ಟವನ್ನು ತುಂಬಲು ಹಸಿರುಮೇವಿನ ಅವಶ್ಯಕತೆ ಇರುವುದರಿಂದ ಈ ಬೀಜ ಗಳನ್ನು ರೈತರಿಗೆ ಉಚಿತವಾಗಿ ಕೊಟ್ಟು ಬೀಜವನ್ನು ಬಿತ್ತನೆ ಮಾಡಿ ಬಹುಬೇಗನೆ ಕಟಾವಿಗೆ ಬರುವುದರಿಂದ ಮತ್ತು ಹಾಲಿನ ಇಳುವರಿಯು ಕೂಡ ಹೆಚ್ಚಾಗುವುದರಿಂದ ಈ ಮೇವಿನ ಬೀಜವನ್ನು ವಿತರಿಸಿ ರೈತರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ ಈ ಒಂದು ಯೋಜನೆಯನ್ನು ಜಾರಿಗೆ ತಂದು ಹೈನುಗಾರರ ಹಿತ ಕಾಪಾಡುವಲ್ಲಿ ನಮ್ಮ ನೆಚ್ಚಿನ ಕೆಎಂಎಫ್ ಅಧ್ಯಕ್ಷರು ಹಾಗೂ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲುಒಕ್ಕೂಟದ ಅಧ್ಯಕ್ಷರು ಆದ ಭೀಮನಾಯ್ಕ್ ಸರ್ ಅವರಿಗ ರೈತರು ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ್ದಾರೆ.

ಅದೇ ರೀತಿಯಾಗಿ ಎಲ್ಲಾ ನಿರ್ದೇಶಕರಿಗೂ ಕೂಡ ಈ ಒಂದು ಕಾರ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಒಕ್ಕೂಟದ ನಿರ್ದೇಶಕರಾದ ಹೆಚ್. ಮರುಳ ಸಿದ್ದಪ್ಪನವರು ಮಾತನಾಡಿ ರೈತರಿಗೆ ಉಚಿತವಾಗಿ ಮೇವಿನ ಬೀಜವನ್ನು ವಿತರಿಸಿರುವುದರಿಂದ ಎಲ್ಲ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು ಜಿಲ್ಲೆಯ ಹಲವಾರು ಕಡೆ ಮೇವಿನ ಬೀಜಗಳನ್ನು ವಿತರಿಸಿ ರೈತರಿಗೆ ಇದರ ಬಗ್ಗೆ ಮಾಹಿತಿಯನ್ನು ಉಪ ವ್ಯವಸ್ಥಾಪಕರಾದ ಈ ಪ್ರಕಾಶ್ ಸರ್ ಅವರು ಮತ್ತು ಮಂಜುಳಾ ಮೇಡಂ ಅವರು ಮತ್ತು ಅಧಿಕಾರಿಗಳಾದ ತಿಪ್ಪೇಸ್ವಾಮಿ ರಾಜಕುಮಾರ್ ಗಾದೆಪ್ಪ ಶಿವರಾಜ್ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬೀಜಗಳನ್ನು ವಿತರಿಸಿ ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend