ಆರ್ಥಿಕ ಹೊರೆ ತಪ್ಪಿಸುವ ಸಾಮಾಜಿಕ ಸುಧಾರಣೆಗೆ ಒತ್ತು ಕೂಡುವ ನಿಟ್ಟಿನಲ್ಲಿ ಮಠ ಮಾನ್ಯಗಳ ಪಾತ್ರ ಅಪಾರ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಆರ್ಥಿಕ ಹೊರೆ ತಪ್ಪಿಸುವ – ಸಾಮಾಜಿಕ ಸುಧಾರಣೆಗೆ ಒತ್ತು ಕೂಡುವ ನಿಟ್ಟಿನಲ್ಲಿ ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿನ ಮಠ ಮಾನ್ಯಗಳ ಪಾತ್ರ ಅಪಾರ ಎಂದ. – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಂಚ ಪೀಠಗಳಲ್ಲಿ ದಕ್ಷಿಣಕಾಶಿ ಎನಿಸಿಕೊಂಡಿರುವ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರದ ಶ್ರೀ ಶಿವಾಚಾರ್ಯಸ್ವಾಮೀಜಿ ಅವರ ನೇತೃತ್ವದಲ್ಲಿ ಹಾಗೂ ಡಾ //ಏನ್. ಟಿ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಶ್ರೀ ಮರುಳಸಿದ್ದೇಶ್ವರಸ್ವಾಮಿ ರಥೋತ್ಸವ ಅಂಗವಾಗಿ ದಿ. 17-05-24 ರಂದು “ ಸಾಮೂಹಿಕ ವಿವಾಹ” ಕಾರ್ಯಕ್ರಮ ಉದ್ಘಾಟಿಸಿ 16 ಜೋಡಿಗಳ ಹೊಸ ಬಾಳಿಗೆ ಶುಭಾಹಾರೈಸಿದರು.

ಬಡವರು – ಕಡು ಬಡವರ ಆರ್ಥಿಕ ಹೊರೆ ತಪ್ಪಿಸಲು, ಸಾಲದ ಸುಳಿಗೆ ಸಿಲುಕದಂತೆ ಸಾಮಾಜಿಕ ಸುಧಾರಣೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರವಾದ ಉಜ್ಜಿನಿ ಮಠದ ಶ್ರೀ ಜಗದ್ಗುರುಗಳ ಸನ್ನಿಧಿಯಲ್ಲಿ ಇಂತಹ ಅರ್ಥ ಪೂರ್ಣ ಕಾರ್ಯಕ್ರಮ ನಡೆಯುತ್ತಿರುವುದು ನನ್ನಲ್ಲಿ ಸಂತಸ ತಂದಿದೆ.

ಪ್ರತಿಯೊಬ್ಬರ ದಂಪತಿಗಳು ಮುಂದಿನ ದಿನಗಳಲ್ಲಿ ದುಶ್ಚಟಗಳಿಗೆ ಬಲಿಯಾಗದೇ ಸುಖ – ಸಂತೋಷವಾಗಿ ಅನನ್ಯತೆಯಿಂದ ನೂರು ವರ್ಷಗಳ ಕಾಲ ಸಮಾಜ ಒಪ್ಪುವಂತೆ ಬಾಳಬೇಕು ಎಂದೂ ಕಿವಿ ಮಾತು ಹೇಳಿದರು . ನಮ್ಮಲ್ಲಿ 200 ಮದುವೆಗಳಿಕ್ಕಿಂತ ಹೆಚ್ಚು 100 ಜಾತ್ರೆಗಳಲ್ಲಿ ಭಾಗವಹಿಸಿ ಜನರ ಕಷ್ಟಗಳನ್ನು ಹತ್ತಿರದಲ್ಲೇ ಕಂಡು ಅರ್ಥ ಮಾಡಿಕೊಂಡಿದ್ದೇನೆ. ಹೀಗಾಗಿ ವರದಕ್ಷಿಣೆ ಪದ್ಧತಿ ಎಂಬ ಕೆಟ್ಟ ಪಿಡುಗನ್ನು ನಿರಾಕರಿಸಿ ಸಾಲದ ಹೊರೆ ತಪ್ಪಿಸಿ ತಾವು ಎಲ್ಲರೂ ಸರಳತೆಯಿಂದ ಸಾಮೂಹಿಕ ವಿವಾಹ ಮೂಲಕ ಹೊಸ ಜೀವನಕ್ಕೆ ಕಾಲಿಡುತ್ತಿರುವುದು ಶ್ರೀ ಶಿವಾಚಾರ್ಯ ಸ್ವಾಮೀಜಿಗಳು ಅವರು ಈ ಭಾಗದಲ್ಲಿ ಪ್ರೇರಣೆ ಮತ್ತು ಸ್ಪೂರ್ತಿಯಾಗಿದ್ದಾರೆ ಎಂದೂ ತಿಳಿಸಿದರು ಮುಂದಿನ ದಿನಗಳಲ್ಲಿ ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿನ 74 ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡುತ್ತೇವೆ ಎಂದೂ ಈ ಸಂದರ್ಭದಲ್ಲಿ ಹೇಳುತ್ತಾ ಮಠದ ಸನ್ನಿಧಿಯಲ್ಲಿ ಪ್ರಸಾದ ಸೇವಿಸಿ ಶ್ರೀಗಳನ್ನು ಭೇಟಿ ಮಾಡಿ ಉಜ್ಜಿನಿ ಮಠದ ಅಭಿವೃದ್ಧಿಗೂ ಕೂಡ ಚರ್ಚೆಸಿದರು.

ನಮ್ಮ ಸರ್ಕಾರ ಮತ್ತು ನನ್ನ ವೈಯಕ್ತಿಕವಾಗಿ ಮುಂದಿನ ದಿನಗಳಲ್ಲಿ ತಮಗೂ ಯಾವ ರೀತಿ ಸಹಾಯ ಮಾಡ್ತೀವಿ ಎಂಬ ಚಿಂತನೆಗಳು ನನ್ನಲ್ಲಿಯೂ ಇವೆ. ಶ್ರೀ ಮರುಳು ಸಿದ್ದೇಶ್ವರ ಜಾತ್ರೆಯ ಅಂಗವಾಗಿ ವಿದ್ಯುತ್ ಟಿ. ಸಿ. ಮತ್ತು ಕುಡಿಯುವ ನೀರಿನ ವ್ಯವಸ್ಥೆ ಈಡೇರಿಸಿದ್ದೇನೆ. ಈ ಸಂದರ್ಭದಲ್ಲಿ ಸಭೆಯಲ್ಲಿ ಶ್ರೀ ಶಿವಾಚಾರ್ಯ ಸ್ವಾಮೀಜಿಗಳು, ಕೊಟ್ಟೂರ್ ಚಾನುಕೋಟಿ ಶ್ರೀಗಳು ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರಸ್ವಾಮೀಜಿಗಳು, ತಾಲೂಕಿನ ವಿವಿಧ ಅಧಿಕಾರಿಗಳು, ಕೂಡ್ಲಿಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶ್ರೀ ಗುರುಸಿದ್ದನಗೌಡ ಅವರು, ಉಜ್ಜಿನಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು, ನವದಂಪತಿಗಳು, ಸಾವಿರಾರು ಸಂಖ್ಯೆಯ ಭಕ್ತ ವೃಂದದವರು ಪಾಲ್ಗೊಂಡಿದ್ದರು…

ವರದಿ, ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend