ಹಿರೇಕುಂಬಳಗುಂಟೆ ಶ್ರೀ. ಹಿ.ಮ. ನಾಗಯ್ಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಅನುಷಾ ಶೇ 89% ಫಲಿತಾಂಶ…!!!

Listen to this article

ಹಿರೇಕುಂಬಳಗುಂಟೆ ಶ್ರೀ. ಹಿ.ಮ. ನಾಗಯ್ಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಅನುಷಾ ಶೇ 89% ಫಲಿತಾಂಶ

ಕೂಡ್ಲಿಗಿ: ತಾಲೂಕಿನ ಗಡಿ ಗ್ರಾಮ ಹೀರೆ ಕುಂಬಳಗುಂಟೆ ಶ್ರೀ. ಹಿ.ಮ. ನಾಗಯ್ಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಅನುಷಾ 625ಕ್ಕೆ – 554 ಅಂಕ ಪಡೆದು ಶೇ 89% ಫಲಿತಾಂಶ ತಂದುಕೊಟ್ಟು ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಶಾಲೆಯ ಮುಖ್ಯ ಗುರುಗಳಾದ ಸುಜಾತ ಇವರು ತಿಳಿಸಿದ್ದಾರೆ. 2023 24ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಗೆ ಕುಳಿತ 41 ವಿದ್ಯಾರ್ಥಿಗಳ ಪೈಕಿ 39 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಡಿಸ್ಟಿಂಕ್ಷನ್ 4 ವಿದ್ಯಾರ್ಥಿಗಳು, ಪ್ರಥಮ 22 ವಿದ್ಯಾರ್ಥಿಗಳು, ದ್ವಿತೀಯ 10 ವಿದ್ಯಾರ್ಥಿಗಳು ಹಾಗೂ ತೃತೀಯ 3 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಮೋನಿಕಾ 551 ಶೇ. 88%, ನಸ್ರಿನ್ 538 ಶೇ 86%, ಅಮೃತ 537 ಶೇ 86% ಫಲಿತಾಂಶ ಪಡೆದಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ನಾಗರತ್ನಮ್ಮ ಮತ್ತು ಸದಸ್ಯರು, ಗ್ರಾಮದ ಮುಖಂಡರು, ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ‌…

ವರದಿ. ಬಸವರಾಜ್, ಎಂ, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend