ಕೂಡ್ಲಿಗಿ ಪಪಂ:ನೀರಿಗಾಗಿ ನಿಲ್ಲದ ಪರಿ ಪಾಟಲು, ಸಹಕರಿಸಿರೆಂದು ಕೋರುತ್ತಿರುವ CO…!!!

Listen to this article

ಕೂಡ್ಲಿಗಿ ಪಪಂ:ನೀರಿಗಾಗಿ ನಿಲ್ಲದ ಪರಿ ಪಾಟಲು, ಸಹಕರಿಸಿರೆಂದು ಕೋರುತ್ತಿರುವ CO-ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ 20ವಾರ್ಡ್ ಗಳಲ್ಲಿ, ಬೆರಳೆಣಿಕೆಯಷ್ಟು ವಾರ್ಡ್ ಗಳನ್ನು ಹೊರತು ಪಡಿಸಿ. ಉಳಿದೆಲ್ಲಾ ವಾರ್ಡ್ ಗಳಲ್ಲಿ ತಿಂಗಳಿಂದ ಸಮರ್ಪಕವಾಗಿ, ನಳಗಳಲ್ಲಿ ನೀರು ಪೂರೈಕೆಯಾಗದ ಕಾರಣ. ಸಾರ್ವಜನಿಕರು ನೀರಿಗಾಗಿ ಪರಿದಾಡುವಂತಹ ಪಡಬಾರದಂತಹ ಪರಿಪಾಟಲು ಅನುಭವಿಸುವಂತಾಗಿದೆ ಎಂದು, ಕೆಲ ಸಂಘಟನೆಗಳ ಪದಾಧಿಕಾರಿಗಳು ದೂರಿದ್ದಾರೆ. ಸಂಬಂಧಿಸಿದಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ, ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ಮತ್ತು ತಮ್ಮ ಕಸದ ವಾಹನದಲ್ಲಿ ಧ್ವನಿವರ್ಧಕ ಬಳಸಿ ನೀರಿನ ವ್ಯತ್ಯಯ ಕುರಿತಂತೆ,ಮಾಹಿತಿ ಪ್ರಕಟಿಸುವ ಮುೂಲಕ ಹಾಗೂ ಪತ್ರಿಕೆಗಳಲ್ಲಿ ಪ್ರಕಟಣೆ ನೀಡೋ ಮೂಲಕ. ಪ ಪಂ ಮುಖ್ಯಾಧಿಕಾರಿ ಪಿರೋಜ್ ಖಾನ್ ಸಾರ್ವಜನಿಕರಲ್ಲಿ, ನೀರಿನ ಸಮಸ್ಯೆ ಹಾಗೂ ಕಾರಣವನ್ನು. ಧ್ವನಿ ವರ್ಧಕ ಮೂಲಕ ತಿಳಿಸಿ ಮನವರಿಕೆ ಮಾಡಿದ್ದು, ಸರ್ವ ಸಾರ್ವಜನಿಕರಲ್ಲಿ ಸಹಕಾರ ಕೋರಿ ಪ್ರಕಟಣೆ ನೀಡಿದ್ದಾರೆ.

ಪ್ರಕಟಣೆ:-ಕೂಡ್ಲಿಗಿ ಪಟ್ಟಣಕ್ಕೆ ತುಂಗಭದ್ರಾ ಜಲಾಶಯದ ಬನ್ನಿಗೋಳ ಡ್ಯಾಂನಿಂದ ಕುಡಿಯೋ ನೀರು ಸರಬರಾಜಾಗುತ್ತಿದ್ದು, ಪ್ರಸ್ತುತ ಬನ್ನಿಗೋಳ ಡ್ಯಾಂ ನಲ್ಲಿ ನೀರು ಬತ್ತಿಹೋಗಿರಿವುದರಿಂದಾಗಿ. ಕೂಡ್ಲಿಗಿ ಪಟ್ಟಣಕ್ಕೆ ನೀರು ಸರಬರಾಜು ಆಗುವಲ್ಲಿ ಅಸಾಧ್ಯವಾಗಿರುವ ಕಾರಣ, ಪಟ್ಟಣದ ಎಲ್ಲಾ ವಾರ್ಡ್ ಗಳ ಸಾರ್ವಜನಿಕರು. ತಮ್ಮ ತಮ್ಮ ವಾರ್ಡ್ ಗಳಲ್ಲಿರುವ ಕಿರು ನೀರು ಸರಬರಾಜು ಯೋಜನೆಯ, MSW(ಸಣ್ಣ ನೀರಿನ ಟ್ಯಾಂಕ್)ಟ್ಯಾಂಕ್ ಗಳಲ್ಲಿನ ನೀರನ್ನು. ಇತಿ ಮಿತಿಯಿಂದ ಉಪಯೋಗಿಸಿಕೊಳ್ಳಬೇಕಿದೆ, ಮತ್ತು ಕುಡಿಯಲು ಹತ್ತಿರದ ಶುದ್ಧ ಕುಡಿಯೋ ಘಟಕಗಳಲ್ಲಿ. ದೊರಕಬಹುದಾದ ಶುದ್ಧ ಕುಡಿಯೋ ನೀರನ್ನು ಉಪಯೋಗಿಸಬೇಕೆಂದು, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಪ್ರಕಟಣೆಯ ಮೂಲಕ ಕೋರಿದ್ದಾರೆ. ಅದೇ ಇರಲಿ ಪಟ್ಟಣದಲ್ಲಿ ತಿಂಗಳಿಂದ ನೀರಿಗಾಗಿ ಆಹಾಕಾರ ಎದ್ದಿದೆ, ಹಲವು ವಾರ್ಡ್ ಗಳಲ್ಲಿನ ಬಳಕೆ ನೀರು ಪೂರೈಸುವ ಮಿನಿ ನೀರಿನ ಟ್ಯಾಂಕ್ ಗಳು ನಿಂತು ಒಣಗಿ ಹೋಗಿವೆ. ಇನ್ನು ಶುದ್ಧ ನೀರಿನ ಘಟಕಗಳ ದುರಾವಸ್ಥೆ, ಹೇಳತೀರದಾಗಿದೆ ಅವ್ಯವಸ್ಥೆಯ ಆಗರಗಳಾಗಿವೆ. ಕೆಲ ಘಟಕಗಳು ಮುಚ್ಚಿ ವರ್ಷಗಳೇ ಆಗಿವೆ, ಕೆಲ ಘಟಕಗಳು ಸುಖಾ ಸುಮ್ಮನೆ ತೆರೆದಿರುತ್ತವೆ ಕಾರ್ಯ ನಿರ್ವಸುವುದಿಲ್ಲ. ಇನ್ನು ಕೆಲವು ನೀರು ಪೂರೈಸುತ್ತವೆ ಆದ್ರೆ ಅವು ಸಮರ್ಪಕವಾಗಿ, ಕಾರ್ಯನಿರ್ವಹಿಸದೇ ಶುದ್ಧ ನೀರು ಸಾಮಾನ್ಯ ನೀರಿನಂತಿರುತ್ತದೆ ಅದರಲ್ಲಿ ಕೆಮಿಕಲ್ ಮಾತ್ರ ಮಿಶ್ರಣವಾಗಿರುತ್ತೆ. ಬೆರಳೆಣಿಕೆಯ ಘಟಕಗಳಲ್ಲಿ ನೀರೇ ಸರಬರಾಜಾಗದೇ, ಯಂತ್ರಗಳು ತುಕ್ಕು ಹಿಡಿದಿವೆ ಆದುದರಿಂದಾಗಿ ಘಟಕಗಳ ಗತಿ ದೇವರಿಗೇ ಪ್ರೀತಿ. ಇಂತಹ ದುರಾವಸ್ಥೆಯಲ್ಲಿ ಸಾರ್ವಕನಿಕರು ನೀರಿಲ್ಲದೇ,ದಾಹ ತೀರದೇ ಹಪ ಹಪಿಸುವ ದುಸ್ಥಿತಿ ನಿರ್ಮಾಣವಾಗಿದೆ. ಘಟಕಗಳು ಇದ್ದರೂ-ಇಲ್ಲ.!?-ಪಟ್ಟಣದ ಪ್ರತಿ ವಾರ್ಡ ಗಳಲ್ಲಿ ಶುದ್ಧ ಕುಡಿಯೋ ನೀರಿನ ಘಟಕಗಳಿವೆಯಾದರೂ, ಸಾರ್ವಜನಿಕರು ನೀರಿಗಾಗಿ ಪರದಾಡುವುದಂತು ತಪ್ಪಿಲ್ಲ. ಶುದ್ಧ ನೀರು-ಬಿಸಿ ತುಪ್ಪ.!?-ಶುದ್ಧ ಕುಡಿಯೋ ನೀರಿಗಾಗಿ ಕಿಲೋ ಮೀಟರ್ ನಷ್ಟು ದೂರ ತೆರಳಿ, ಪಟ್ಟಣ ಪಂಚಾಯ್ತಿ ನಿರ್ಮಿಸಿರುವ ಚಾಲನೆಯಲ್ಲಿರುವ ಘಟಕಗಳಲ್ಲಿ. 5₹ಕಾಯಿನ್ ಹಾಕಿ 20ಲೀಟರ್ ಶುದ್ಧ ಕುಡಿಯೋ ನೀರು ತರಬೇಕಿದೆ, ಆ ನೀರು ಸರಿಯಾಗಿ ಪರಿಷ್ಕರಣಗೊಳ್ಳದಿದ್ದಲ್ಲಿ. ಅನಿವಾರ್ಯವಾಗಿ ಖಾಸಗೀ ಘಟಕಗಳಿರುವಲ್ಲಿ ತರೆಳಿ, 20ಲೀಟರ್ ಗೆ 10₹ ಕೊಟ್ಟು ಖರೀದಿ ಮಾಡೋ ದುರಾವಸ್ಥೆ ನಿರ್ಮಾಣವಾಗಿದೆ. ಇಲ್ಲಿ ಬೈಕ್ ಅಥವಾ ಆಟೋದಲ್ಲಿ ತೆರಳಿ ವಾಪಾಸು ನೀರು ಮನೆಗೆ ತರಲು, 20ನೀರಿಗೆ ಬೈಕ್ ನಲ್ಲಾದರೆ 25₹ ವ್ಯಯವಾಗಿರುತ್ತದೆ. ಆಟೋದಲ್ಲಾದರೆ 40ರಿಂದ 60₹ ವ್ಞಯವಾಗುತ್ತದೆ, ಅಂದರೆ ಕೂಡ್ಲಿಗಿಯ ಪ್ರತಿ ವಾರ್ಡ್ ಗಳಲ್ಲಿ ಶುದ್ಧ ಕುಡಿಯೋ ನೀರು ಘಟಕಗಳಿವೆಯಾದರೂ, ಕೆಲ ವಾರ್ಡ್ ಗಳ ಸಾರ್ವಜನಿಕರ ಪಾಲಿಗೆ ಅವು ಇಲ್ಲದಂತಾಗಿವೆ. ಪರಿಣಾಮ ಶುದ್ಧ ಕುಡಿಯೋ ನೀರು ತುಂಬಾ ದುಬಾರಿ ಬೆಲೆಗೆ ದೊರಕುತ್ತಿದೆ, ಜನ ಸಾಮಾನ್ಯರಿಗೆ ಹಾಗೂ ಬಡವರಿಗೆ ದುಬಾರಿ ಬೆಲೆ ಬರೆಯಾಗಿದ್ದು ಅವರ ಪಾಲಿಗೆ ಬಿಸಿ ತುಪ್ಪವಾಗಿದೆ. ಇನ್ನು ಮಿನಿ ಟ್ಯಾಂಕ್ ಗಳ ಗತಿ ಅದೋ ಗತಿ…

ನಿರ್ವಹಣೆ ಕಾಣದ-ಮಿನಿ ಟ್ಯಾಂಕ್ ಗಳು-ಪಟ್ಟಣದ ವಾರ್ಡ್ ಗಳಲ್ಲಿ ನಿರ್ಮಾಣಗೊಂಡಿರುವ ಮಿನಿ ನೀರಿನ ಬಹುತೇಕ ಟ್ಯಾಂಕ್ ಗಳು(MSW), ವರ್ಷದಿಂದ ಸಮರ್ಪಕವಾಗಿ ನಿರ್ವಹಣೆ ಕಾಣದಾಗಿವೆ. ಪರಿಣಾಮ ಪಾಚಿ ಬೆಳದಿದ್ದು ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿವೆ, ಕೆಲವು ಟ್ಯಾಂಕ್ ಗಳಲ್ಲಿ ನಳಗಳೇ ಇಲ್ಲ. ಕೆಲ ವಾರ್ಡ್ ಗಳಲ್ಲಿನ ನೀರಿನ ಮಿನಿ ಟ್ಯಾಂಕ್ ಗಳು, ನಾನಾ ಕಾರಣಕ್ಕಾಗಿ ನೀರು ಕಾಣದೇ ಒಣಗಿವೆ. ಕೆಲ ವಾರ್ಡ್ ಗಳ ಟ್ಯಾಂಕ್ ಗಳಲ್ಲಿ ನೀರು ಹಗಲಿರುಳು ಹರಿದು ಪೋಲಾಗುತ್ತಿರುತ್ತವೆ, ಕೆಲವೆಡೆ ನೀರಿನ ಟ್ಯಾಂಕ್ ನಿಂದ ಹತ್ತಿರದ ಪ್ರಭಾವಿಗಳು. ನೀರಿನ ಟ್ಯಾಂಕ್ ಗೆ ತಮ್ಮದೇ ಆದ ಪೈಪ್ ಅಳವಡಿಸಿ, ಅನಧಿಕೃತವಾಗಿ ಸಾರ್ವಜನಿಕರ ನೀರನ್ನು ಹಾಡ ಹಗಲೇ ಕದಿಯುತ್ತಿದ್ದಾರೆಂಬ ಗಂಭೀರ ದೂರುಗಳಿವೆ. ಅವರು ಸಾರ್ವಜನಿಕರಿಗಾಗಿ ಪೂರೈಸಲಾಗಿರುವ ನೀರನ್ನು, ಅನಧಿಕೃತವಾಗಿ ಕದ್ದು ಬಳಸಿಕೊಂಡು, ತಮ್ಮ ಕಟ್ಟಡ ನಿರ್ಮ‍ಣಕ್ಕೆ ಅಥವಾ ತಮ್ಮ ವಾಣಿಜ್ಯೋಧ್ಯಮಗಳಿಗೆ, ಬಳಕೆಗೆ ಬಳಸಿಕೊಳ್ಳುತ್ತಿರುವುದರ ಬಗ್ಗೆ ದೂರುಗಳಿವೆ. ಕೆಲವೆಡೆಗಳಲ್ಲಿನ ಟ್ಯಾಂಕಗಳಲ್ಲಿನ ನೀರು ಸಾಕಾಗುವಷ್ಟು ಪೂರೈಕೆಯಾಗುತ್ತಿಲ್ಲ, ಮತ್ತು ನಳಗಳಿಲ್ಲದೇ ನೀರು ಪೋಲಾಗುತ್ತಿದೆ ಎಂಬುದು ಕಠು ಸತ್ಯ ಸಂಗತಿಯಾಗಿದೆ. ಇದು ಪಟ್ಟಣದಲ್ಲಿನ ನೀರಿನ ಅವ್ಯವಸ್ಥೆಯ ಕರ್ಮಕಾಂಡದ, ಕಿರು ನೈಜ್ಯ ಚಿತ್ರಣವಾಗಿದೆ. ಇಂತಹದರ ಅವ್ಯವಸ್ಥೆಯ ನಡುವೆಯೂ, ಪಟ್ಟಣ ಪಂಚಾಯ್ತಿ ಅಧಿಕಾರಿ ಸಾರ್ವಜನಿಕರಲ್ಲಿ ತಮ್ಮ ಅಸಹಾಯಕತೆ ತೋರಿದ್ದಾರೆ. ಅವರು ವ್ಯವಸ್ಥೆಯ ಅವ್ಯವಸ್ಥೆಯನ್ನು ಅನಾವರಣಗೊಳಿಸಿ ಕೈ ಚೆಲ್ಲಿದ್ದಾರೆ, ಅದೇ ರೀತಿ ಜನರಲ್ಲಿ ಕೈ ಜೋಡಿಸಿ ಸಹಕಾರ ಕೋರಿದ್ದಾರೆ…ಟ್ಯಾಂಕರ್ ಗಳ ಮೂಲಕ (ಗುಟುಕು)ನೀರು ಪೂರೈಕೆ- ಇಂತಹ ದುರಾವಸ್ಥೆಯಲ್ಲಿ, ಪ ಪಂನಿಂದ ಅಗತ್ಯ ಅನಿವಾರ್ಯ ಇರುವ ವಾರ್ಡ್ ಗಳಿಗೆ. ಸಾರ್ವಜನಿಕರಿಗಾಗಿ ಟ್ಯಾಂಕರ್ ಮೂಲಕ, ನೀರು ಪೂರೈಸಲಾಗುತ್ತಿದೆ. ಆದರೆ ಅದು ಯಾತಕ್ಕೂ ಸಾಕಾಗದು, ಅದು ಸಾರ್ವಜನಿಕರಿಗೆ ಗುಟುಕು ನೀರಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವಲ್ಲಿ, ಪಪಂ ಅದಿಕಾರಿ ಹಾಗೂ ಸಂಬಂಧಿಸಿದ ಎಲ್ಲಾ ವಾರ್ಡ್ ಗಳ ಸದಸ್ಯರು ನಿಷ್ಠೆ ತೋರುತ್ತಿದ್ದಾರೆ. ಬೆರಳೆಣಿಕೆಯ ಸದಸ್ಯರು ನಿರ್ಲಕ್ಷ್ಯ ತೋರಿದ್ದಾರೆಂಬ ಕೂಗು ಕೇಳಿಬಂದಿದೆ, ಆದರೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ, ಪಪಂಗೆ ಸಹಾನುಭೂತಿ ತೋರಿ, ಅನಿವಾರ್ಯವಾಗಿ ಸಹಕರಿಸುತ್ತಿದ್ದಾರೆ. ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು- ಸ್ಪಂಧಿಸಬೇಕಿದೆ- ತಾಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ, ನೀರಿಗಾಗಿ ಹಪಾ ಹಪಿ ನಡೆದಿದೆ, ಆಹಾಕಾರ ಸೃಷ್ಠಿಯಾಗಿದೆ.. ನಳಗಳಲ್ಲಿ 8ದಿನಕ್ಕೊಮ್ಮೆ ಬಳಕೆಯ ನೀರು ಪೂರೈಕೆಯಾಗುತ್ತಿದ್ದು, ನೀರಿನ ಬವಣೆ ಹೇಳತೀರದಾಗಿದೆ. ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಮತ್ತು ಶಾಸಕರು, ಸ್ವಯಂ ಆಸಕ್ತಿ ತೋರಿ ಜನಪರ ಕಾಳಜಿಯಿಂದ ನೀರಿನ ಬವಣೆ ನೀಗಿಸಬೇಕಿದೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend