ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಶ್ರೀಯುತ ಎನ್‌.ಟಿ. ತಮ್ಮಣ್ಣನವರ ಸಮ್ಮುಖದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು…!!!

Listen to this article

ಕೂಡ್ಲಿಗಿ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಶ್ರೀಯುತ ಎನ್‌.ಟಿ. ತಮ್ಮಣ್ಣನವರು ದಿ; 29-10-2024 ರಂದು ದಾಸರೋಬನಹಳ್ಳಿ ಗ್ರಾಮದಲ್ಲಿ ಊರಿನ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು ಸೇರಿ ವಿಜೃಂಭಣೆಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಹಮ್ಮಿಕೊಂಡ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಮಹರ್ಷಿ ವಾಲ್ಮೀಕಿ ಅವರು ಪ್ರಾಚೀನ ಕಾಲದಲ್ಲಿ ಅಕ್ಷರ ಕಲಿತು ಈ ಸಮಾಜ ಭವ್ಯವಾಗಿ ಬಾಳುವಂತೆ ರಾಮಾಯಣ ಕಾವ್ಯವನ್ನು ಬರೆದು ಮಾನವೀಯ ಆದರ್ಶ ಮೌಲ್ಯಗಳನ್ನು ನಮ್ಮಲ್ಲಿ ಬಿಟ್ಟುಹೋಗಿದ್ದಾರೆ. ಆ ನಿಟ್ಟಿನಲ್ಲಿ ನಾವು ಇಂದಿನ ಸಮಾಜದಲ್ಲಿ ಶಿಸ್ತು, ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಶಿಕ್ಷಣ ಮೂಲಕ ಉದ್ಯೋಗ ಪಡೆದು ಸ್ವಾಭಿಮಾನದಿಂದ ಬದುಕುವಂತೆ ಇಂದಿನ ದಿನಗಳಲ್ಲಿ ವಾಲ್ಮೀಕಿ ಸಮಾಜ ಅಭಿವೃದ್ಧಿ ಹೊಂದಲಿ ಎಂದೂ ಶುಭಾಶಯಗಳು ತಿಳಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಮಲಿಯಪ್ಪ ಅವರು ಒಳಗೊಂಡಂತೆ ಊರಿನ ಹಿರಿಯರು, ಮಹಿಳೆಯರು, ಯುವಕರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು….

ವರದಿ. ಅನಿಲ್ ಕುಮಾರ್ ಹುಲಿಕುಂಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend