ಭಾರತ ಕಮ್ಯೂನಿಷ್ಠ್ ಪಕ್ಷ (ಮಾರ್ಕ್ಸ್ ವಾದಿ)ಯ ಸಂಡೂರು ತಾಲೂಕು ಸಮಿತಿಯ 2 ನೇ ಸಮ್ಮೇಳನ…!!!

Listen to this article

ಭಾರತ ಕಮ್ಯೂನಿಷ್ಠ್ ಪಕ್ಷ (ಮಾರ್ಕ್ಸ್ ವಾದಿ)ಯ ಸಂಡೂರು ತಾಲೂಕು ಸಮಿತಿಯ 2 ನೇ ಸಮ್ಮೇಳನ
ತೋರಣಗಲ್ಲಿನ ಸೂರಿಭವನದಲ್ಲಿ ನಡೆಯಿತು.ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಪಿಎಂ ನ ರಾಜ್ಯ ಸಮಿತಿ ಸದಸ್ಯ ಆರ್ ಎಸ್ ಬಸವರಾಜ್ ಮಾತನಾಡಿ ಬಿಜೆಪಿಯು ಕೇಂದ್ರದಲ್ಲಿ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದರು ಸಹ ಕಾರ್ಮಿಕರ, ರೈತರ,ಬಡವರ, ಉದ್ಧಾರ ಮಾಡುವ ಯಾವ ಕಲ್ಯಾಣ ಕಾರ್ಯಕ್ರಮ ರೂಪಿಸಲಿಲ್ಲ ಇರುವಂತಹ ಕಾರ್ಮಿಕರ ಕಾಯ್ದೆಗಳನ್ನು ರದ್ದತಿ ಮಾಡಿ ಕೇವಲ ನಾಲ್ಕು ಸಂಹಿತೆಗಳಾಗಿ ತಿದ್ದುಪಡಿಯ ತರುವ ಮೂಲಕ ಅನ್ಯಾಯ ಎಸಗಿದ್ದಾರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ, ಬದಲಾಗಿ ಇರುವಂತಹ ಉದ್ಯೋಗಗಳನ್ನು ಖಾಸಗೀಕರಣ ಮಾಡುವ ಮೂಲಕ ನಿರುದ್ಯೋಗ ಹೆಚ್ಚಳ ಮಾಡಿದ್ದಾರೆ ಎಂದರು.ಸಿಪಿಎಂ ನ ಜಿಲ್ಲಾ ಕಾರ್ಯದರ್ಶಿ ಸತ್ಯಬಾಬು ಮಾತನಾಡಿ ಸಂಡೂರು ತಾಲೂಕು ಹೇರಳವಾದ ನೈಸರ್ಗಿಕ ಸಂಪತ್ತು ಹೊಂದಿದ್ದರೂ ಸ್ಥಳೀಯರಿಗೆ ಅದರ ಲಾಭ ಸಿಗುತ್ತಿಲ್ಲ,ರಾಜರ ಆಳ್ವಿಕೆ ಮುಂದುವರೆದು ಗುಲಾಮಗಿರಿ ಪದ್ದತಿ ಸಂಡೂರಿನ ಲಾಡ್ ಸಂಸ್ಥಾನದಲ್ಲಿ ಜೀವಂತವಾಗಿದೆ ಎಂದರು.ಜಿಲ್ಲಾ ಸಮಿತಿ ಸದಸ್ಯ ವಿ.ಎಸ್ ಶಿವಶಂಕರ್ ಮಾತನಾಡಿ ನಾಲ್ಕು ಬಾರಿ ಶಾಸಕರಾಗಿ ಮೊನ್ನೆ ನಡೆದ ಲೋಕಸಭಾ ಸದಸ್ಯರಾಗಿ ಈ.ತುಕಾರಾಮ ರವರು ಸತತ ಗೆಲುವಿನ ರುಚಿ ಸವಿಯುತ್ತದ್ದಾರೆ,ಆದರೆ ಸಂಡೂರಿನ ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕು ಎಂದು ಅಪಖ್ಯಾತಿಗೆ ಕಾರಣರಾಗಿದ್ದಾರೆ,ಈ ಬಾರಿ ವಿಧಾನ ಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಗೆಲ್ಲಿಸಲು ಜನಾರ್ಧನ ರೆಡ್ಡಿ ಸಂಡೂರಲ್ಲಿ ಠಿಕಾಣಿ ಹೂಡಿದ್ದಾರೆ,ಸಾವಿರಾರು ಕೋಟಿ ಗಣಿ ಹಗರಣ ಮಾಡಿ ಜೈಲಿಗೆ ಹೋಗಿ ಬಂದವರನ್ನು ಸಂಡೂರಿನ ಮತದಾರರು ತಿರಸ್ಕಾರ ಮಾಡಬೇಕು ಈ ನಿಟ್ಟಿನಲ್ಲಿ ಸಿಪಿಐಎಂ ಪಕ್ಷವು ಬಡವರ,ರೈತರ,ಕಾರ್ಮಿಕರ ,ವಿದ್ಯಾರ್ಥಿ,ಯುವಜನರ ಶ್ರಮಿಕರ ಪರ ನಿರಂತರ ಹೋರಾಟ, ಪಕ್ಷ ಸಂಘಟಣೆ ನಡೆಸಲಿದೆ ಎಂದರು.ಈ ಸಂದರ್ಭದಲ್ಲಿ ಸಿಪಿಎಂ ನ ಜಿಲ್ಲಾ ಸಮಿತಿ ಸದಸ್ಯ ಜೆಎಂ.ಚನ್ನಬಸಯ್ಯ,
ತಾಲೂಕು ಕಾರ್ಯದರ್ಶಿ ಎ.ಸ್ವಾಮಿ,ಖಾಜಾನಿ,
ಎಸ್ ಕಾಲುಬಾ,ರೇಖಾ, ಎಚ್.ಸ್ವಾಮಿ ಷರೀಫ್,ಎನ್.ಶಂಕ್ರಣ್ಣ,
ಶಿವಾರೆಡ್ಡಿ,ನಾಗಭೂಷಣ್,
ವಿ ದೇವಣ್ಣ,ಹಾಗೂ ಉಪಸ್ಥಿತರಿದ್ದರು..


ವರದಿ:- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend