ಹೂಡೇಂ ಗ್ರಾಮದ ದಲಿತ ಕಾಲೋನಿಯಲ್ಲಿ ಕುಂದು ಕೊರತೆಗಳ ಆಲಿಸಿದ: ಡಿಸಿ ಟಿ ವೆಂಕಟೇಶ್…!!!

Listen to this article

ಹೂಡೇಂ ಗ್ರಾಮದ ದಲಿತ ಕಾಲೋನಿಯಲ್ಲಿ ಕುಂದು ಕೊರತೆಗಳ ಆಲಿಸಿದ: ಡಿಸಿ ಟಿ ವೆಂಕಟೇಶ್

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯ ಶ್ರೀ ಕಂಪಳ ರಂಗ ಸ್ವಾಮಿ ಪ್ರೌಢ ಶಾಲೆಯ ಆವರಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅವರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಅದಕ್ಕೂ ಮೊದಲು ಹೂಡೇಂ ಗ್ರಾಮದ ದಲಿತ ಕಾಲೋನಿಗೆ ಭೇಟಿ ನೀಡಿ ಅಲ್ಲಿನಾ ಜನರ ವಾಸ್ತವ್ಯ ಹಾಗೂ ಅಲ್ಲಿನ ಜನರ ಸಮಸ್ಯೆಯನ್ನು ಖುದ್ದಾಗಿ ಆಲಿಸಿ ಸಮಸ್ಯೆಗಳ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ತಿಳಿಸಿ ಪರಿಹರಿಸುವ ತಾಖಿತು ಮಾಡಿದರು. ಇದೆ ವೇಳೆ ದಲಿತ ಕಾಲೋನಿಯ ವಿಕಲ ಚೇತನ ರಾದ ಮಾಂತೇಶ್ ಜಿಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿ ನಮ್ಮ ದಲಿತ ಕಾಲೋನಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ದಲಿತರ ಮನೆಗಳು ಇದ್ದು ಸೂಮರು 40 ರಿಂದ 50 ವರ್ಷದಿಂದ ಇಲ್ಲಿಯೇ ವಾಸ ಮಾಡುತ್ತಿದ್ದಾರೆ.

30 ಉದ್ದ 40 ಅಗಲ ಸೈಟ್ ನಲ್ಲಿ 5 6 ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಇದರಿಂದ ಮನಗಲು ಕೂತುಕೊಳ್ಳಲು ಜಾಗ ಆಗುತ್ತಿಲ್ಲ, ದಲಿತರಿಗೆ ಹೊಲಗಳು ಸಹ ಇಲ್ಲ, ಹಾಗೂ ಅಂಬೇಡ್ಕರ್ ಭವನವನ್ನು ನಿರ್ಮಿಸಿ ಕೊಡಿ, ನೂತನವಾಗಿ ವಿಜಯನಗರ ಜಿಲ್ಲೆ ಆಗಿದ್ದರಿಂದ ನೀವು ಹೊಸದಾಗಿ ನಮ್ಮ ಗಡಿಭಾಗಕ್ಕೆ ಬಂದಿದ್ದೀರಾ ನಿಮ್ಮಿಂದ ನಮ್ಮ ಊರಿನ ಸಮಸ್ಯೆ ಬಗ್ಗೆ ಅರಿಬಹುದು ಎಂದು ನಾನು ಇಚ್ಚಿಸುತ್ತೇನೆ ಎಂದು ಡಿಸಿ ಮುಂದೆ ವಿಕಲಚೇತನ ಮಾಂತೇಶ್ ಹಾಗೂ ಸಾರ್ವಜನಿಕರು ಮನವಿ ಮಾಡಿದರು. ಜಿಲ್ಲಾಧಿಕಾರಿ ಟಿ ವೆಂಕಟೇಶ್ ಮಾತನಾಡಿ ನಿಮ್ಮ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸುವೆ ಎಂದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಅರ್ಜಿಯ ಮುಖಾಂತರ ಮಾನ್ಯ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಸ್ವೀಕರಿಸಿದರು. ಒಟ್ಟು 251 ಆರ್ಜಿಗಳು ಸ್ವೀಕೃತವಾಗಿದ್ದು ಸ್ಥಳದಲ್ಲೇ 61 ಅರ್ಜಿಗಳು ಇತ್ಯರ್ಥಗೊಳಿಸಲಾಗಿ ಉಳಿದ 190 ಅರ್ಜಿಗಳು ಬಾಕಿ ಉಳಿದಿವೆ. ಆದನಂತರ ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಈ ಗ್ರಾಮದ ಎಲ್ಲಾ ಎಸ್ಸಿ ಎಸ್ಟಿ ಹಿಂದುಳಿದ ಸಾರ್ವಜನಿಕರು ಮೂಲಭೂತ ಸೌಕರ್ಯವನ್ನು ಪಡೆಯಬೇಕೆಂದು ಮಾನ್ಯ ಜಿಲ್ಲಾಧಿಕಾರಿ ತಿಳಿಸಿದರು.

ಕಂದಾಯ ಇಲಾಖೆಗೆ ಸಂಬಂಧಪಟ್ಟ ಜಮೀನಿನ ತಾತ ಮುತ್ತಾ ಹೆಸರಿನಲ್ಲಿರುವ ಪಹಣಿ ಗಳನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕೆಂದು ತಹಸಿಲ್ದಾರ್ ಟಿ. ಜಗದೀಶ್ ಸಾರ್ವಜನಿಕರಿಗೆ ಸೂಚನೆ ತಿಳಿಸಿದರು ಮತ್ತು ಸಂಧ್ಯಾಸುರಕ್ಷ ವೃದ್ಧಾಪ್ಯ ವೇತನ ವಿಕಲಚೇತನ ಇವೆಲ್ಲವನ್ನು ನೀವು ಪಡೆಯಬೇಕು ಗ್ರಾಮ ಪಂಚಾಯಿತಿ ಸಂಬಂಧಪಟ್ಟ ಮನೆಗಳು ಶೌಚಾಲಯಗಳು, ದನದ ಕೊಟ್ಟಿಗೆ ಇವೆಲ್ಲವನ್ನು ಗ್ರಾಮ ಪಂಚಾಯತಿಯಲ್ಲಿ ಅರ್ಜಿಯ ಮುಖಾಂತರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕೊಟ್ಟು ನಿಮ್ಮ ಮೂಲಭೂತ ಸೌಕರ್ಯಗಳನ್ನು ಪಡೆಯಬೇಕೆಂದು ತಿಳಿಸಿದರು ಮತ್ತು ಜಮೀನಿಲ್ಲದ ಬಡರೈತರು 57ರ ಕಾಲಂ ಅರ್ಜಿಯನ್ನು ತೆಗೆದುಕೊಂಡು ತಾಲೂಕು ಆಫೀಸಿಗೆ ಕೊಡಬೇಕು ಅಜ್ಜಿಯನ್ನು ಸ್ವೀಕರಿಸಿ ಗೋರ್ಮೆಂಟ್ ಜಮೀನಿನಲ್ಲಿ ಇರತಕ್ಕಂತಹ ಜಮೀನನ್ನು ನಾವು ನಿಮಗೆ ಪಾಣಿ ಬರಲಿಕ್ಕೆ ಮಾಡಿಕೊಡುತ್ತೇವೆ. ಕಂದಾಯ ಇಲಾಖೆಯ ಸಂಧ್ಯಾ ಸುರಕ್ಷಾ ಯೋಜನೆಯಡಿ ಹಾಗೂ ಇಂದಿರಾಗಾಂಧಿ ವೃದ್ಧಾಪ್ಯ ವೇತನ ಯೋಜನೆ ಅಡಿಯಲ್ಲಿ 22 ಫಲಾನುಭವಿಗಳಿಗೆ ಪಿಂಚಣಿ ಆದೇಶದ ಪ್ರತಿಯನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಸಿದ್ದರಾಮೇಶ್ವರ, ಉಪ ಕಾರ್ಯದರ್ಶಿಗಳು ತಿಮ್ಮಪ್ಪ ಹೊಸಪೇಟೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಶರಣಪ್ಪ ಮುಧಗೋಳ್, ಕೆ ಡಿ ಪಿ ಜಿ ಕೊಟ್ರೇಶ್ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರು ಈರಣ್ಣ, ಬಿಎಚ್ಒ ಸಲೀಂ ಹೊಸಪೇಟೆ, ಹಾಗೂ ಹೂಡೇಂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಬಸಮ್ಮ ದುರುಗಪ್ಪ, ಹಾಗೂ ಉಪಾಧ್ಯಕ್ಷರಾದ ಕೆ.ಎನ್ ರಾಘವೇಂದ್ರ, ಕಾರ್ಯ ನಿರ್ವಾಹಕ ಅಧಿಕಾರಿ ವೈ.ರವಿಕುಮಾರ್‌, ತಾಲೂಕು ವೈದ್ಯ ಅಧಿಕಾರಿ ಎಸ್.ಪಿ.ಪ್ರದೀಪ್ ಸೇರಿದಂತೆ ಜಿಲ್ಲಾ ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ವಿವಿಧ ಗ್ರಾಮಗಳ ಗ್ರಾಮಸ್ಥರು, ರೈತರು, ಕಂದಾಯ ಇಲಾಖೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend