ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ನಿಗಮದಲ್ಲಿ ಇಸ್ಟಾಂಪ್ ಸೌಲಭ್ಯ ಉದ್ಘಾಟನೆ ಕಾರ್ಯಕ್ರಮ…!!!

Listen to this article

ವಿಜಯನಗರ.ಜಿಲ್ಲೆ ಕೂಡ್ಲಿಗಿ ತಾಲೂಕು. ಕಾನಹೊಸಹಳ್ಳಿ.
ಪ್ರಗತಿ ಕೃಷ್ಣ ಸೌಹಾರ್ದ ಪತ್ತಿನ ನಿಗಮದಲ್ಲಿ ಇಸ್ಟಾಂಪ್ ಸೌಲಭ್ಯ ಉದ್ಘಾಟನೆ ಕಾರ್ಯಕ್ರಮ ಒಂದು ಕೋಟಿ ವ್ಯವಹಾರ ತಲುಪುತ್ತಿರುವ ಪ್ರಗತಿ ಕೃಷ್ಣ ಸೌಹಾರ್ದ :- ಅಧ್ಯಕ್ಷ ಬರಮಪ್ಪ
ಕಾನಹೊಸಹಳ್ಳಿಯ ಪ್ರಗತಿ ಕೃಷ್ಣ ಸೌಹಾರ್ಧ ಪತ್ತಿನ ನಿಗಮದಲ್ಲಿ ಇ ಸ್ಟಾಂಪ್ ಸೌಲಭ್ಯದ ಉದ್ಘಾಟನೆ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿತ್ತು, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಚಿದಾನಂದಯ್ಯ ನವರು ಉದ್ಘಾಟನೆ ಮಾಡಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವೇಗವಾಗಿ ಬೆಳೆಯುತ್ತಿರುವ ಇ-ವಾಣಿಜ್ಯ ಪಟ್ಟಣದಲ್ಲಿ ಇ ಸ್ತಂಪ್ ಸೌಲಭ್ಯಅತ್ಯವಶ್ಯಕವಾಗಿದೆ.ಪ್ರಗತಿ ಕೃಷ್ಣ ಸೌಹಾರ್ದದ ವ್ಯವಸ್ಥಾಪಕರುಈ ಸೌಲಭ್ಯವನ್ನು ಒದಗಿಸುವುದು ತುಂಬಾ ಉತ್ತಮ ಕೆಲಸವಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕರಾದ ಶ್ರೀ ಜಗನ್ನಾಥ ಅವರು ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಕೃಷ್ಣ ಸೌಹಾರ್ದ ನಿಗಮ ಬೆಳೆಯಲಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಸಹಾಯವಾಗಲಿ ಎಂದು ಈ ಸಂದರ್ಭದಲ್ಲಿಶಾಖೆಗೆ ಶುಭಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೌಹಾರ್ದ ಅಧ್ಯಕ್ಷರಾದ ಶ್ರೀ ಬರಮಪ್ಪ ಮಾತನಾಡಿ ಕೇವಲ ಆರು ತಿಂಗಳ ಅವಧಿಯಲ್ಲಿ ಪ್ರಗತಿ ಕೃಷ್ಣ ಸೌಹಾರ್ದ ನಿಗಮದ ವ್ಯವಹಾರಗಳು 80 ಲಕ್ಷ ದಾಟಿದ್ದು ಮಾರ್ಚ್ ತಿಂಗಳ ಅವಧಿಯೊಳಗೆ 1ಕೋಟಿ ವ್ಯವಹಾರ ತಲುಪಲಿದೆ ಎಂದು ಹೇಳಿ ಇದಕ್ಕೆ ಕಾರಣ ಗ್ರಾಹಕರು ಮತ್ತು ನಮ್ಮ ಸೌಹಾರ್ದದ ಸಿಬಂದಿಗಳು ಎಂದು ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿಈ ಸೌಹಾರ್ದ ವು ನೀಡುವ ಸೌಲಭ್ಯಗಳನ್ನು ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಮಾತನಾಡಿದರು.ನಿರ್ದೇಶಕರುಗಳಾದ, ಶ್ರೀ ವೀರಪಾಕ್ಷಯ್ಯ, ಬಿ ಎಂ ಪ್ರಭುದೇವ, ಇವರುಗಳು ಸೌಹಾರ್ದದ ಸೇವೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಸೌಹಾರ್ದದ ಸಿಇಒ ಆದ ಶ್ರೀ ಶಿವಶಂಕರ್ ರವರು ಸ್ವಾಗತಿಸಿದರು. ಕಾನಹೊಸಹಳ್ಳಿ ಪ್ರಗತಿ ಕೃಷ್ಣ ಸೌಹಾರ್ದ ನಿಗಮದ ವ್ಯವಸ್ಥಾಪಕರಾದ ನಾಗರಾಜುರವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶಾಖೆ ಸಿಬ್ಬಂದಿಗಳಾದ ಶ್ರೀಮತಿ ಪ್ರಕೃತಿ, ರೇಷ್ಮಾ,, ನಿರಂಜನಬಾಬು. ತಿಪ್ಪೇಸ್ವಾಮಿ ಸೇರಿದಂತೆ ಸಾರ್ವಜನಿಕರು ಇತರರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend