ಪೂಜಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ 15ರಿಂದ 18 ವರ್ಷ ಒಳಗಿನ ಮಕ್ಕಳಿಗೆ ಲಸಿಕೆ…!!!

Listen to this article

ಪೂಜಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ 15ರಿಂದ 18 ವರ್ಷ ಒಳಗಿನ ಮಕ್ಕಳಿಗೆ ಲಸಿಕೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ಇಂದು ಹೂಡೇಂ ಉಪಕೇಂದ್ರ ಆರೋಗ್ಯ ಇಲಾಖೆ ವತಿಯಿಂದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಲಸಿಕಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದರು, ನಂತರ ಡಾ ಧರ್ಮೇಂದ್ರ ನಾಯಕ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೋನಾ 19 ವೈರಸ್ ತಡೆಗಟ್ಟುವಲ್ಲಿ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಿ ಸುರಕ್ಷಿತವಾಗಿ ಕಾಪಾಡಿತು ಇತ್ತೀಚಿನ ದಿನಗಳಲ್ಲಿ ಮೂರನೇ ಅಲೆ ಭೀತಿಯಿದ್ದು ಮಕ್ಕಳಿಗೆ ಹಿಂದಿನಿಂದ 15ರಿಂದ 18 ವರ್ಷ ಮಕ್ಕಳಿಗೆ ಲಸಿಕೆ ನೀಡಿ ಕೊರೋನಾ ಮಹಾ ಮಾರಿಯಿಂದ ಮಕ್ಕಳನ್ನು ಕಾಪಾಡುವ ದೃಷ್ಟಿಯಿಂದ ಹಿಂದಿನಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಕೊರೋನ ದಿಂದ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ತಂದೆ ತಾಯಿಗಳು ಕೂಡ ಮುನ್ನೆಚ್ಚರಿಕೆಯಾಗಿ ಮಕ್ಕಳಿಗೆ ಲಸಿಕೆ ಕೊಡಿಸಬೇಕು ಎಂದರು. ಈ ಸಂದರ್ಭದಲ್ಲಿ ಡಾ ಶಿವಲಿಂಗಪ್ಪ, ಅಭಿವೃದ್ಧಿ ಅಧಿಕಾರಿ ಬಸವರಾಜ್, ಗ್ರಾ.ಪಂ ಅಧ್ಯಕ್ಷರು ಶ್ರೀಮತಿ ಶಿಲ್ಪ-ಬಸಣ್ಣ, ಉಪಾಧ್ಯಕ್ಷೆ ಶ್ರೀಮತಿ ಮಲ್ಲಮ್ಮ, ಹಾಗೂ ಆರೋಗ್ಯ ಕಿರಿಯ ಸಹಾಯಕಿಯರು ಪ್ರೇಮ, ರೇಖಾ, ನಾಗೇಶ್ ಸಿ.ಎಚ್.ಒ, ಪಾಲಯ್ಯ ಎನ್.ಜಿ.ಓ, ವಾಹನ ಚಾಲಕರು ರಾಜೇಶ್, ಆಶಾ ಕಾರ್ಯಕರ್ತರು ನಾಗಮ್ಮ, ಗ್ರಾ.ಪಂ ಸರ್ವ ಸದಸ್ಯರು, ಶಾಲೆಯ ಮುಖ್ಯಗುರುಗಳು ಬಸಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

ವರದಿ. ವಿರೇಶ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend