ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ ಕೂಡ್ಲಿಗಿ ಕ್ಷೇತ್ರದ ಕೆರೆಗಳಿಗೆ ನೀರುFCC ತುಂಬಿಸುವ ಯೋಜನೆ ಶೀಘ್ರದಲ್ಲಿ ಚಾಲನೆ…!!!

Listen to this article

ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ
ಕೂಡ್ಲಿಗಿ ಕ್ಷೇತ್ರದ ಕೆರೆಗಳಿಗೆ ನೀರುFCC ತುಂಬಿಸುವ ಯೋಜನೆ ಶೀಘ್ರದಲ್ಲಿ ಚಾಲನೆ

ಕೂಡ್ಲಿಗಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕೆಲವೆಡೆ ಇದ್ದ ತಾಂತ್ರಿಕ ಸಮಸ್ಯೆಗಳು ಬಗೆಹರಿದಿದ್ದು, ಸಾಧ್ಯವಾದರೆ ಇದೇ ತಿಂಗಳಲ್ಲಿ ಕೆರೆಗಳಿಗೆ ನೀರು ಹರಿಸಲು ಚಾಲನೆ ನೀಡಲಾಗುವುದು, ಯೋಜನೆ ಜಾರಿ ಕುರಿತು ಯಾವುದೇ ಅನುಮಾನ ಬೇಡ ಎಂದು ದೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಹೇಳಿದರು.
ಕೂಡ್ಲಿಗಿ ಕ್ಷೇತ್ರದ ಉಜ್ಜಯಿನಿಯಲ್ಲಿ ೨೬.೨೭ ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಸಾರ್ವಜನಿಕ ಸಭೆಯಲ್ಲಿ ಅವರು ಗುರುವಾರ ಮಾತನಾಡಿದರು. ಯೋಜನೆಗಾಗಿ ಬಳಕೆಯಾಗಿರುವ ೩೯ ರೈತರ ೩ ಎಕರೆ ಭೂಮಿಗೆ ಪರಿಹಾರ ಮೊತ್ತದ ಚೆಕ್ ನೀಡಲು ಸರಕಾರದ ಪ್ರಕ್ರಿಯೆ ಪೂರ್ಣವಾಗಿದ್ದು, ಶೀಘ್ರದಲ್ಲಿ ವಿತರಿಸಲಾಗುವುದು. ಅಲ್ಲದೇ ಪಾಲಯ್ಯನಕೋಟೆ, ಗುಡೇಕೋಟೆ ಬಳಿಯ ಅರಣ್ಯ ಇಲಾಖೆಯ ಸಮಸ್ಯೆಯೂ ಪರಿಹಾರವಾಗಿದೆ. ರೈತರಿಗಾಗಿ ಜಾರಿಯಾಗುತ್ತಿರುವ ಯೋಜನೆಯಡಿ ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಪರಿಹಾರ ಕಲ್ಪಿಸದ ಹೊರತು ಯೋಜನೆ ಜಾರಿ ಮಾಡಬಾರದೆಂಬ ಉದ್ದೇಶಕ್ಕೆ ಈವರೆಗೂ ವಿಳಂಬವಾಗಿತ್ತು. ಇದೀಗ ಎಲ್ಲ ಸಮಸ್ಯೆಗಳು ಬಗೆಹರಿದಿರುವುದರಿಂದ ಮಾಸಾಂತ್ಯಕ್ಕೆ ಯೋಜನೆ ಉದ್ಘಾಟಿಸುವ ಗುರಿ ಹೊಂದಿದೆ ಎಂದರು.
ಕೂಡ್ಲಿಗಿ ಪಟ್ಟಣ ಸೇರಿ ಕ್ಷೇತ್ರದ ೧೯೦ ಹಳ್ಳಿಗಳ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡದೇ ಸಮನಾಗಿ ಅಭಿವೃದ್ಧಿ ಕಾರ್ಯ ನಡೆಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯ ಹೆಚ್ಚಿನ ಅನುದಾನವನ್ನು ಉಜ್ಜಯಿನಿ ಭಾಗಕ್ಕೆ ನೀಡಲಾಗಿದೆ. ಉಜ್ಜಯಿನಿಯಲ್ಲಿ ೫ ಕೋಟಿ ರೂ.ಗಳ ವೆಚ್ಚದಲ್ಲಿ ಯಾತ್ರಿ ನಿವಾಸ, ೨೦ ಕೋಟಿ ರೂ.ಗಳಲ್ಲಿ ಉಜ್ಜಯಿನಿ ಕೂಡ್ಲಿಗಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಅಲ್ಲದೇ ಉಜ್ಜಯಿನಿ ನಿಂಬಳಗೇರೆ ರಸ್ತೆ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಡಿ ೧೬ ಕೋಟಿ ರೂ, ತೂಲಹಳ್ಳಿ ಬಳಿ ಸೇತುವೆ ನಿರ್ಮಾಣಕ್ಕೆ ೧ ಕೋಟಿ ರೂ. ಮಂಜೂರಾಗಿದೆ. ಅಲ್ಲದೇ ಸುಂಕದಕಲ್ಲು ಗ್ರಾಮಕ್ಕೆ ಸರಕಾರಿ ಪ್ರೌಢ ಶಾಲೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದೆ. ಇತರೆ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾಗಿರಾಗಿದೆ. ಒಂದು ವರ್ಷದಲ್ಲಿ ಈ ಭಾಗದ ಎಲ್ಲ ರಸ್ತೆಗಳು ಅಭಿವೃಧ್ಧಿಯಾಗಲಿವೆ ಎಂದು ಹೇಳಿದರು.
ರಾಜ್ಯ ಬೀಜ ನಿಗಮ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ ಮಾತನಾಡಿ, ಕಾಮಗಾರಿಗಳನ್ನು ಗುತ್ತಿಗೆ ಪಡೆದ ಏಜೆನ್ಸಿಯವರು ಗುಣಮಟ್ಟದಲ್ಲಿ ಕಾಮಗಾರಿ ನಡೆಸಬೇಕು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಾಮಾನ್ಯ ಜನರು ಹೇಳುವ ಅಭಿಪ್ರಾಯಕ್ಕೂ ಶಾಸಕರು ಮನ್ನಣೆ ನೀಡಿದ್ದಾರೆ ಎಂದರು.
ಗ್ರಾಪಂ ಸದಸ್ಯ ಚಂದ್ರಪ್ಪ ಮಾತನಾಡಿ, ಉಜ್ಜಯಿನಿ ಭಾಗದ ಅಭಿವೃದ್ಧಿಗೆ ಮುಖ್ಯಮಂತ್ರಿಗಳಾದಿಯಾಗಿ ಅನೇಕ ಸಚಿವರುಗಳಿಂದ ಬರೀ ಭರವಸೆ ಸಿಗುತ್ತಿದ್ದವು. ಆದರೆ ಶಾಸಕರಾಗಿ ಒಂದೂವರೆ ವರ್ಷದಲ್ಲಿ ಎಸ್.ಟಿ.ಶ್ರೀನಿವಾಸರವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದರು.
ಗ್ರಾಪo ಅಧ್ಯಕ್ಷ ನಿಂಗಮ್ಮ ಅದ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ.ಗುರುಸಿದ್ದನಗೌಡ, ಕೊಡದಪ್ಪ, ಶಾಂತನಗೌಡ, ರಿಜ್ವಾನ್‌ಸಾಬ್, ರಾಜೇಂದ್ರಪ್ಪ, ಸಿದ್ದೇಶ, ರಂಗಪ್ಪ, ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ, ವೆಂಕಟೇಶ್, ಲೋಕೋಪಯೋಗಿ ಇಲಾಖೆ ಇಇ ದೇವದಾಸ್, ಎಇಇ ನಾಗನಗೌಡ ಇತರರು ಇದ್ದರು. ಸಿದ್ದೇಶ ನಿರ್ವಹಿಸಿದರು.

 


ವರದಿ:- ಎಂ.ಮಲ್ಲಿಕಾರ್ಜುನ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend