ಹೊಳಲ್ಕೆರೆಯಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಲಾಗಿತ್ತು…!!!

Listen to this article

ಹೊಳಲ್ಕೆರೆ : ಪೌರಕಾರ್ಮಿಕರು ಸ್ವಚ್ಚ ಭಾರತ ನಿರ್ಮಾಣಕ್ಕೆ ಪಣತೊಟ್ಟಿರುವ ಸರಕಾರದ ಸೈನಿಕರು. ಪೌರಕಾರ್ಮಿಕರ ಪರಿಶ್ರಮ ಎಂದಿಗೂ ಸ್ಮರಣೀಯ ಎಂದು ತಹಸೀಲ್ದಾರ್ ಬೀಬಿ ಫಾತೀಮಾ ತಿಳಿಸಿದರು.
ಅವರು ಪುರಸಭೆ ಕಚೇರಿ ಹಮ್ಮಿಕೊಂಡಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣದಲ್ಲಿ ನಿತ್ಯ ಸಾಕಷ್ಟು ಕಸ ಘನತ್ಯಾಜ್ಯಗಳನ್ನು ಸ್ವಚ್ಚಗೊಳಿಸಿ ಶುದ್ದ ಪರಿಸರ ನಿರ್ಮಿಸಿ, ಆರೋಗ್ಯವಂತ ಸಮಾಜ ಕಟ್ಟಿಕೊಡುವ ಪೌರಕಾರ್ಮಿಕರಿಗೆ ಸಮಾಜದ ಪ್ರತಿಯೊಬ್ಬರು ಗೌರವಿಸಬೇಕು. ಸ್ವಚ್ಚತೆ ರಾಷ್ಟçದ ಗೌರವದ ಸಂಕೇತ. ಪೌರಕಾರ್ಮಿಕ ದಿನನಿತ್ಯ ಪಟ್ಟಣವನ್ನು ಸ್ವಚ್ಚಗೊಳಿಸಲು ಶ್ರಮಿಸುತ್ತಾರೆ ಎಂದು ತಿಳಿಸಿದರು.
ಸದಸ್ಯ ಬಿ.ಎಸ್.ರುದ್ರಪ್ಪ ಮಾತನಾಡಿ, ನಾವು ನಮ್ಮ ಮನೆಯ ಕಸವನ್ನು ಸ್ವಚ್ಚಗೊಳಿಸಲು ಹಿಂಜರಿಯುವ ಈ ಸಮಯದಲ್ಲಿ ಪೌರಕಾರ್ಮಿಕರು ಇಡೀ ಪಟ್ಟಣದ ಕಸವನ್ನು ಸ್ವಚ್ಚಗೊಳಿಸುತ್ತಾರೆ. ಪೌರಕಾರ್ಮಿಕರು ಸರಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅರ್ಥಿಕ, ಶೈಕ್ಷಣಿಕ, ಸಾಮಾಜಿಕ ಪ್ರಗತಿ ಸಾಧಿಸಬೇಕೆಂದು.
ಸದಸ್ಯ ಕೆ.ಸಿ.ರಮೇಶ್ ಮಾತನಾಡಿ, ಪೌರಕಾರ್ಮಿಕರಿಗೆ ಸರಕಾರಗಳು ಬರಪೂರ ಸೌಲಭ್ಯಗಳನ್ನು ಕಲ್ಪಿಸಬೇಕು. ಆರೋಗ್ಯವಿಮೆ, ವೇತನ ಭತ್ಯೆಗಳನ್ನು ಹೆಚ್ಚಿಸಬೇಕು. ಆರೋಗ್ಯ ತಪಾಸಣೆ, ಸುರಕ್ಷತಾ ಧರಿಸುಗಳ ವಿತರಣೆ ಮಾಡಬೇಕು. ಸ್ವಚ್ಚತೆಗೆ ಅತ್ಯಾದುನಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು.
ಸದಸ್ಯ ಪಿ.ಹೆಚ್.ಮುರುಗೇಶ್ ಮಾತನಾಡಿ, ಸರ್ಕಾರ ಪೌರಕಾರ್ಮಿಕರಿಗೆ ಗೃಹಭಾಗ್ಯ, ವಿಶೇಷ ಭತ್ಯೆ, ಮಕ್ಕಳ ವಿದ್ಯಾಭ್ಯಾಸ ಸಹಾಯಧನ ನೀಡುತ್ತಿದೆ. ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಸದಸ್ಯರಾದ ಆರ್.ಎ.ಅಶೋಕ್, ಡಿ.ಎಸ್.ವಿಜಯ, ಪಿ.ಆರ್.ಮಲ್ಲಿಕಾರ್ಜುನ, ಸವಿತನರಸಿಂಹ ಖಾಟ್ರೋತ್, ಮಮತ ಜಯಸಿಂಹ ಖಾಟ್ರೋತ್, ವಸಂತರಾಜಪ್ಪ, ನಾಮನಿರ್ದೇಶಿತ ಸದಸ್ಯರಾದ ಆರ್.ಎಸ್.ಮಂಜುನಾಥ್, ಬಸವರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಶ್, ಮುಖ್ಯಾಧಿಕಾರಿ ರಾಧ ಉಪಸ್ಥಿತರಿದ್ದರು. ಪೌರಕಾರ್ಮಿಕರಿಗೆ ಸನ್ಮಾನಿಸಲಾಗಿತ್ತು. ಪೌರಕಾರ್ಮಿಕರ ಪುರಸಭೆ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಶಿಭಿರ ನಡೆಸಲಾಗಿತ್ತು.
ಹೊಳಲ್ಕೆರೆಯಲ್ಲಿ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಬೀಬಿ ಫಾತೀಮಾ, ಪುರಸಭೆ ಸದಸ್ಯರಾದ ಕೆ.ಸಿ.ರಮೇಶ್, ಬಿ.ಎಸ್.ರುದ್ರಪ್ಪ, ಡಿ.ಎಸ್.ವಿಜಯ್, ಪಿ.ಹೆಚ್.ಮುರುಗೇಶ್ ಮತ್ತೀತರರು ಇದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend