ಸ್ವಚ್ಚತೆ ಕಾಪಾಡಿಕೊಂಡರೆ ಆರೋಗ್ಯವಾಗಿರಲು ಸಾದ್ಯ ಎಂದು ತಾಲೂಕು ಆರೋಗ್ಯ ಇಲಾಖೆಯ ಚಂದ್ರ ನಾಯ್ಕ್…!!!

Listen to this article

ಸ್ವಚ್ಚತೆ ಕಾಪಾಡಿಕೊಂಡರೆ ಆರೋಗ್ಯವಾಗಿರಲು ಸಾದ್ಯ ಎಂದು ತಾಲೂಕು ಆರೋಗ್ಯ ಇಲಾಖೆಯ ಚಂದ್ರ ನಾಯ್ಕ್ ಹೇಳಿದರು. ಹೊಳಲ್ಕೆರೆ ತಾಲ್ಲೂಕಿನ ಅರೆಹಳ್ಳಿ ಗ್ರಾಮ ಪಂಚಾಯತಿಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತಿ ಆರೋಗ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯಿಯ ಸದಸ್ಯರುಗಳು ಗ್ರಾಮಗಳಲ್ಲಿ ಶುದ್ದವಾದ ಕುಡಿಯುವ ನೀರಿನ ಬಗ್ಗೆ ಗಮನಹರಿಸಬೇಕು ಎಲ್ಲ ವಾಟರ್ ಮ್ಯಾನ್ ಗಳಿಗೆ ಲೀಕೇಜ್ ಆಗುವ ಪೈಪ್ ಗಳನ್ನು ಬೇಗ ಸರಿಪಡಿಸಿ ಪೈಪ್ ಗಳಲ್ಲಿ ಕಲುಶಿತವಾಗದಂತೆ ಗಮನ ಹರಿಸಿ ನೀರಿನ ಟ್ಯಾಂಕ್ ಗಳನ್ನು ಆಗಾಗ್ಗೆ ಸ್ವಚ್ಚಗೊಳಿಸಿ ಜನರಿಗೆ ಶುದ್ದವಾದ ನೀರನ್ನು ಕೊಟ್ಟರೆ ಜನರ ಆರೋಗ್ಯ ಚೆನ್ನಾಗಿ ಇರುತ್ತದೆ ಎಂದು ಸಲಹೆ ನೀಡಿದರು. ಹಳ್ಳಿಗಳಲ್ಲಿ ಟಿ ಬಿ ಖಾಯಿಲೆ ಇರುವ ರೋಗಿಗಳನ್ನು ಗ್ರಾಮದಿಂದ ಹೋರಗೆ ಇಡಬೇಡಿ ಸದಸ್ಯರುಗಳು ಇಂತವರನ್ನು ಗುರುತಿಸಿ ಇವರನ್ನು ದತ್ತು ತೆಗೆದುಕೊಂಡು ಪೌಷ್ಟಿಕ ಆಹಾರ ನೀಡಿದರೆ ಬೇಗ ಅವರು ಗುಣಮಖರಾಗುತ್ತಾರೆ. ಜನರು ಆರೋಗ್ಯ ವಾಗಿರಬೇಕೆಂದರೆ ಕನಿಷ್ಠ ನಲವತ್ತು ನಿಮೀಷ ನಡೆದಾಡಬೇಕು ಐದು ನಿಮೀಷನಾದರು ನಗಬೇಕು ಸಕರಾತ್ಮಕವಾದ ಚಿಂತನೆಗಳನ್ನು ಮಾಡುತ್ತಾ ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸಿದರೆ ಯಾವ ಖಾಯಿಲೆಗಳು ಬರುವುದಿಲ್ಲ ಎಂದು ಹೇಳಿದರು. ಸಿ ಎಚ್ ಓ ಮಂಜುಳ ಮಾತನಾಡಿ ಮಹಿಳೆಯರು ವೃತುಸ್ರಾವದ ಸಂದರ್ಭದಲ್ಲಿ ಅವರಿಗೆ ಮನೆಯವರು ತುಂಬಾ ಆರೈಕೆ ಮಾಡಬೇಕು, ಪೌಷ್ಟಿಕ ಆಹಾರಗಳನ್ನು ಈ ಸಂದರ್ಭದಲ್ಲಿ ನೀಡಬೇಕು ಮಹಿಳೆಯರನ್ನು ಮುಟ್ಟಿನ ಸಂದರ್ಭದಲ್ಲಿ ಮನೆಯಿಂದ ಹೊರಗಿಡದೆ ಅವರನ್ನು ಆರೈಕೆ ಮಾಡಿ ಎಂದು ತಿಳಿಸಿದರು. ಅಲ್ಲದೆ ಮಹಿಳೆಯರು ವೃತು ಸ್ವಾವವಾದ ಸಂದರ್ಭದಲ್ಲಿ ಉಪಯೋಗಿಸದ ಪ್ಯಾಡ್ ಗಳನ್ನು ಎಲ್ಲಿಯೂ ಹಾಕಬಾರದಿ ಒಂದು ವೇಸ್ಟ್ ಪೇಪರ್ ಒಳಗಡೆ ಇಟ್ಟುಕೊಂಡು ನೀಟಾಗಿ ಸುತ್ತಿ ಸುತ್ತಿ ಕಸದ ಡಬ್ಬಿಗಳಿಗೆ ಹಾಕಬೇಕು ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಮೇಲ್ವಿಚಾರಕಿ ಲಕ್ಷ್ಮೀ ಮಾತನಾಡಿ ಅಂಗನವಾಡಿಗಳಲ್ಲಿ ತಾಯಂದಿರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕತೆಯ ಆಹಾರವನ್ನು ನೀಡಲಾಗುತ್ತಿದೆ ಇದರ ಉಪಯೋಗವನ್ನು ಪಡೆದುಕೊಳ್ಳಿ ಬಾಲ್ಯ ವಿವಾಹಗಳನ್ನು ನಾವೆಲ್ಲರು ಸೇರಿ ತಡೆಗಟ್ಟುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ತಿಳಿಸಿದರು. ಗ್ರಾ ಪಂ ಅದ್ಯಕ್ಷರಾದ ಪಾಲೇಗೌಡ್ರು ಮಾತನಾಡಿ ಗ್ರಾಮ ಪಂಚಾಯತಿಯ ವತಿಯಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ, ಜನರು ಸಹ ನಿಮ್ಮ ಮನೆಯ ಸುತ್ತ ಮುತ್ತ ಸ್ವಚ್ಚತೆಯಿಂದ ಇಟ್ಟಕೊಂಡು ಆರೋಗ್ಯವಾಗಿ ಇರಬೇಕೆಂದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣಮೂರ್ತಿ ಮಾತನಾಡಿ ನಮ್ಮ ಪಂಚಾಯತಿ ವತಿಯಿಂದ ಹಳ್ಳಿಗಳಲ್ಲಿ ಜನರ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಿ ಆಗಾಗ್ಗೆ ಚರಂಡಿ ಸ್ವಚ್ಚತೆ ನೀರೀನ ಟ್ಯಾಂಕ್ ಗಳನ್ನು ಸ್ವಚ್ಚ ಗೊಳಿಸಿ ಶುದ್ದವಾದ ನೀರನು ಒದಗಿಸುತ್ತಿದ್ದೇವೆ ಜನರಿಗೂ ಸಹ ಎಲ್ಲ ಸಬೆಗಳಲ್ಲೂ ಆರೋಗ್ಯದ ಬಗ್ಗೆ ಗ್ರಾಮಗಳಲ್ಲಿ ಜಾತ ನಡೆಸಿ ಜಾಗೃತಿ ಮೂಡಿಸುವ ಮೂಲಕ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸುತ್ತಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ಸ್ವಚ್ಚತೆಯ ಪ್ರತಿಜ್ಞಾ ವಿಧಿಯನ್ನು ಗ್ರಾ. ಪಂ ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣ ಮೂರ್ತಿ ಬೋದಿಸಿದರು. ತದ ನಂತರ 2023 – 2024 ನೇ ಸಾಲಿನ ಜಮಾಬಂಧಿ ಕಾರ್ಯಕ್ರಮವನ್ನು ನಡೆಸಿದರು.
ತಾಲೂಕು ಪಂಚಾಯತಿ ಯೋಜನಾಧಿಕಾರಿ ಸುರೇಶ್, ಗ್ರಾ ಪಂ ಉಪಾಧ್ಯಕ್ಷರಾದ ಸರೋಜ ಸಮಾಜ ಕಲ್ಯಾಣ ಇಲಾಖೆಯ ಸಿಬಂಧಿ ರವಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಧರ್ ಮೂರ್ತಿ, ಗ್ರಾ ಪಂ ಎಲ್ಲಾ ಸದಸ್ಯರುಗಳು, ಸಿಬಂದಿಗಳು, ಅಂಗನವಾಡಿ ಕಾರ್ಯ ಕರ್ತರು, ಆಶಾ ಕಾರ್ಯಕರ್ತರು ಮಹಿಳಾ ಒಕ್ಕೂಟದ ಪಧಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಇದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend