ಹೊಳಲ್ಕೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು…!!!

Listen to this article

ಹೊಳಲ್ಕೆರೆ : ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ಸದೃಢ ಸಮಾಜ ಕಟ್ಟುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಶಿಕ್ಷಕರುಗಳಿಗೆ ಕರೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಮುಖ್ಯ ಶಿಕ್ಷಕರ ಸಂಘ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಸಂವಿಧಾನ ಸೌಧದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಉದ್ಗಾಟಿಸಿ ಮಾತನಾಡಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರು ಶಿಕ್ಷಕ ವೃತ್ತಿಯಿಂದ ರಾಷ್ಟ್ರಪತಿ ಹುದ್ದೆಗೇರಿದರು. ಅವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ನಿಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು ಶಾಲೆಗೆ ಬರುವ ಮಕ್ಕಳನ್ನು ನಿಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡು ಪಾಠ ಹೇಳಿಕೊಡಿ. ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡುವ ತಾಯಿಯೆ ಮೊದಲ ಗುರು. ಪರಮ ಪವಿತ್ರವಾದ ಶಿಕ್ಷಕ ವೃತ್ತಿಗೆ ಚ್ಯುತಿ ಬರದಂತೆ ಕೆಲಸ ಮಾಡಿ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಳನೆ ವೇತನ ಆಯೋಗಕ್ಕೆ ಒಪ್ಪಿಕೊಂಡಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಸ್ವಂತ ಖರ್ಚಿನಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿದ್ದೇನೆ ಎಂದು ಶಾಸಕ ಡಾ. ಎಂ ಚಂದ್ರಪ್ಪ ತಿಳಿಸಿದರು.


ವೈದ್ಯ ಡಾ.ಹೆಚ್.ಜಿ.ಉಮಾಪತಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ, ಪ್ರೌಢಶಾಲೆ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಗಿತ್ತು. ಖ್ಯಾತ ವ್ಯಂಗ್ಯ ಚಿತ್ರಕಾರ ಡಾ.ಹೆಚ್.ಬಿ.ಮಂಜುನಾಥ್ ಉಪನ್ಯಾಸ ನೀಡಿದರು.
ತಹಸೀಲ್ದಾರ್ ಬೀಬಿ ಫಾತೀಮಾ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ತಾ.ಪಂ.ಇಒ ರವಿಕುಮಾರ್, ಪುರಸಭೆ ಸದಸ್ಯರಾದ ಬಿ.ಎಸ್.ರುದ್ರಪ್ಪ, ಪಿ.ಆರ್.ಮಲ್ಲಿಕಾರ್ಜುನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಶ್, ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರನಾಥ್.ಎಸ್, ಜಿ.ಪಂ.ಮಾಜಿ ಸದಸ್ಯರಾದ ಬಿ.ಗಂಗಾಧರ್, ಎಸ್.ಜಿ.ರಂಗಸ್ವಾಮಿ, ಎಂ.ಜಿ.ಲೋಹಿತ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಲಕ್ಷ್ಮಿ ದೇವೇಂದ್ರಪ್ಪಗಂಗಸಮುದ್ರ, ಹೆಚ್.ಟಿ.ಹನುಂತಪ್ಪ, ನಾಮನಿರ್ದೇಶಕ ಸದಸ್ಯ ಮಂಜುನಾಥ ಸಂಗನಗುಂಡಿ, ಶಿಕ್ಷಕರ ಸಂಘದ ಕರ‍್ಯಧ್ಯಕ್ಷ ಎ.ಜಯಪ್ಪ, ನರಸಿಂಹಖಟ್ರೋತ್, ಕೆ.ಎಸ್.ನಿಜಲಿಂಗಪ್ಪ, ಸೈಯದ್ ಹಾರೋನ್, ಜಿ.ಎಂ.ಶಿವಪ್ಪ, ವಿವಿಧ ಸಂಘದ ಅಧ್ಯಕ್ಷರುಗಳಾದ ಸಿ.ಚಂದ್ರನಾಯ್ಕ, ವಿ.ಎಂ.ವೀರೇಶ್, ಕೆ.ಆರ್.ಮಹಾಲಿಂಗಪ್ಪ, ಕೆ.ಹನುಮಂತಪ್ಪ, ಬನಿಆಷಂ, ಎಸ್.ಲೊಕೇಶ್, ಎ.ಸಿ.ಗಂಗಾಧರಪ್ಪ, ಬಿ.ಟಿ.ಶಂಕರಮೂರ್ತಿ, ಎಂ.ನಟರಾಜ್, ಅರ್.ಎಸ್.ರಾಜಕುಮಾರ್, ಎಸ್.ಶೇಖರಪ್ಪ ಇದ್ದರು.
ಕಾರ್ಯಕ್ರಮಕ್ಕು ಮೊದಲು ಪಟ್ಟಣದ ರಾಜ ಬೀದಿಗಳಲ್ಲಿ ಡಾ.ರಾಧಾಕೃಷ್ಣ ಸರ್ವಪಲ್ಲಿ ಬಾವಚಿತ್ರ ಮೆರೆವಣಗೆಯನ್ನು ವಿವಿಧ ಕಲಾತಂಡಗಳ ಸಹಯೋಗದಲ್ಲಿ ನಡೆಸಲಾಗಿತ್ತು ಹೊಳಲ್ಕೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಎಂ.ಚoದ್ರಪ್ಪ…

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend