ಹೊಳಲ್ಕೆರೆ ತಾಲ್ಲೂಕಿನ ಬಿದರಿಕೆರೆ ಗ್ರಾಮ ಪಂಚಾಯತಿ ಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು ಅಧ್ಯಕ್ಷರಾದ ದಾನವೇಂದ್ರ ದಾನೇಶ್ ಮಾತನಾಡಿ ಪಂಚಾಯತಿಗೆ ಹದಿಮೂರು ಹಳ್ಳಿಗಳು ಸೇರಿದ್ದು. ಕುಡಿಯುವ ನೀರು, ವಿದ್ಯುತ್, ಚರಂಡಿ, ಗ್ರಾಮಗಳಲ್ಲಿ ಸ್ವಚ್ಚತೆ ರಸ್ತೆ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡುತ್ತಿದ್ದೇವೆ. ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯತಿಯ ಎಲ್ಲ ಸದಸ್ಯರು ಸಿಬಂದಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು..
ಈ ವೇಳೆ ಉಪಾಧ್ಯಕ್ಷರಾದ ವಿಶಾಲಮ್ಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮದುಕುಮಾರ್, ಕಂಪ್ಯೂಟರ್ ಆಪರೇಟರ್ ಚೂಡಾಮಣಿ, ಕಾರ್ಯದರ್ಶಿ ಸೇರಿದಂತೆ ಸರ್ವ ಸದಸ್ಯರು, ಗ್ರಾಮಸ್ಥರು ಸಭೆಯಲ್ಲಿ ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030