ಗಣೇಶ ಉತ್ಸವವನ್ನು ಸಂಭ್ರಮದಿಂದ ವಿಸರ್ಜಿಸಿದ ಸೊನ್ನ ಗ್ರಾಮಸ್ಥರು
ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನಗ್ರಾಮದಲ್ಲಿ 11ನೇ ವರ್ಷದ 5ನೇ ದಿನದ ಗಣೇಶ ಸಂಭ್ರಮಾಚರಣೆ ಮಾಡಲಾಯಿತು. ಶ್ರೀ ಊರಮ್ಮ ದೇವಿ ಸಂಘ ಸದಸ್ಯರು ಮತ್ತು ಈ ಗ್ರಾಮದಲ್ಲಿ ಎಲ್ಲಾ ಕುಲ ಜಾತಿ ಮರೆತು ಒಂದಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು. 5ನೇ ದಿನದ ಗಣೇಶ ವಿಸರ್ಜನೆ ಮಾಡಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಊರಿನ ಮುಖಂಡರು ಭಾಗವಹಿಸಿದರು, ಈ ಗಣೇಶ ಉತ್ಸವ ಸಂಭ್ರಮ ಕುರಿತು ಶ್ರೀ ಊರಮ್ಮ ದೇವಿ ಸಂಘದ ಸದಸ್ಯರಾದ ಪೂಜಾರ್ ಜಗದೀಶ್, ನಂಜುಂಡಿ ನಾಗರಾಜ್, ಮಾತನಾಡಿ ಸುಮಾರು 11 ವರ್ಷದಿಂದ ಊರಮ್ಮ ದೇವಸ್ಥಾನ ದಲ್ಲಿ ಪ್ರತಿ ವರ್ಷ ಐದು ದಿನಗಳ ಕಾಲ ಪ್ರತಿದಿನವೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು. ಸೊನ್ನ ಗ್ರಾಮದ ಭಕ್ತಾದಿಗಳು , ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತು ಸದಸ್ಯರು, ಹಾಗೂ ಪೊಲೀಸ್ ಇಲಾಖೆ ಸಹಕರಿಸಿದರು ಅವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಲು ಇಚ್ಛಿಸುತ್ತೇವೆ, ಗಣೇಶ ವಿಸರ್ಜನೆ ಎಲ್ಲರೂ ಒಂದಾಗಿ ಸಂಭ್ರಮದಿಂದ ಗಣೇಶವನ್ನು ವಿಸರ್ಜಿಸಿದರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಊರಮ್ಮ ದೇವಿ ಸಂಘದ ಸದಸ್ಯರು ಎಂ ಎಂ ಮಲ್ಲಯ್ಯ, ಎಚ್ ಸುರೇಶ್, ಬಿಎಂ ಕೊಟ್ರೇಶ್, ಎಸ್ ಮಂಜುನಾಥ್, ಹೆಚ್ ಚನ್ನಬಸಪ್ಪ, ಎಚ್ ಸಂತೋಷ್, ಬಿ ನೀಲಪ್ಪ ಸರ್ವ ಸದಸ್ಯರು ಭಾಗವಹಿಸಿದ್ದರು…
ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030