ಬಾಲಕನ ಮೇಲೆ ಮಂಗಗಳ ಗುಂಪಿನಿಂದ ದಾಳಿ.
ಹಗರಿಬೊಮ್ಮನಹಳ್ಳಿ ತಾಲೂಕು ಸೊನ್ನ ಗ್ರಾಮದಲ್ಲಿ ಮಂಗಗಳ ಗುಂಪುಗಳಿಂದ ಬಾಲಕನ ಮೇಲೆ ದಾಳಿ ಅರಣ್ಯದಿಂದ ಊರು ಒಳಗೆ ಬಂದ ಮಂಗಗಳ ಗುಂಪು ಎಂ ವಿನಾಯಕ (14) ಎಂಬ ಬಾಲಕನ ಮೇಲೆ ದಾಳಿ ಮಾಡಿದವು. ಬಲಗೈ ಗೆ ತುಂಬಾ ಗಾಯವಾಗಿದ್ದು ಮುಖದ ಮೇಲೆ ಸಣ್ಣಪುಟ್ಟ ಗಾಯಗೊಂಡ ಬಾಲಕನನ್ನು ಸರ್ಕಾರಿ ಆಸ್ಪತ್ರೆ ದಾಖಲು ಮಾಡಲಾಗಿದೆ. ಸುಮಾರು 15 ದಿನಗಳಿಂದ ಊರ ಒಳಗೆ ಪ್ರವೇಶಿಸಿ ಜನರಿಗೆ ತುಂಬಾ ತೊಂದರೆ ಕೊಡುತ್ತಿದ್ದಾವೆ. ಊರಿನ ಜನರು ಮಂಗನ ದಾಳಿಗೆ ತುಂಬಾ ಭಯಭೀತರಾಗಿದ್ದಾರೆ. ಕೂಡಲೆ ಅರಣ್ಯ ಅಧಿಕಾರಿಗಳು ಮಂಗಗಳ ಗುಂಪನ್ನು ಊರಿನಿಂದ ಕಾಡಿನ ಕಡೆಗೆ ಮರಳಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ..
ವರದಿ, ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030