ನೂತನವಾಗಿ ಬಸ್ ಚಾಲನೆ ಹಗರಿಬೊಮ್ಮನಹಳ್ಳಿ ಬಸ್ ಡಿಪೋಯಿಂದ.. ಹಗರಿಬೊಮ್ಮನಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಯ ಮಾರ್ಗವಾಗಿ ಸಾರ್ವಜನಿಕರು ಮತ್ತು ಕಾಲೇಜ್ ಶಾಲಾ ವಿಧ್ಯಾರ್ಥಿಗಳಿಗೆ ಅನುಕೂಲಕ್ಕೆ ನಂದಿಪುರ,
ಜೀ ಕೋಡಿಹಳ್ಳಿ, ಕೊಂಡೇನಹಳ್ಳಿ, ಗದ್ದಿಕೇರಿ, ಮೋರಗೇರಿ,ಸೊನ್ನ ಮಾರ್ಗವಾಗಿ ಹರಪನಹಳ್ಳಿಗೆ ಹೋಗುವ ಬಸ್ ಗೆ ಪೂಜಾ ನೆರವೇರಿಸುವ ಮುಖಾಂತರ ಮೋರಿಗೇರಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು, ಈ ಸಂದರ್ಭದಲ್ಲಿ ಡಿಪೋ ಮ್ಯಾನೇಜರ್ ನೀಲಪ್ಪ ಸರ್ , ಗ್ರಾಮ ಪಂಚಾಯತಿ ಹಂಗಾಮಿ ಅಧ್ಯಕ್ಷರಾದ ಸಿ. ಉದಯ ಕುಮಾರ್. ಹಿರಿಯರಾದ ಹೆಚ್. ಬೆಟ್ಟನ ಗೌಡ್ರು, ಕೆ. ರಾಮಣ್ಣ, ಸಿದ್ದನಗೌಡ, ಶೇಖರ ಗೌಡ, ಹಾಗೂ ಗ್ರಾ. ಪಂ. ಸದಸ್ಯರಾದ, ಪಿ. ಹನುಮೇಶ್, ಸಿ.ಶೇಖರಪ್ಪ, ಕೆ. ನಾಗರಾಜ್, , ಕೆ. ಕರಿಬಸಪ್ಪ, ಕೆ. ಶೈಲಜಾ, ಎ. ನಿರ್ಮಲ, ಸಿಬ್ಬಂದಿಗಳು , ಹಿರಿಯ ನಾಗರಿಕ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು, ಸಂಘ ಸಂಸ್ಥೆ ಪ್ರಮುಖರು, ಉಪಸ್ಥಿತರಿದ್ದರು,
ವರದಿ ಮ್ಯಾಗೇರಿ ಸಂತೋಷ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030