ಹೇಡಿಗಿನಾಳ ರಾಗಲಪರ್ವಿ ಗ್ರಾಮಪಂಚಾಯತಿಗಳ ಕಡತವನ್ನು ಪರಿಶೀಲಿಸಿದ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಎಂಡಿ ಆಲಂಭಾಷಾ
ಸಿಂಧನೂರು. ತಾಲೂಕಿನ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೇಡಿಗಿನಾಳು ರಾಗಲಪರ್ವಿ ಗ್ರಾಮ ಪಂಚಾಯಿತಿಗೆ ತಾಲೂಕ್ ಪಂಚಾಯತ್ ಸಹಾಯಕ ನಿರ್ದೇಶಕರು ಎಂಡಿ ಆಲಂಭಾಷಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಯೋಜನೆಯ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿದರು. ಕೆಲವೊಂದು ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿದಾಗ ಸಣ್ಣಪುಟ್ಟ ಲೋಪ ದೋಷಗಳು ಕಂಡು ಬಂದವು ಇವುಗಳನ್ನು ಮೂರು ದಿನಗಳೊಳಗೆ ಕಾಲಾವಕಾಶ ನೀಡಿದ್ದು ಮೂರು ದಿನಗಳ ನಂತರ ಕಡತವನ್ನು ಸರಿಪಡಿಸಿಕೊಂಡು ಬರಬೇಕೆಂದು ಪಂಚಾಯತಿ ಸಿಬ್ಬಂದಿಗಳಿಗೆ ಸೂಚಿಸಿದರು.ಹಾಗೂ ಮತ್ತೆ ಇದೇ ತರ ಕಂಡು ಬಂದರೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ.ಎಂದು ತಿಳಿಸಿದರು…
ವರದಿ, ಹೆಚ್. ಮಲ್ಲೇಶ್ವರ ಸಿಂದನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030