ತಾಲೂಕು ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ…!!!

Listen to this article

ತಾಲೂಕು ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ.

ಸಿಂಧನೂರು : ಜೂನ್ 27. ಕೇಂಪೆಗೌಡ ಜಯಂತಿ ಆಚರಣೆ ಫೋಟೋಗಳಿಗೆ ಹೂವಿನಹಾರ ಹಾಕಿ ಪೂಜೆ ಸಲ್ಲಿಸಿ ರಜಾ ತೆಗೆದುಕೊಂಡು ಮನೆಗೆ ಹೋಗುವದು ಆಗಬಾರದು ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ನಗರದ ತಹಸೀಲ್ದಾರ್ ಕಾರ್ಯಲಯದಲ್ಲಿ ನಾಡ ಪ್ರಭು ಕೆಂಪೇಗೌಡರವರ ಜಯಂತಿ ಆಚರಣೆ ಸಂಧರ್ಭದಲ್ಲಿ ಅವರ ಫೋಟೋಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿದ ಅವರು, ಕರ್ನಾಟಕದ ರಾಜ್ಯದಾನಿ ಬೆಂಗಳೂರು ಇಂದು ತಲೆಯೆತ್ತಿ ನಿಲ್ಲಬೇಕಾದರೆ ಕೆಂಪೇಗೌಡರ ಕೊಡುಗೆ ಅಪಾರವಾದದ್ದು.1537 ರಲ್ಲಿ ಬೆಂಗಳೂರಿಗೆ ಎಂಟು ದಿಕ್ಕುಗಳಲ್ಲಿ ಕೆಂಪು ಕೋಟೆ ದ್ವಾರಗಳನ್ನು ಕಟ್ಟಿ ಉತ್ತರ ದಿಂದ ದಕ್ಷಿಣದವರೆಗೆ ರಸ್ತೆಗಳನ್ನು ನಿರ್ಮಿಸಿದ್ದು ಅವರ ಕಲ್ಪನೆ ಮುಂದಾಲೋಚನೆ ಎಷ್ಟಿರಬೇಕು ಎಂಬುದು ನಾವೇಲ್ಲ ಅರ್ಥ ಮಾಡಿಕೊಳ್ಳಬೇಕು ಎಲ್ಲಾ ಜಾತಿ ಜನಾಂಗದವರಿಗೆ ಸಮಾನತೆಗಾಗಿ ನೀಡಿದ್ದಾರೆ.ಮೂಲಭೂತ ಸೌಕರ್ಯ, ನಗರಾಭಿವೃದ್ಧಿ, ಕೃಷಿ, ನೀರಾವರಿ, ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದರು.ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ , ಎಮ್ ಎಲ್ ಸಿ ತಿಪ್ಪೆಸ್ವಾಮಿ,ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ, ನಗರಸಭೆ ಸದ್ಯಸರಾದ ಚಂದ್ರು ಮೈಲಾರ,ಹನುಮೇಶ್.ಕೆ ,ಧರ್ಮಗೌಡ ಮಲ್ಕಾಪುರ ,ಅಶೋಕ್ ಗದ್ರಟಗಿ , ತಹಸೀಲ್ದಾರ್ ಮಂಜುನಾಥ್ ಬೋಗಾವತಿ ,ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ, ವೆಂಕನಗೌಡ ಕಲ್ಲೂರು, ಲಕ್ಷ್ಮಿದೇವಿ ,ಇನ್ನಿತರರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend