ಅಗ್ನಿಪತ್ತ ಯುವಕರ ಭವಿಷ್ಯ ಹಾಳು ಮಾಡುವ ಯೋಜನೆ – ಸಂಸದ ಪ್ರಜ್ವಲ್ ರೇವಣ್ಣ…!!!

Listen to this article

ಅಗ್ನಿಪತ್ತ ಯುವಕರ ಭವಿಷ್ಯ ಹಾಳು ಮಾಡುವ ಯೋಜನೆ – ಸಂಸದ ಪ್ರಜ್ವಲ್ ರೇವಣ್ಣ.

ಸಿಂಧನೂರು : ಜೂನ್ 28. ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಅಗ್ನಿಪತ್ತ ಅನ್ನೋದು ಯುವಕರ ಭವಿಷ್ಯ ಹಾಳು ಮಾಡುವ ಯೋಜನೆಯಾಗಿದೆ. ಸಿ.ಆರ್.ಪಿ.ಎಪ್ ಯೋಧರಿಗೆ ಮೂಲಭೂತ ಸೌಕರ್ಯ ಕೊಡುವುದಕ್ಕೆ ಆಗುತ್ತಿಲ್ಲ, ಅವರು ಹೋರಾಟ ಮಾಡುತ್ತಿದ್ದಾರೆ ಈ ಸಮಯದಲ್ಲಿ ಅಗ್ನಿಪತ್ತ ಎನ್ನುವ ಯೋಜನೆ ಅಗ್ನಿ ವೀರರನ್ನು 4 ವರ್ಷ ಕೆಲಸಕ್ಕೆ ತೆಗೆದುಕೊಂಡು ಉಪಯೋಗ ಮಾಡಿಕೊಂಡು ಅವರನ್ನು ಹಾಳು ಮಾಡಿ ಮನೆಗೆ ಕಳಿಸಿದರೆ ಅವರ ಮುಂದಿನ ಭವಿಷ್ಯ ಏನಾಗಬಹುದು ಎಂದರು.

ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಸಾಮಾಜಿಕ ಜಾಲತಾಣದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ಯಾವ ರೀತಿ ಜನರನ್ನು ತಲುಪಬೇಕು ಎಂಬುದು ನಾಯಕತ್ವ, ಶಿಸ್ತು ಬೆಳೆಸಲು ತರಬೇತಿ ನೀಡಲಾಗುತ್ತದೆ. 2023ರ ಚುನಾವಣೆಯಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಶತಸಿದ್ದ. ಬಿಜೆಪಿ, ಕಾಂಗ್ರೆಸ್ ಪಕ್ಷ ಧರ್ಮ ದಂಗಲ್ ನಡೆಸುತ್ತಿವೆ,ಆದರೆ ಜೆಡಿಎಸ್ ಪಕ್ಷ ರಾಜ್ಯದ ಅಭಿವೃದ್ದಿ ಕಡೆ ಗಮನ ಕೊಡುತ್ತಿದೆ. ಈ ಧರ್ಮ ದಂಗಲ್ ಯಾರು ಮಾಡುತ್ತಿದ್ದಾರೆ ಅಂತ ಇಡೀ ರಾಜ್ಯದ ಜನರಿಗೆ ಗೋತ್ತಿದೆ, ಮುಂದಿನ ದಿನಗಳಲ್ಲಿ ಜನ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ. ಯುವಕರು ಇಂತಹ ವಿಷಯಕ್ಕೆ ಕಿವಿಗೋಡದೆ ತಂದೆ ತಾಯಿಯನ್ನು ಸಾಕುವಂತ ಕೆಲಸ ಮಾಡಬೇಕು. ಅಂಬೇಡ್ಕರ ಬರೆದ ಸಂವಿಧಾನದ ಪ್ರಕಾರ ನಾವು ನಡೆದುಕೊಂಡು ಭಾರತವನ್ನು ಕಟ್ಟಬೇಕು ಎಂದು ಹೇಳಿದರು.

ಒಂದು ಕಾಲದಲ್ಲಿ ತಂದೆ ತಾಯಿ ಹೇಳಿದ ಮೇಲೆ ಯುವಕರು ಮತ ಚಲಾವಣೆ ಮಾಡಬೇಕಾಗಿತ್ತು, ಆದರೆ ಕಾಲ ಬದಲಾಗಿದೆ ಯುವಕರ ಬಹಳಷ್ಟು ವಿದ್ಯಾವಂತ, ಬುದ್ದಿವಂತರಿದ್ದಾರೆ, ರಾಜಕೀಯದ ಬಗ್ಗೆ ಗಮನ ಹರಿಸಿ ತಿಳಿದುಕೊಂಡಿದ್ದಾರೆ. ಯುವಕರಿಗೆ ಮನ್ನಣೆ ಕೊಡಬೇಕೆಂಬ ಉದ್ದೇಶದಿಂದ ನಿಖಿಲ್ ಕುಮಾರಸ್ವಾಮಿ ಮತ್ತು ನನ್ನನ್ನು ಯುವ ಅಧ್ಯಕ್ಷರನ್ನಾಗಿ ಮಾಡಿದ್ದಾರೆ, ಯುವಕರನ್ನು ಹೆಚ್ಚು ಹೆಚ್ಚಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಉದ್ದೇಶವಾಗಿದೆ ಎಂದರು.

ಸುದ್ದಿಗಾರರ ಪ್ರಶ್ನೆಗೆ ಎಮ್ ಎಲ್ ಸಿ ಚುನಾವಣೆಯಲ್ಲಿ ಇಬ್ಬರು ಶಾಸಕರು ಜೆಡಿಎಸ್ ಪಕ್ಷದ ವಿರುದ್ಧ ಮತ ಚಲಾಯಿಸಿದ ಬಗ್ಗೆ ಅಧ್ಯಕ್ಷರು ಮತ್ತು ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.10 ಜನ ದುಷ್ಟರು ಪಕ್ಷ ಬಿಟ್ಟು ಹೋದರೆ 100 ಜನ ಒಳ್ಳೆಯವರು ಪಕ್ಷಕ್ಕೆ ಬರುತ್ತಾರೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಉಚ್ಚಾಟನೆ ಮಾಡುತ್ತೇವೆಂದರು.

ಉತ್ತರ ಕರ್ನಾಟಕಕ್ಕೆ ಪ್ರತ್ಯೇಕವಾದ ಅನುದಾನ ನೀಡಬೇಕು.ಆರ್ಟಿಕಲ್ 371 ಜೆ ಜಾರಿಗೆ ತರೋಕೆ ಹೋರಾಟ ಮಾಡಿದವರಲ್ಲಿ ಪ್ರಮುಖ ರಾದವರಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮಲ್ಲಿಕಾರ್ಜುನ ಖರ್ಗೆ ಕಾರಣ. ಈ ಭಾಗಕ್ಕೆ 15 ಸಾವಿರ ಕೋಟಿ ಅನುದಾನ ಬರುತಿತ್ತು,ಆದರೆ 371 ಜೆ ಜಾರಿಗೆ ಬಂದ ಮೇಲೆ 3 ಸಾವಿರ ಕೋಟಿ ಅನುದಾನ ಬರುತ್ತಿದೆ.

ದಲಿತ ಸಿಎಂ ಕೂಗು ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಕಾಂಗ್ರೆಸ್ ಪಕ್ಷದ ಜೊತೆ ಸಮ್ಮಿಶ್ರ ಸರಕಾರ ರಚನೆ ಮಾಡುವಂತ ಸಂದರ್ಭ ದಲ್ಲಿ ಮಲ್ಲಿಕಾರ್ಜುನ ಖರ್ಗೆ ಯವರನ್ನು ಮುಖ್ಯಮಂತ್ರಿ ಮಾಡಲು ದೇವೇಗೌಡ ಮತ್ತು ಕುಮಾರಸ್ವಾಮಿ ಹೇಳಿದ್ದರು ಆದರೆ ಕಾಂಗ್ರೆಸ್ ನಾವು ದಲಿತರ ಬಗ್ಗೆ ಕಾಳಜಿ ಇರುವ ಪಕ್ಷ ಮತ ಪಡೆದು ದಲಿತರಿಗೆ ಮೋಸ ಮಾಡುತ್ತಿದ್ದಾರೆ ಎಂದರು.

ಎಲ್ಲಾ ಪಕ್ಷದಲ್ಲಿ ಕುಟುಂಬ ರಾಜಕಾರಣ ಇದೆ ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಇದೆ ಎಂದು ಹೇಳುವ ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಮನೆಯಲ್ಲಿ 3 ಜನ, ಡಿ.ಕೆ. ಶಿವುಕುಮಾರ ಮನೆಯಲ್ಲಿ 5 ಜನ, ಸಿ.ಎಂ.ಉದಾಸಿ ಜಾರಕಿಹೊಳಿ ಕುಟುಂಬದಲ್ಲಿ ಇಲ್ಲವೇ ಎಂದು ನಮ್ಮ ಮೇಲೆ ಹೇಳುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕ ವೆಂಕಟರಾವ್‌ ನಾಡಗೌಡ, ಎಂಎಲ್‌ಸಿ ತಿಪ್ಪೇಸ್ವಾಮಿ, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಿದ್ದು ಬಂಡಿ ಲಿಂಗಸುಗೂರ , ಕಾರ್ಯಧ್ಯಕ್ಷ ಶಿವಶಂಕರ್, ಬಿ.ಹರ್ಷ, ಚಂದ್ರುಭೂಪಾಲ ನಾಡಗೌಡ, ಹನುಮೇಶ್, ಸುಮಿತ್ ತಡಕಲ್, ಮಹಾವೀರ ಜೈನ್, ದಾಸರಿ ಅಜಯ್ , ಶಂಕರಗೌಡ, ಆಶಿಫ್ ಇತರರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend