ಸರ್ಕಾರ ಜಿಂದಾಲ್ ಜೊತೆ ಸೇರಿ ಭ್ರಷ್ಟಾಚಾರ ಮಾಡುತ್ತಿದೆ; ರೈತ ಸಂಘ ಜಿಲ್ಲಾಧ್ಯಕ್ಷ ಕೆ.ದೇವೇಂದ್ರಪ್ಪ…!!!

Listen to this article

ಸರ್ಕಾರ ಜಿಂದಾಲ್ ಜೊತೆ ಸೇರಿ ಭ್ರಷ್ಟಾಚಾರ ಮಾಡುತ್ತಿದೆ; ರೈತ ಸಂಘ ಜಿಲ್ಲಾಧ್ಯಕ್ಷ ಕೆ.ದೇವೇಂದ್ರಪ್ಪ

ಸಂಡೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷರಾದ ಕೆ.ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ ಉಕ್ಕು ಕಂಪನಿಗೆ ಅತ್ಯಂತ ಕಡಿಮೆ ಬೆಲೆಗೆ ಭೂಮಿ ನೀಡಲು ಸಂಪುಟ ಒಪ್ಪಿಗೆ ನೀಡಿದ್ದನ್ನು ವಾಪಸ್ ಪಡೆಯಬೇಕು ಹಾಗೂ ತಾಲೂಕಿನ ಸಾಗುವಳಿ ಮಾಡುವ ರೈತರ ಭೂಮಿಗಳನ್ನು ಬಳ್ಳಾರಿ ಜಿಲ್ಲಾಧಿಕಾರಿಗಳು ಖರಾಬು ಎಂದು ಆದೇಶ ಮಾಡಿರುವುದನ್ನು ಸರ್ಕಾರ ರದ್ದು ಪಡಿಸಿ, ಸಾಗುವಳಿ ರೈತರಿಗೆ ಪಟ್ಟ ನೀಡಬೇಕೆಂದು ಸಂಘದ ಪದಾಧಿಕಾರಿಗಳು, ಹಳ್ಳಿಗಳಿಂದ ಬಂದಂತಹ ಸದಸ್ಯರುಗಳೊಂದಿಗೆ ವಿಜಯ ಸರ್ಕಲ್ ನಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು,ತಾಲೂಕ ಕಛೇರಿವರೆಗೂ ಕೂಗುತ್ತಾ ಬಂದು ತಹಶೀಲ್ದಾರ್ ಅನಿಲ್ ಕುಮಾರ್ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರವನ್ನು ಸಲ್ಲಿಸಿದರು

ಜಿಲ್ಲಾಧ್ಯಕ್ಷ ಕೆ.ದೇವೇಂದ್ರಪ್ಪ ಮನವಿಪತ್ರವನ್ನು ಸಲ್ಲಿಸಿ ಮಾತನಾಡಿ
ಬಳ್ಳಾರಿ ಜಿಲ್ಲೆಯ ಜಿಂದಾಲ್ ಉಕ್ಕು ಕಂಪನಿಗೆ ರಾಜ್ಯ ಸರ್ಕಾರ 3,666 ಎಕರೆ ಸರ್ಕಾರಿ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ (1ಎಕರೆ ಜಮೀನಿಗೆ 1 ಲಕ್ಷದ 20 ಸಾವಿರದಂತೆ) ಮಾರಾಟ ಮಾಡಲು ಸರ್ಕಾರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದನ್ನು ಈ ಬಾಗದ ರೈತರು ಖಂಡಿಸುತ್ತೇವೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರು ತಮ್ಮ ವೈಯಕ್ತಿಕ ಭೂಮಿ ಇದ್ದರೆ ಆ ಬೆಲೆಗೆ ಜಿಂದಾಲ್ ಉಕ್ಕು ಕಂಪನಿಗೆ ಮಾರಾಟ ಮಾಡಿ

ಈ ಬಾಗದ ಕೂಲಿ ಮಾಡುವ ಭೂಮಿ ಇಲ್ಲದ ಬಡ ರೈತರಿಗೆ 3 ಎಕರೆಯಷ್ಟು ಭೂಮಿಯನ್ನು ಬಡವರಿಗೆ ಹಂಚಿರಿ ಸರ್ಕಾರ ಅತ್ಯಂತ ಕಡಿಮೆ ಬೆಲೆಗೆ ಸರ್ಕಾರ ಭೂಮಿಯನ್ನು ಕಂಪನಿಗೆ ಮಾರಾಟ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಆದ್ದರಿಂದ ಈ ಬಾಗದ ರೈತರಿಗೆ ಸರ್ಕಾರ ನಿಗದಿ ಪಡಿಸಿದ ದರದ ಹತ್ತು ಪಟ್ಟು ದರಕ್ಕೆ ರೈತರೇ ಖರೀದಿಸುತ್ತಾರೆ ಸರ್ಕಾರ ರೈತರಿಗೆ ಭೂಮಿ ನೀಡಲಿ

ಉಕ್ಕು ಕಂಪನಿಯ ಸುತ್ತಲಿನ 1 ಎಕರೆ ಭೂಮಿ 2 ಕೋಟಿ 55 ಲಕ್ಷದ ವರೆಗೆ ಭೂಮಿಯ ಬೆಲೆ ಇದೆ. ಯಾವ ಯಾವ ಜಿಲ್ಲೆಯಲ್ಲಿ ಭೂಮಿಯ ಬೆಲೆ ಎಷ್ಟು..?ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ ಆದರೆ ರಾಜ್ಯ ಸರ್ಕಾರ ಜಿಂದಾಲ್ ಉಕ್ಕು ಕಂಪನಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಆದೇಶವನ್ನು ಜಾರಿಗೊಳಿಸಿದೆ ಈ ಆದೇಶವನ್ನು ಹಿಂಪಡೆಯಬೇಕು ಹಾಗೂ

ಸಂಡೂರು ತಾಲೂಕಿನ ಸರ್ಕಾರಿ ಅನಾಧೀನ ಭೂಮಿಗಳಲ್ಲಿ ಸಾಗುವಳಿ ಮಾಡುವ ರೈತ ಕೃಷಿ ಯೋಗ್ಯ ಭೂಮಿಯನ್ನು ಖರಾಬು ಎಂದು ಬಳ್ಳಾರಿ ಜಿಲ್ಲಾಧಿಕಾರಿಗಳು ಆದೇಶ ಮಾಡಿ ಸಾಗುವಳಿ ರೈತರನ್ನು ಒಕ್ಕಲ್ಲೆಬ್ಬಿಸುವುದು ಸಾಗುವಳಿ ರೈತರ ಕೃಷಿ ಯೋಗ್ಯ ಭೂಮಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಣಿಗಾರಿಕೆಗಾಗಿ ಅರಣ್ಯ ನಾಶ ಮಾಡಿ ಹೊಸದಾಗಿ ಅರಣ್ಯ ಬೆಳೆಸಲು ಸುಮಾರು 150 ವರ್ಷಗಳಿಂದ ಅಜ್ಜ ಮುತ್ತಾತನ ಕಾಲದಿಂದ ಸಾಗುವಳಿ ಮಾಡುವ ಮತ್ತು ಸಾಗುವಳಿ ಚೀಟಿಯನ್ನು ಹೊಂದಿರುವ ರೈತರ ಕೃಷಿ ಯೋಗ್ಯ ಭೂಮಿಯಲ್ಲಿ ಅರಣ್ಯ ಬೆಳೆಸುವುದನ್ನು ನಿಲ್ಲಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಪಹಣಿಯಲ್ಲಿ ಖರಾಬು ಆದೇಶವನ್ನು ರದ್ದು ಪಡಿಸಬೇಕು ಮತ್ತು ಬಗರ್ ಹುಕುಂ ಸಮಿತಿಯಲ್ಲಿ ಸಾಗುವಳಿ ರೈತರಿಗೆ ಪಟ್ಟ ನೀಡಬೇಕೆಂದು ಸಂಡೂರು ತಾಲೂಕಿನ ರೈತರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡುತ್ತೇವೆ ಎಂದು ತಿಳಿಸಿಸಿದರು

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ
ಕೆ.ದೇವೇಂದ್ರಪ್ಪ,ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನಿ ಮಹೇಶ, ಸಂಡೂರು ತಾಲೂಕು ಅಧ್ಯಕ್ಷರಾದ ಕೆ.ಶಾಂತಕುಮಾರ, ಗೌರವಾಧ್ಯಕ್ಷರಾದ ಬಿಎಂ ಉಜ್ಜನಯ್ಯ,ಜಿಲ್ಲಾ ಉಪಾಧ್ಯಕ್ಷರಾದ ಜಿ. ನಾಗಪ್ಪ, ಕಲ್ಲಪ್ಪ, ವಿಎಂ ಬಸವರಾಜ್, ಕೆ. ಪರಶುರಾಮ, ಸಿದ್ಲಿಂಗಪ್ಪ, ಓಬಲೇಶ, ನಾಗರಾಜ ರಫೀಕ್ ದೊಡ್ಡಮಲ್ಲಯ್ಯ, ಹುಲಿರಾಜ, ಅಂಜಿನಿ, ರಾಮಂಜಿನಿ,ಮಲಿಯಪ್ಪ,ಬಾಬು ಹನುಮಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

ವರದಿ. ಉಜ್ಜಿನಯ್ಯ ಸಂಡೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend