ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು:CRP ಶಿಲ್ಪಾ ಏಸಾಯಿ….!!!

Listen to this article

ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು:CRP ಶಿಲ್ಪಾ ಏಸಾಯಿ
ಮಕ್ಕಳ ಶೈಕ್ಷಣಿಕ ಜೀವನ ಸಮಾಜದ ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ. ಅದಕ್ಕಾಗಿ ಉತ್ತಮ ಶಿಕ್ಷಣ ವ್ಯವಸ್ಥೆಗೆ ಶ್ರಮಿಸೋಣ…ರಾಜ್ಯಾದ್ಯಂತ ಪ್ರತಿಭಾಕಾರಂಜಿ ಕಾರ್ಯಕ್ರಮಗಳು ನಡೆಯುತ್ತಿವೆ ಸರ್ಕಾರಿ ಶಾಲೆ ಮಕ್ಕಳನ್ನು ಉಳಿಸಿ ಬೆಳೆಸಿ ಅವರನ್ನು ಪ್ರೋತ್ಸಾಹಿಸಿ ಎಲ್ಲರಿಗೂ ಶುಭವಾಗಲಿ.ದೇಶದ ಕೊನೆಯ ಮಗುವಿಗೂ ಶಿಕ್ಷಣ ದೊರೆಯಲಿ ಎಂದು ವಲಯ ಸಂಪನ್ಮೂಲ ವ್ಯಕ್ತಿಗಳಾದಂತ ಶ್ರೀಮತಿ ಶಿಲ್ಪಾ ಏಸಾಯಿ ಮೇಡಂ ಮಾತಾಡನಾಡಿದರು.

ಹಾಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಸರಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜನೆ ಮಾಡಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಕುರ್ಡಿ ಹೇಳಿದರು.

ಉಟಕನೂರು ವಲಯ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರಕಾರ ಮಕ್ಕಳ ಪ್ರತಿಭೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಗಮನಿಸಿಮ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುತ್ತಿದೆ. ಇದರಿಂದ ಯಾವ ಮಕ್ಕಳು ಯಾವ ರಂಗದಲ್ಲಿ ಮುಂದೆ ಇದ್ದಾರೆ ಎಂಬುವುದು ಗುರುತಿಸಲ್ಪಡುತ್ತದೆ. ಆದ್ದರಿಂದ ಎಲ್ಲ ಮಕ್ಕಳು ಸಂಕೋಚ ಪಡದೇ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು ಎಂದು ಹೇಳಿದರು.

ಸರಕಾರಿ ನೌಕರರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ಹಂಪಣ್ಣ ಚಂಡೂರ್ ಮಾತನಾಡಿ, ಮಕ್ಕಳ ಪ್ರತಿಭೆಯ ಗುರುತುಸುವಿಕೆ

ನಿಮ್ಮಲ್ಲಿರುತ್ತದೆ. ಶಿಕ್ಷಕರಾದವರು ಆ ಶಾಲೆ, ಈ ಶಾಲೆ ಎನ್ನದೇ ಸರಿಯಾದ ನಿರ್ಣಯಗಳನ್ನು ತೆಗೆದುಕೊಂಡು ಮಕ್ಕಳ ಪ್ರತಿಭೆ ಗುರುತಿಸಬೇಕು ಎಂದು ಹೇಳಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮುಧೋಳ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಶೋಕ ತಡಕಲ್, ಪದವೀಧರರ ಅಧ್ಯಕ್ಷ ಗೋಪಾಲ್ ನಾಯಕ್, ಮಲ್ಲಮ್ಮ ಮಾತನಾಡಿದರು.

ಶಾಲೆಯ ಎಸ್ಟಿಎಂಸಿ ಅಧ್ಯಕ್ಷ ಬಸವಲಿಂಗಪ್ಪ,

ಮುಖ್ಯ ಗುರು ಸದಾಶಿವಪ್ಪ, ಸಿಆರ್‌ಪಿ ಶಿಲ್ಪಾ ಏಸಾಯಿ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರು ಆನಂದಪ್ಪ, ಸರಕಾರಿ ನೌಕರರ ಸಂಘದ ನಿರ್ದೇಶಕ ಬಸವರಾಜ ಜಂಗಮರಹಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕ ಶಿವಗೇನಿ ನಾಯಕ್, ಶಿಕ್ಷಕರಾದ ಪ್ರದೀಪ್, ಮಹಾಂತೇಶ, ನಾಗಭೂಷಣ, ನೀಲಕಂಠ, ಅಮರೇಶ, ಪ್ರೌಢಶಾಲೆಯ ಅಧ್ಯಕ್ಷ ವೆಂಕಟೇಶ ನಾಯಕ್, ಶಿವರಾಜ ಕರಡಿ, ಶೇಖರಪ್ಪ ಹೆಬ್ಬಾಳ, ಸೇರಿದಂತೆ ಅನೇಕರು ಇದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend