ಲೋಕಾಯುಕ್ತ ಭರ್ಜರಿ ಬೇಟೆ; ಲಂಚ ಪಡೆಯುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ PSI, FDA, ಶಿಕ್ಷಣಾಧಿಕಾರಿ, ಸರ್ವೆಯರ್!!!

Listen to this article

ಲೋಕಾಯುಕ್ತ ಭರ್ಜರಿ ಬೇಟೆ; ಲಂಚ ಪಡೆಯುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ PSI, FDA, ಶಿಕ್ಷಣಾಧಿಕಾರಿ, ಸರ್ವೆಯರ್!
ಜಮೀನಿನ ತಾತ್ಕಾಲಿಕ ಪೋಡಿ ಮಾಡಲು 47,500 ಲಂಚ ಕೇಳಿದ್ದ ಆರೋಪದ ಮೇರೆಗೆ ಸರ್ವೆಯರ್ ಮಲ್ಲಪ್ಪ ಜಂಬಗಿ, ಖಾಸಗಿ ಸಹಾಯಕ ಗುರುದತ್ತ
ಹಾವೇರಿ: ಲಂಚಕ್ಕೆ (Bribe) ಬೇಡಿಕೆ ಇಟ್ಟ ಹಾವೇರಿ (Haveri) ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಠಾಣೆ ಪಿಎಸ್​ಐ (PSI), ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಇಸ್ಪೀಟು ಆಡಲು ಅನುಮತಿಗಾಗಿ 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು, ಲಂಚ ಪಡೆಯುವಾಗ ತಡಸ ಪೊಲೀಸ್ ಠಾಣೆ (Tadasa Police Station) PSI ಶರಣಬಸಪ್ಪ ಕಾಂದೆ ಹಾಗೂ ಪೇದೆ ಸುರೇಶ್ ಮಾನೋಜಿ ರೆಡ್​​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್​ಪಿ (DYsP) ಚಂದ್ರಶೇಖರ ನೇತೃತ್ವದಲ್ಲಿ ದಾಳಿ ಮಾಡಿದ್ದು, ಹಾವೇರಿ ಲೋಕಾಯುಕ್ತ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ

ಲಂಚ ಸ್ವೀಕರಿಸುವಾಗ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಠೋಡ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಶಿಕ್ಷಕಿಯ ಪೆನ್ಶನ್ ಸೆಟಲ್ ಮೆಂಟ್ ಗಾಗಿ ಆಕೆಯ ಪತಿಯ ಬಳಿ 50 ಸಾವಿರ ರೂಪಾಯಿಗೆ ಬಿಇಓ ಹಣಮಂತ ರಾಠೋಡ್ ಅವರು ಬೇಡಿಕೆ ಇಟ್ಟಿದ್ದ ಆರೋಪವಿದೆ. ಮಧ್ಯವರ್ತಿ, ಶಿಕ್ಷಣ ಇಲಾಖೆಯ ಸಿಬ್ಬಂದಿ ರಾಧಾಕೃಷ್ಣ ಮೂಲಕ ಹಣ ಪಡೆಯುತ್ತಿದ್ದ ಬಿ.ಇ.ಓ ಹಣಮಂತ ರಠೋಡ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಇಲಾಖೆಯ ಸಿಬ್ಬಂದಿ ಪಡೆದ ಹಣ ಬಿಇಓ ಗೆ ತಲುಪುತ್ತಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಆದರೆ ರಾಧಾಕೃಷ್ಣ ಟ್ರ್ಯಾಪ್ ಆಗಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಬಿಇಓ ಹಣಮಂತ ರಾಠೋಡ್ ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಲಬುರಗಿ ಲೋಕಾಯುಕ್ತ ಎಸ್​ಪಿ ಆಂಟನಿ, ಡಿವೈಎಸ್​​ಪಿಗಳಾದ ಗೀತಾ ಹಾಗೂ ರಾಜಶೇಖರ ಹಳಿಗೋದಿ ಟೀಂನಿಂದ ಮಿಂಚಿನ ದಾಳಿ ನಡೆದಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಲೋಕ ಬಲೆಗೆ ಬಿದ್ದ ಸರ್ವೆಯರ್ ಹಾಗೂ ಖಾಸಗಿ ವ್ಯಕ್ತಿ

ಜಮೀನಿನ ತಾತ್ಕಾಲಿಕ ಪೋಡಿ ಮಾಡಲು 47,500 ಲಂಚ ಕೇಳಿದ್ದ ಆರೋಪದ ಮೇರೆಗೆ ಸರ್ವೆಯರ್ ಮಲ್ಲಪ್ಪ ಜಂಬಗಿ, ಖಾಸಗಿ ಸಹಾಯಕ ಗುರುದತ್ತ ಬಿರಾದಾರ‌ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಾಲ್ಕು ಎಕರೆ ಜಮೀನಿನ ತತ್ಕಾಲ್ ಪೋಡಿ ಮಾಡಲು ವಿಜಯಪುರದ ಪ್ರಕಾಶ್ ಸಿಂಗೆ ಎಂಬುವರ ಬಳಿ ಬಂಧಿತ ಅಧಿಕಾರಿಗಳು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಲಂಚದ ಹಣ ಸ್ವೀಕರಿಸುವ ವೇಳೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು 47,500 ರೂಪಾಯಿ ನಗದು ಹಣ ವಶಪಡಿಸಿಕೊಂಡು ಸರ್ವೇಯರ್ ಮಲ್ಲಪ್ಪ ಹಾಗೂ ಸಹಾಯಕ ಗುರುದತನನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್​ಪಿ ಮಲ್ಲೇಶ, ಡಿಎಸ್​ಪಿ ಸುರೇಶ್ ರೆಡ್ಡಿ, ಸಿಪಿಐ ಆನಂದ ಟಕ್ಕನವರ್ ಆನಂದ ದೋಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ
ಅಧಿಕಾರಿಗಳಿಗೆ ಲೋಕಾಯುಕ್ತ ಎಸ್​​ಪಿ ಕ್ಲಾಸ್

ಬೀದರ್ ನಗರದಲ್ಲಿನ ಅಸ್ವಚ್ಚತೆ ಕಂಡು ಕಲಬುರಗಿ ಲೋಕಾಯುಕ್ತ ಎಸ್‌ಪಿ ಆ್ಯಂಟನಿ ಜಾನ್, ನಗರಸಭೆ ಅಧಿಕಾರಿಗಳು, ಕ್ರೀಡಾ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕ್ಲಾಸ್ ತೆಗೆದುಕೊಂಡರು. ನಗರದ ಸಾಯಿ ಸ್ಕೂಲ್ ಹತ್ತಿರವಿರುವ ಸರ್ವಿಸ್ ಸ್ಟ್ಯಾಂಡ್‌ಗೆ ಭೇಟಿ ನೀಡಿದ ಲೋಕಾ ಎಸ್‌ಪಿ ಜಾನ್ ಆ್ಯಂಟನಿ, ಅಲ್ಲಿನ ಅಸ್ವಚ್ಚತೆ ಕಂಡು‌ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ನಗರದ ಹೃದಯ ಭಾಗದಲ್ಲೇ ಈ ರೀತಿಯಾದರೆ ನೀವೇನು ಮಾಡುತ್ತಿದ್ದೀರಿ ಎಂದು ನಗರಸಭೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಕರ್ನಾಟಕ ಕಾಲೇಜ್ ಬಳಿ‌ ಇರುವ ಡಂಪಿಂಗ್ ಯಾರ್ಡ್‌ಗೆ ಭೇಟಿ ನೀಡಿ, ದುರ್ವಾಸನೆ ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು.
ಶಿಕ್ಷಣ ಇಲಾಖೆ FDA ಲೋಕಾಯುಕ್ತ ಬಲೆಗೆ

ಕಲಬುರಗಿ ಶಿಕ್ಷಣ ಇಲಾಖೆ SSLC ಬೋರ್ಡ್ ನ FDA ಶಿವಶಂಕರಯ್ಯ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. SSLC ನಕಲಿ ಅಂಕಪಟ್ಟಿ ಕೊಡಲು ಅರುಣ್ ಖತೀಬ್ ಅನ್ನರ್ ಬಳಿ 5000 ರೂಪಾಯಿಗೆ ಶಿವಶಂಕರಯ್ಯ ಬೇಡಿಕೆ ಇಟ್ಟಿದ್ದರಂತೆ. ಇದರಂತೆ ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು, ಲೋಕಾಯುಕ್ತ ಎಸ್ಪಿ ಆಂಟೋನಿ ಮಾರ್ಗದರ್ಶನ, ಡಿವೈಎಸ್ಪಿ ಗೀತಾ ನೇತೃತ್ವದಲ್ಲಿ ದಾಳಿ ನಡೆಸಿ, ತಮ್ಮ ಕಚೇರಿಯಲ್ಲಿ 5000 ಸಾವಿರ ಹಣ ಪಡೆಯುವ ವೇಳೆ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.
ನಗರದ ಸೌಂದರ್ಯೀಕರಣಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡುತ್ತೀರಾ, ಇಲ್ಲೆ ಇಷ್ಟೊಂದು ಸಮಸ್ಯೆ ಇದೆ. ಡಂಪಿಂಗ್ ಯಾರ್ಡ್ ನಗರದಲ್ಲಿ ಮಾಡಿ ಅಂತಾ ನಿಮಗೆ ಯಾರು ಹೇಳಿದ್ದು, ನಗರದ ಹೊರವಲಯದಲ್ಲಿ ಎಲ್ಲೂ ಜಾಗ ಸಿಗಲಿಲ್ವಾ. ಕೂಡಲೇ ಸ್ಥಳ ಪರಿಶೀಲನೆ ಮಾಡಿ, ವರ್ಗಾಯಿಸಿ, ಎಲ್ಲವನ್ನೂ ಕ್ಲೀನ್ ಮಾಡಿ ಎಂದು ಅಧಿಕಾರಗಳಿಗೆ ಸೂಚಿಸಿದರು. ಕೊನೆಗೆ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಕ್ರೀಡಾ ಯುವ ಸಬಲೀಕರಣ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಶೌಚಾಲಯ ಸೇರಿದಂತೆ ಎಲ್ಲಾ ಕೊಠಡಿಗಳನ್ನ ಸ್ವಚ್ಚವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ವಾರ್ನಿಂಗ್ ಮಾಡಿದರು.
ಚಿನ್ನಾಭರಣ ಕದ್ರಾ ಕಾನ್ಸ್​ಟೇಬಲ್​​?

ಕೋಲಾರದ ಬಂಗಾರಪೇಟೆ ಠಾಣೆ ಕ್ರೈಂ ಪೇದೆ ಅನಿಲ್ ಕುಮಾರ್‌‌‌‌‌‌‌‌‌ ವಿರುದ್ಧ ಚಿನ್ನಾಭರಣ ಕದ್ದ ಆರೋಪ ಕೇಳಿಬಂದಿದೆ. ಕೆಜಿಎಫ್ ಚಿನ್ನದ ವ್ಯಾಪಾರಿ ಗೌತಮ್ ಚಂದ್ ಎಂಬುವವರ ಮನೆಯಲ್ಲಿ ಆಂಧ್ರ ಮೂಲಕ ವ್ಯಕ್ತಿ ಚಿನ್ನಾಭರಣ ಕದ್ದಿದ್ದ. ಆರೋಪಿ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದ ಆಭರಣಗಳನ್ನ ಪೊಲೀಸರು ಸೀಜ್‌ ಮಾಡಿದ್ರು. ರಿಕವರಿ ವೇಳೆ ಬಂಗಾರಪೇಟೆ ಠಾಣೆ ಪೇದೆ ಅನಿಲ್ ಕುಮಾರ್ ಬಂಗಾರ ಲಪಟಾಯಿಸಿರೋ ಆರೋಪ ಕೇಳಿಬಂದಿದೆ. ಸದ್ಯ ಪ್ರಕರಣ ಸಂಬಂಧ ಕೆಜಿಎಫ್ ಡಿವೈಎಸ್ಪಿ ಪಾಂಡುರಂಗ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ…

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend