ಪುರಸಭೆ ಅಧ್ಯಕ್ಷೆ ಜ್ಯೊತಿ ಗೋವಿನಕೊಪ್ಪ ಅಧಿಕಾರ ಸ್ವೀಕಾರ
ಗುಳೇದಗುಡ್ಡ: ಇತ್ತೇಚೆಗೆ ನಡೆದ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್ ಪಕ್ಷದ ಜ್ಯೋತಿ ಗೋವಿನಕೊಪ್ಪ ಅವರು ಗುರುವಾರ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕರಿಸಿದರು. ಬಳಿಕ ನೂತನ ಅಧ್ಯಕ್ಷ ಜ್ಯೋತಿ ಗೋವಿನಕೊಪ್ಪ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ಹಿರಿಯರ ಮಾರ್ಗದರ್ಶನ, ಎಲ್ಲ ಸದಸ್ಯರ ವಿಶ್ವಾಸಕ್ಕೆ ಪಡೆಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಚಂದ್ರಕಾಂತ ಶೇಖಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಬಿಜೆಪಿ ನಗರಾಧ್ಯಕ್ಷ ವಸಂತಸಾ ದೋಂಗಡೆ, ರವೀಂದ್ರ ಪಟ್ಟಣಶೆಟ್ಟಿ, ಅಶೋಕ ಹೆಗಡೆ, ಅನ್ವರಖಾನ ಪಠಾಣ, ಭಾಗ್ಯಾ ಯದ್ನೂರ, ಗೋಪಾಲ ಭಟ್ಟಡ, ವೈ.ಆರ್. ಹೆಬ್ಬಳ್ಳಿ, ಮುಬಾರಕ್ ಮಂಗಳೂರು, ರಾಘವೇಂದ್ರ ಗೋವಿನಕೊಪ್ಪ, ಮಷಾಕ ನಲವತ್ವಾಡ, ಸಚಿನ್ ರಾಂಪೂರ, ಭಾಷಾ ಸಾಧನಿ, ಪುರಸಭೆ ಸದಸ್ಯರಾದ ಸಂತೋಷ ನಾಯನೇಗಲಿ, ಉಮೇಶ ಹುನಗುಂದ, ಹನಮಂತ ಗೌಡರ, ರಾಜು ಹೆಬ್ಬಳ್ಳಿ, ಯಲ್ಲವ್ವ ಗೌಡ್ರ, ರಾಜಶ್ರೀ ಉಂಕಿ ಮತ್ತಿತರರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030