ಕಾಂಗ್ರೆಸ್ ಪಕ್ಷದ ನಾಮಪತ್ರ ತಿರಸ್ಕೃತ: ಜೆಡಿಎಸ್‍ಗೆ ಒಲಿದ ಅದೃಷ್ಟ ಗುಳೇದಗುಡ್ಡ ಪುರಸಭೆ ಜೆಡಿಎಸ್ ಪಕ್ಷದ ತೆಕ್ಕೆಗೆ…!!!

Listen to this article

ಕಾಂಗ್ರೆಸ್ ಪಕ್ಷದ ನಾಮಪತ್ರ ತಿರಸ್ಕೃತ: ಜೆಡಿಎಸ್‍ಗೆ ಒಲಿದ ಅದೃಷ್ಟ
ಗುಳೇದಗುಡ್ಡ ಪುರಸಭೆ ಜೆಡಿಎಸ್ ಪಕ್ಷದ ತೆಕ್ಕೆಗೆ

ಗುಳೇದಗುಡ್ಡ; ಒಂದಲ್ಲ ಎರಡಲ್ಲ ಸಲ್ಲಿಸಿದ ಮೂರೂ ನಾಮಪತ್ರಗಳು ತಿರಸ್ಕೃತಗೊಂಡು ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಗುಳೇದಗುಡ್ಡ ಪುರಸಭೆಯನ್ನು ಜೆಡಿಎಸ್ ಪಕ್ಷಕ್ಕೆ ಒಪ್ಪಿಸಿದೆ. ಸ್ಪಷ್ಟಬಹುಮತ ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೈ ತಪ್ಪಿ, ಕೇವಲ ಐದು ಸದಸ್ಯರನ್ನು ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಅದೃಷ್ಟದ ಬಾಗಿಲು ತೆರೆಯವ ಮೂಲಕ ಇದೇ ಪ್ರಥಮ ಬಾರಿಗೆ ಜೆಡಿಎಸ್ ಪಕ್ಷಕ್ಕೆ ಪುರಸಭೆ ಅಧ್ಯಕ್ಷ ಸ್ಥಾನ ದೊರೆತಿದೆ.
ಸಾಮಾನ್ಯ ಮಹಿಳೆಗೆ ಮೀಸಲಿದ್ದ ಎರಡನೇ ಅವಧಿಯ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜ್ಯೋತಿ ಆಲೂರ ಹಾಗೂ ವಂದನಾ ಭಟ್ಟಡ ನಾಮಪತ್ರ ಸಲ್ಲಿದರೆ, ಜೆಡಿಎಸ್ ಪಕ್ಷದಿಂದ ಜ್ಯೋತಿ ಗೋವಿನಕೊಪ್ಪ ನಾಮಪತ್ರ ಸಲ್ಲಿಸಿದ್ದರು. ಇನ್ನು ಪರಿಶಿಷ್ಟ ಜಾತಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ನಾಮಪತ್ರಪರಿಶೀಲನೆಯಲ್ಲಿ ಕಾಂಗ್ರೆಸ್ ಪಕ್ಷದ ಜೋತಿ ಆಲೂರ ಹಾಗೂ ವಂದನಾ ಭಟ್ಟಡ ಅವರ ನಾಮಪತ್ರಗಳು ತಿರಸ್ಕಾರಗೊಂಡಿದ್ದರಿಂದ ಜೆಡಿಎಸ್ ಪಕ್ಷದ ಡಿವಿಜನ್ ನಂ. 3ರ ಅಭ್ಯರ್ಥಿ ಜ್ಯೋತಿ ಗೋವಿನಕೊಪ್ಪ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದೇ ಇದ್ದುದರಿಂದ ಈ ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ ಎಂದು ಚುನಾವಣಾಧಿಕಾರಿ ಮಂಗಳಾ ಎಂ ತಿಳಿಸಿದರು.
ಬಣಗಳ ಗುದ್ದಾಟದಿಂದ ಕೈಗೆ ತಪ್ಪಿತೆ ಅಧಿಕಾರ: 23 ಸದಸ್ಯ ಬಲದ ಗುಳೇದಗುಡ್ಡ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ 15 ಸ್ಥಾನ, ಬಿಜೆಪಿ 2, ಜೆಡಿಎಸ್ 5, ಹಾಗೂ ಒಂದು ಪಕ್ಷೇತರ ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಹೊಂದಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರ ಬಣ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದ ಹೊಳಬಸು ಶೆಟ್ಟರ ನಡುವಿನ ಗುದ್ದಾಟದಿಂದಾಗಿ ಪುರಸಭೆಯಲ್ಲಿ ಬಹುಮತ ಇದ್ದರೂ ಅಧಿಕಾರ ಚುಕ್ಕಾಣೆ ಹಿಡಿಯದೇ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟು ತೀವ್ರ ಮುಖಭಂಗ ಅನುಭವಸಿತೇ ಎಂಬುದು ಪ್ರಶ್ನೆ ಉದ್ಭವಿಸಿತು.


ಕಾನೂನು ಹೋರಾಟ ಮಾಡುತ್ತೇವೆ: ನಮ್ಮ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡ ಕಾರಣ ಇನ್ನೂ ಸ್ಪಷ್ಟವಾಗಿ ನಮಗೆ ತಿಳಿದಿಲ್ಲ. ಆದರೆ ಈ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತೇವೆ. ಗೊಂದಲದಿಂದಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ವೇಳೆ ತೊಂದರೆಯಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೆ ಮರುಚುನಾವಣೆ ನಡೆಸಲಾಗುವುದು – ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಜೆಡಿಎಸ್ ಪಕ್ಷದ ಅಭ್ಯರ್ಥಿ ಗುಳೇದಗುಡ್ಡ ಪುರಸಭೆಯ ಚುಕ್ಕಾಣಿ ಹಿಡಿಯುವ ಮೂಲಕ ಇತಿಹಾಸ ಸೃಷ್ಠಿಸಿದೆ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ನಾವು ನಾಮಪತ್ರ ಸಲ್ಲಿಸಿದ್ದೇವು. ಅದರಂತೆ ಮುಂಬರುವ ದಿನಗಳಲ್ಲಿ ಎಲ್ಲ ಸದಸ್ಯರ ಮಾರ್ಗದರ್ಶನ, ಅಭಿಪ್ರಾಯ ಪಡೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತದೆ – ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ

ಜೆಡಿಎಸ್ ವಿಜಯೋತ್ಸವ: ಕಾಂಗ್ರೆಸ್‍ಪಕ್ಷ ನಾಮಪತ್ರಗಳು ತಿರಸ್ಕತಗೊಂಡು ಜೆಡಿಎಸ್‍ಪಕ್ಷದ ಅಭ್ಯರ್ಥಿ ಜ್ಯೋತಿ ಗೋವಿನಕೊಪ್ಪ ಅಧ್ಯಕ್ಷರಾಗುತ್ತಿದ್ದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು…

ವರದಿ. ಸಚಿನ್, ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend