ಗುಳೇದಗುಡ್ಡ: ಪುರಸಭೆ ಅಧ್ಯಕ್ಷರ ಸ್ಟಾನಕ್ಕೆ ಮೂವರಲ್ಲಿ ಯಾರು ಅಧ್ಯಕ್ಷರು ?

Listen to this article

ಗುಳೇದಗುಡ್ಡ: ಮೂವರಲ್ಲಿ ಯಾರು ಅಧ್ಯಕ್ಷರು ?
ಶಾಸಕರ ಅಂಗಳದಲ್ಲಿದೆ ಅಧ್ಯಕ್ಷರ ಆಯ್ಕೆ
ಗುಳೇದಗುಡ್ಡ: ಸ್ಥಳೀಯ ಪುರಸಭೆಯ ಅಧ್ಯಕ್ಷರ ಆಡಳಿತ ಕೊನೆಗೊಂಡು ಸುಮಾರು 15 ತಿಂಗಳು ಬಳಿಕ ಎರಡನೇಯ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಸರಕಾರ ಇತ್ತೀಚೆಗೆ ಪ್ರಕಟಿಸಿದ್ದು, ಗುಳೇದಗುಡ್ಡ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ.

ಗುಳೇದಗುಡ್ಡ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದೆ. ಸುಮಾರು ಹದಿನೈದು ತಿಂಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜಾತಕಪಕ್ಷಿಯಂತೆ ಕಾಯುತ್ತಿದ್ದ ಸದಸ್ಯರು, ಮೀಸಲಾತಿ ಪ್ರಕಟಗೊಂಡ ಹಿನ್ನಲೆಯಲ್ಲಿ ಶಾಸಕರು, ಪಕ್ಷದ ಸ್ಥಳೀಯ ಮುಖಂಡರ ಹಿಂದೆ ದುಂಬಾಲು ಬಿದ್ದಿದ್ದು, ಇನ್ನೇನು ಚುನಾವಣಾ ದಿನಾಂಕ ಪ್ರಕಟವಾಗಬೇಕಿದೆ.
ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ: 15 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಬಹುಮತ ಪುರಸಭೆಯಲ್ಲಿ ಬಹುಮತ ಹೊಂದಿದ್ದು, ಮೊದಲನೇ ಅವಧಿಯಲ್ಲಿ ಆ ಪಕ್ಷದ ಶಿಲ್ಪಾ ಹಳ್ಳಿ, ಯಲ್ಲವ್ವ ಗೌಡರ ಅಧ್ಯಕ್ಷರಾಗಿ, ಶರೀಫಾ ಮಂಗಳೂರು, ನಾಗರತ್ನಾ ಲಕ್ಕುಂಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ವಿದ್ಯಾ ಮುರಗೋಡ, ವಂದನಾ ಭಟ್ಟಡ, ಜ್ಯೋತಿ ಆಲೂರ, ರಾಜವ್ವ ಹೆಬ್ಬಳ್ಳಿ ಉಳಿದ್ದಾರೆ. ಇವರಲ್ಲಿ ವಿದ್ಯಾ ಮುರಗೋಡ, ವಂದನಾ ಭಟ್ಟಡ ನಡುವೇ ಪ್ರಬಲ ಪೈಪೋಟಿ ಕಂಡು ಬರುತ್ತಿದೆ. ಈ ಅಧ್ಯಕ್ಷರ ಆಯ್ಕೆ ಶಾಸಕರ ಅಂಗಳದಲ್ಲಿದ್ದು, ಅವರು ಒಲವು ಯಾರಕಡೆಗೆ ಇದೆ ಎಂಬುದು ಪ್ರಶ್ನೆಯಾಗಿದೆ.
ಪಕ್ಷಗಳ ಬಲಾಬಲ: ಪಕ್ಷಗಳ ಬಲಾಬಲ ನೋಡಿದರೆ ಕಾಂಗ್ರೆಸ್ ಪಕ್ಷ 15 ಸ್ಥಾನಗಳನ್ನು ಹೊಂದಿದ್ದು, ಜೆಡಿಎಸ್ 5 ಸ್ಥಾನ ಹೊಂದಿದ್ದರೆ, ಬಿಜೆಪಿ 2 ಹಾಗೂ ಪಕ್ಷೇತರ ಒಬ್ಬ ಸದಸ್ಯನಿದ್ದಾನೆ. ಪುರಸಭೆಯ ಒಟ್ಟು ಸ್ಥಾನ 23 ಆಗಿದ್ದು, ಕಾಂಗ್ರೆಸ್ ಬಹುಮತ ಹೊಂದಿದೆ. ಹೀಗಾಗಿ ಕಾಂಗ್ರೆಸ್‍ಪಕ್ಷದ ಸದಸ್ಯ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಗುವುದು ಖಚಿತವಾಗಿದೆ.
ಶಾಸಕರ ಅಯ್ಕೆ ಯಾರಿಗೆ?: ನಾನು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಈ ಕ್ಷೇತ್ರದ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ ಅವರ ಆಯ್ಕೆಯೇ ಅಂತಿಮ. ಶಾಸಕರು ಸೂಚಿಸಿದ ಹೆಸರಿಗೆ ನಾವು ಒಪ್ಪಿಕೊಳ್ಳುತ್ತೇವೆ.

ವಿದ್ಯಾ ಮುರಗೋಡ, ಕಾಂಗ್ರೆಸ್ ಪಕ್ಷದ ಸದ್ಯಸ್ಯೆ, ಅದ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ
ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿರುವ ನಾನೂ ಕೂಡಾ ಪುರಸಭೆಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷದ ಮುಖಂಡರಿಗೆ ನನ್ನನ್ನು ಆಯ್ಕೆ ಮಾಡುವಂತೆ ಬೇಡಿಕೆ ಇಟ್ಟಿದ್ದೇನೆ. ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ಭರವಸೆ ನನಗಿದೆ. ಸದಸ್ಯರ ಒಲವು ನನ್ನ ಮೇಲಿದೆ. – ವಂದನಾ ಭಟ್ಟಡ, ಕಾಂಗ್ರೆಸ್ ಪಕ್ಷದ ಸದ್ಯಸ್ಯೆ, ಅದ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ
ನಾವು ಸ್ಪರ್ಧಿಸುತ್ತೇವೆ: ಐದು ಸದಸ್ಯರನ್ನು ಹೊಂದಿರುವ ಜೆಡಿಎಸ್ ಪಕ್ಷ ಕೂಡ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದೆ, ಪಕ್ಷದಲ್ಲಿ ಮೂವರು ಮಹಿಳೆಯರಿದ್ದು, ಅವರಲ್ಲಿ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಬೇಕೆಂದು ನಿರ್ಧರಿಸುತ್ತವೆ ಎಂದು ಸದಸ್ಯ ಸಂತೋಷ ನಾಯನೇಗಲಿ ತಿಳಿಸಿದ್ದು, ಜೆಡಿಎಸ್ ಪಕ್ಷದಲ್ಲಿ 5 ಜನ ಸದಸ್ಯರಿದ್ದಾರೆ…

ವರದಿ. ಸಚಿನ್, ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend