6 ನೇ ತರಗತಿ ಸೀಟ್ ಭರ್ತಿಗೆ ಕೌನ್ಸೆಲಿಂಗ್
ಗುಳೇದಗುಡ್ಡ: ಸರ್ಕಾರಿ ಆದರ್ಶ ವಿದ್ಯಾಲಯ ಚಿಕ್ಕಮುಚ್ಚಳಗುಡ್ಡದ 6 ನೇ ತರಗತಿಯಲ್ಲಿ ಖಾಲಿ ಉಳಿದಿರುವ ಸೀಟ್ಗಳನ್ನು ರೋಸ್ಟರ್ ಪದ್ಧತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು. ಆ.13 ರಂದು ಸಾಮಾನ್ಯ ವರ್ಗದವರಿಗೆ ಕೌನ್ಸೆಲಿಂಗ್ ಮತ್ತು ಆ.14 ರಂದು ಬೆಳಗ್ಗೆ 10 ಗಂಟೆಗೆ ಮೀಸಲಾತಿ ವರ್ಗದ ಮಕ್ಕಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲಾಗುವುದು. ಅಭ್ಯರ್ಥಿಗಳು ಆಧಾರ್ ಕಾರ್ಡ್ ಹಾಗೂ ಇತರ ಶೈಕ್ಷಣಿಕ ದಾಖಲೆಗಳೊಂದಿಗೆ ಕೌನ್ಸೆಲಿಂಗ್ಗೆ ಬರಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಭಾರಿ ಮುಖ್ಯಶಿಕ್ಷಕ ಶಂಕರರಾವ್ ಕುಲಕರ್ಣಿ ಮೊ. 9008250478 ಗೆ ಸಂಪರ್ಕಿಸುವಂತೆ ಶಿಕ್ಷಣಾಧಿಕಾರಿ ಬಿ. ಹೆಚ್. ಹಳಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030