ಶ್ರೀಕಂಠಪುರ ತಾಂಡದಲ್ಲಿ ವಾರ್ಡ್ ಸಭೆ ನಡೆಯಿತು…!!!

Listen to this article

ಶ್ರೀಕಂಠಪುರ ತಾಂಡದಲ್ಲಿ ವಾರ್ಡ್ ಸಭೆ ನಡೆಯಿತು. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5ನೇ ವಾರ್ಡ್ ನ ಶ್ರೀಕಂಠಾಪುರ ತಾಂಡದಲ್ಲಿ ವಾರ್ಡ್ ಸಭೆಯನ್ನು ಪಂಚಾಯಿತಿ ಸಿಬ್ಬಂದಿಗಳು ಹಾಗೂ ವಾರ್ಡ್ ಅಧ್ಯಕ್ಷರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು ಈ ಒಂದು ಸಭೆಯಲ್ಲಿ ಗ್ರಾಮದ ಜನರ ಸಮಸ್ಯೆ ಹಾಗೂ ನೀರಿನ ಕೊರತೆ ಬೀದಿ ದೀಪಗಳ ಬಗ್ಗೆ ಚರ್ಚಿಸಿ ಹಾಗೂ ವಾರ್ಡಿನ ಅಧ್ಯಕ್ಷರಾದ ಮತ್ತು ಕೂಡ್ಲಿಗಿ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಶ್ರೀ ಮುರುಳಿರಾಜ್ ಕೆ ರವರು ಈ ಒಂದು ಸಭೆಯನ್ನು ಉದ್ದೇಶಿಸಿ ರಾಷ್ಟ್ರೀಯ ಮಹಾತ್ಮ ಗಾಂಧಿ ಯೋಜನೆ ಅಡಿಯಲ್ಲಿ ಆಕ್ಷನ್ ಪ್ಲಾನ್ ಪಟ್ಟಿಯನ್ನು ತಯಾರಿ ಮಾಡಲಾಗುತ್ತದೆ ನಿಮ್ಮ ವೈಯಕ್ತಿಕ ದನದ ಕೊಟ್ಟಿಗೆ ನಿರ್ಮಾಣ ಕೋಳಿ ಸಾಕಾಣಿಕೆ ಶಡ್ ಕುರಿ ಸೆಂಡ್ ಮೇಕೆ ಶೆಡ್ ಕೈತೋಟ ಮತ್ತು ಕೃಷಿ ಹೊಂಡ ಹಾಗೂ ಮುಖ್ಯವಾಗಿ ಶೌಚಾಲಯಗಳಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಅರ್ಜಿ ಸಲ್ಲಿಸುವಂತೆ ಜನರಿಗೆ ಅರಿವು ಮೂಡಿಸಿದರು ಮತ್ತು ಹಿಂದೆ ಇರುವಂತಹ PDO. ಹಾಗೂ ಡೇಟಾ ಎಂಟ್ರಿ ಆಪರೇಟರ್ ಮಾಡಿರುವುದು ಸರಿ ಅಲ್ಲ ಏಕೆಂದರೆ ಗ್ರಾಮ ಪಂಚಾಯಿತಿಗೆ PDO ಹಾಗೂ ಡೇಟಾ ಎಂಟ್ರಿ ಆಪರೇಟರ್ ಮತ್ತು ಅಧ್ಯಕ್ಷರು ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರು ಸೀಮಿತವಲ್ಲ ಹಾಗೂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಮುಖ್ಯವಾಗಿ ಅಭಿವೃದ್ಧಿ ಅಧಿಕಾರಿಗಳು ಎಲ್ಲರೂ ಒಗ್ಗಟ್ಟಿನಿಂದ ಗ್ರಾಮ ಗ್ರಾಮ ಪಂಚಾಯಿತಿಗೆ ಬರುವ ಹಳ್ಳಿಗಳ ಜನರ ಸಮಸ್ಯೆಯನ್ನು ನೀಗಿಸೋಣ ಹಿಂದೆ ಇರುವಂತಹ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಡಿರುವಂತಹ ದ್ರೋಹ ಹಾಗೂ ಕುಡಿಯುವ ನೀರಿಗಾಗಿ ಪಂಚಾಯಿತಿ ಕಡೆ ಅಲೆದಾಡಿದರು ಲೆಕ್ಕಿಸದೆ ಸುಮಾರು ಸಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳೆಲ್ಲರೂ ಅಭಿವೃದ್ಧಿ ಅಧಿಕಾರಿಗಳಿಗೆ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಸಾಕಷ್ಟು ಹಣವಿದೆ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆಗಳನ್ನು ನೀಗಿಸೋಣ ಎಂದು ಚರ್ಚಿಸಿದರು ಸಹ ಅಧಿಕಾರಿ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಿರುವುದಿಲ್ಲ.

 

ಎಂದು ಈ ಸಭೆಯಲ್ಲಿ ಜನರಿಗೆ ಮನಮುಟ್ಟುವಂತೆ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿಗೆ ಆಗಮಿಸಿರುವ ನೂತನ ಅಭಿವೃದ್ಧಿ ಅಧಿಕಾರಿಯದ ಕೆಂಚಪ್ಪ ರವರಿಗೆ ಶಾಲ್ ಹಾಗೂ ಹೂವಿನ ಹಾರ ಹಾಕಿ ಸನ್ಮಾನ ಸನ್ಮಾನ ಮಾಡಿ ಆಗಮಿಸಿದ ಪಿಡಿಒ ರವರನ್ನು. ಉದ್ದೇಶಿಸಿ ನೀವು ನಮ್ಮ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಹಿಂದೆ ಮಾಡಿರುವ ಅಧಿಕಾರಿಗಳ ಬಗ್ಗೆ ಈಗಾಗಲೇ ನಾನು ಚರ್ಚೆ ಮಾಡಿದ್ದೇನೆ ನೀವಾದರೂ ನಮ್ಮ ಗ್ರಾಮ ಗ್ರಾಮ ಪಂಚಾಯಿತಿಗೆ ಹಾಗೂ ಎಲ್ಲಾ ವಾರ್ಡ್ಗಳ ಜನರ ಕಷ್ಟಗಳಿಗೆ ಸ್ಪಂದಿಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರುಗಳ ಜೊತೆಗೂಡಿ ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಗಳ ಜೊತೆ ಕೈ ಜೋಡಿಸಿ ಎಂದು ನೂತನ ಅಧಿಕಾರಿಯನ್ನು ಮತ್ತು ಸಾಮಾನ್ಯ ಜನರನ್ನು ಉತ್ತೇಶಿಸಿ ಮಾತನಾಡಿದರು.

ಈ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ತಾಲೂಕು ಅಧ್ಯಕ್ಷರಾದ ಶ್ರೀ ಕೆಂಚಪ್ಪ ರವರು ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಧ್ಯಕ್ಷರು ಒಂದೇ ಪಂಚಾಯಿತಿಯಲ್ಲಿ ಇರುವುದು ನನಗೆ ಬಹಳ ಸಂತೋಷವಾಗಿದೆ ಈಗಾಗಲೇ ಈ ಒಂದು ಸಭೆಯಲ್ಲಿ ತಾಲೂಕು ಅಧ್ಯಕ್ಷರು ಹಿಂದೆ ಇರುವಂತ ಅಧಿಕಾರಿಗಳ ಬಗ್ಗೆ ಚರ್ಚೆ ಮಾಡಿದ್ದು ನನಗೆ ಇದರ ಬಗ್ಗೆ ಬಹಳ ಅರ್ಥಪೂರ್ಣವಾಗಿದೆ ಅದರಂತೆ ನಾನು ಈ ಒಂದು ಗ್ರಾಮ ಗ್ರಾಮ ಪಂಚಾಯಿತಿಗೆ ಹೆಸರು ತರುವ ಕೆಲಸ ಹಾಗೂ ಕುಡಿಯುವ ನೀರಿನ ಸಮಸ್ಯೆ ಮತ್ತು ಬೀದಿ ದೀಪಗಳ ಸಮಸ್ಯೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರೆ ಯೋಜನೆ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳ ಬಾಕಿ ಇರುವಂತಹ ಹಣವನ್ನು ಸಹ ಮಂಜರಾತಿ ಮಾಡಿಸುತ್ತೇನೆ ಹಾಗೂ ನಮ್ಮ ಪಂಚಾಯಿತಿಗೆ ಸೇರಿರುವ ಎಲ್ಲಾ ಹಳ್ಳಿಗಳಿಗೆ ಸದಸ್ಯರುಗಳ ಜೊತೆಗೆ ಭೇಟಿ ನೀಡಿ ಹಲ್ಲಿನ ಸಮಸ್ಯೆಯನ್ನು ಚರ್ಚಿಸಿ ನಿಮ್ಮ ಸಮಸ್ಯೆಯನ್ನು ನೀಗಿಸುತ್ತೇನೆ ಎಂದು ಮಾತನಾಡಿದರು ಈ ಒಂದು ವಾರ್ಡ್ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ. ಕೆಂಚಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ. ಶ್ರೀಮತಿ ಲಲಿತಮ್ಮ ಗೋವಿಂದಪ್ಪ. ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಮುರುಳಿರಾಜ್ ಕೆ. ಉಪಾಧ್ಯಕ್ಷರಾದ. ವೈ ಬೋರಯ್ಯ . ಸದಸ್ಯರುಗಳಾದ ಸರಿತಾ ಬಾಯಿ ಹಾಗೂ ಗ್ರಾಮ ಪಂಚಾಯಿತಿ ಎಲ್ಲಾ ಸರ್ವ ಸದಸ್ಯರುಗಳು ಮಾಜಿ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಮಾಜಿ ಸದಸ್ಯರುಗಳು ಸಮಾಜ ಸೇವಕರು ಹಾಗೂ ಶ್ರೀಕಂಠಾಪುರ ತಾಂಡದ ಜನರು ಮತ್ತು ಪಂಚಾಯಿತಿ ಸಿಬ್ಬಂದಿಗಳು ಈ ಒಂದು ಸಭೆಯನ್ನು ಯಶಸ್ವಿಗಳಿಸಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend