ಬಣಕಾರ ಮೂಗಪ್ಪ ಮುಡಿಗೇರಿದ ಸನ್ಮಾನ ಅಭಿನಂದನೆಳು…!!!

Listen to this article

ಬಣಕಾರ ಮೂಗಪ್ಪ ಮುಡಿಗೇರಿದ ಸನ್ಮಾನ ಅಭಿನಂದನೆಳು…

2010 ತವರೂರಲ್ಲಿ ಅಂದಿನ ಶಾಸಕರಾಗಿದ್ದ ಬಿ ನಾಗೇಂದ್ರ ಅವರಿಂದ ರಂಗಭೂಮಿ ಕಲಾವಿದ ಎಂದು ಪ್ರಶಂಸೆ ಪತ್ರ.

20 ಆಗಸ್ಪ್ 2023 ಬೆಂಗಳೂರು ಹೆಬ್ಬಾಳದ ಅಲುಮಿನಿಯಂ ಅಸೋಸಿಯೇಷನ್ ಸಭಾಂಗಣದಲ್ಲಿ ಹಿರಿಯ ಸಿನಿಮಾ ನಟಿ ಗಿರಿಜಾ ಲೋಕೇಶ್ ಅವರಿಂದ ವಿಶ್ವಕ ಕಲಾ ರತ್ನ ಶ್ರೀ ಸಿ ಆರ್ ಸಿಂಹ ರಾಜ್ಯದ ಮಟ್ಟದ ಪ್ರಶಸ್ತಿ.

ಇತ್ತೀಚಗೆ ಕೂಡ್ಲಿಗಿ ತಾಲ್ಲೂಕು ಶಿವಪುರ ಗ್ರಾಮಪಂಚಾಯ್ತಿ ಗೆ ಬರುವ ಜಂಗಮ ಸೋವೇನಹಳ್ಳಿ ಕೂಡ್ಲಿಗಿ ಜೋತಿಕಲಾ ಟ್ರಸ್ಟ್ ಹಾಗೂ ಗ್ರಾಮಸ್ಥರಿಂದ ಹೇಮರೆಡ್ಡಿ ಪಾತ್ರಕ್ಕೆ ಸನ್ಮಾನ.

ಹಂಪಿ ಉತ್ಸವ 2024 ಸಾಸಿವೆ ಗಣಪತಿ ವೇದಿಕೆಯಲ್ಲಿ ದುರ್ಯೋಧನ ಪಾತ್ರಕ್ಕೆ ಅಭಿನಂದನೆ.
ಚಪ್ಪರದ ಹಳ್ಳಿಯಲ್ಲಿ ರಕ್ತರಾತ್ರಿ ದುರ್ಯೋಧನ ಪಾತ್ರಕ್ಕೆ ಅಭಿನಂದನೆ ,

ಹಗರಿಬೊಮ್ಮನಹಳ್ಳಿ ಯಯಾತಿ ನಾಟಕಕ್ಕೆ ರಂಗ ಕಲೆಗೆ ಪ್ರಮಾಣ ಪತ್ರ.

ಈಚಲ ಬೊಮ್ಮನಹಳ್ಳಿ ಮಾಡಿ ಗ್ರಾಮದಲ್ಲಿ ದುರ್ಯೋಧನ ಪಾತ್ರಕ್ಕೆ ಸನ್ಮಾನ.
ಶ್ರಿ ಸುಂದರೇಶ್ವರ ಶಾಲೆ ಬಡಲೊಡು ಗ್ರಾಮದಲ್ಲೀ ರಂಗ ಭೂಮಿ ಕಲಾವಿದ ಸನ್ಮಾನ.
ಸಿರುಗುಪ್ಪ ಹರ ಗುರು ಶರಣರ ಆಶೀರ್ವಾದದೊಂಗಿಗೆ ಪ್ರಶಸ್ತಿ ಗೌರವಾರ್ಪಣೆ.
ದಾವಣಗೆರೆ ನಗರದ ಮುರುಘರಾಜೇಂದ್ರ ಮಠದಲ್ಲಿ ಹೇಮರೆಡ್ಡಿ ಪಾತ್ರಕ್ಕೆ ಅಭಿನಂದನೆ.

ಗುಡೇ ಕೋಟೆ ಉತ್ಸವದಲ್ಲಿ ದುರ್ಯೋಧನ ಪಾತ್ರದ ಅಭಿನಯಕ್ಕೆ ಪ್ರಶಂಸೆ.

ಗುರುಕುಲ ಕಲಾ ಪ್ರತಿಷ್ಠಾಣ ಮೂರನೇ ಅಖಿಲ ಭಾರತ ಕಾರ್ಯಕ್ರದಲ್ಲಿ ರಂಗ ಭೂಮಿ ಸೇವಾರತ್ನ ಪ್ರಶಸ್ತಿ.
2023ಆಗಸ್ಟ್ 15 ಕೂಡ್ಲಿಗಿ ಅಜಾದ್ ರಂಗಮಂದಿರದಲ್ಲಿ ರಕ್ತ ರಾತ್ರಿ ನಾಟಕ ದ ದುರ್ಯೋಧನ ಪಾತ್ರಕ್ಕೆ ಅಭಿನಂದನೆ.
ಸಂಡೂರು ತಾಲ್ಲೂಕು ಜೋಗ ಗ್ರಾಮದಲ್ಲಿ ದುರ್ಯೋಧನ ಪಾತ್ರಕ್ಕೆ ಪ್ರಶಂಸೆ.
ಹಗರಿಬೊಮ್ಮನಹಳ್ಳಿ ಮನ ಹನಸಿ ಗ್ರಾಮದಲ್ಲಿ ದುರ್ಯೋಧನ ಪಾತ್ರಕ್ಕೆ ಪ್ರಶಂಸೆ.
ಹೂವಿನ ಹಡಗಲಿ ತಾಲ್ಲೂಕು ಉತ್ತಂಗಿ ಗ್ರಾಮದಲ್ಲಿ ಶಕುನಿ ಪಾತ್ರಕ್ಕೆ ಪ್ರಶಂಸೆ.
ಗುಡೇಕೋಟೆ ಸಾಂಸ್ಕೃತಿಕ ಕಲೋತ್ಸದಲ್ಲಿ ಸನ್ಮಾನ.
ಹರಪನಹಳ್ಳಿ ಮುತ್ತಿಗೆ ಗ್ರಾಮದಲ್ಲಿ ಹೇಮರೆಡ್ಡಿ ನಾಟಕಕ್ಕೆ ಪ್ರಶಂಸೆ.
ಕೂಡ್ಲಿಗಿ ಪ್ರಶಾಂತ ಸಾಗರ ಶಿವಸಾಗರ ಮಹಾಸ್ವಾಮಿಗಳಿಂದ ಗೌರವಾರ್ಪಣೆ.
ಪ್ರಸಾರ ಭಾರತಿ ಕೊಪ್ಪಳ ಇವರಿಂದ ಪ್ರಶಸ್ತಿ.

ಆಂದ್ರ ಪ್ರದೇಶ್ ಅನಂತಪುರದಲ್ಲಿ ಸಂಕ್ರಾಂತಿ ಸಂಬ್ರಮಲು ಪ್ರಯುಕ್ತ ಹೇಮರೆಡ್ಡಿ ಪಾತ್ರಕ್ಕೆ ಕಲಾಭೂಷಣ ಪ್ರಶಸ್ತಿ.

ಬಳ್ಳಾರಿ ಗಡಿ ಗ್ರಾಮ ಕೆರೆನಹಳ್ಳಿಯಲ್ಲಿ ಹೇಮ ರೆಡ್ಡಿ ಪಾತ್ರಕ್ಕೆ ಪ್ರಶಂಸೆ.

2016ರಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ ದುರ್ಯೋಧನ ಪಾತ್ರಕ್ಕೆ ಪ್ರಶಂಸೆ.
ಮೈಸೂರಿನಲ್ಲಿ ಕರುನಾಡ ರಾಜ್ಯೋತ್ಸವ ಪ್ರಶಸ್ತಿ. ಸಾಕಷ್ಟು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಇಂತಹ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವುದು ಸರ್ಕಾರದ ಹೊಣೆ ಹಾಗಾಗಿ ಈ ಲೇಖನದ ಮುಖಾಂತರ ಅವರಿಗೆ ಮುಂಬರುವ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಆಯ್ಕೆ ಮಾಡುವುದು ಶಾಸಕರು ಮತ್ತು ಸಚಿವರು ಗಂಭೀರವಾಗಿ ಪರಿಗಣಿಸಿ ಆಯ್ಕೆ ಮಾಡುವುದು ಸೂಕ್ತ ಎಂದು ಈ ಲೇಖನದ ಮುಖಾಂತರ ಕಲಾವಿದನ ಪರಿಚಯ ನಿಮ್ಮ ಮುಂದೆ,

ಬಣಕಾರ ಮೂಗಪ್ಪ ಹಿರೇಹೆಗ್ಡಾಳ್ ಗ್ರಾಮದ ಬಸವರಾಜಪ್ಪ ಕೊಟ್ರಮ್ಮ ಎಂಬ ದಂಪತಿಗಳ ಆರು ಜನ ಮಕ್ಕಳಲ್ಲಿ ಎರಡನೆಯವರೇ ಬಣಕಾರ ಮೂಗಪ್ಪ. ತಮ್ಮ ತವರಿನಲ್ಲಿ ಎಲ್ಲರಿಗೂ ಎಲ್ಲಾ ಜಾತಿಯವರಿಗೂ,ಗುರು ಹಿರಿ ಕಿರಿಯರಿಗೂ ಅಚ್ಚು ಮೆಚ್ಚಿನವನಾಗಿ, ರಂಗ ಕಲಾಪ್ರತಿಭೆಯಾಗಿ ಬೆಳೆದ ಈ ಕಲಾವಿದನ ಆಭಿನಯ ಮೆಚ್ಚಿದ ಅಂದಿನ ಕೂಡ್ಲಿಗಿ ಕ್ಷೇತ್ರದ ಶಾಸಕರಾಗಿದ್ದ ಬಿ ನಾಗೇಂದ್ರ ಅವರು ಬಣಕಾರ ತವರೂರಾದ ಹಿರೇಹೆಗ್ಡಾಳ್ ನಲ್ಲಿ “ಬಣಕಾರ ಮೂಗಪ್ಪ ರಂಗಭೂಮಿ ಕಲಾವಿದ” ಎಂದು ಪ್ರಶಂಸೆ ನೀಡಿದರು ಎಂದು ಮೂಗಪ್ಪ ಪತ್ರಿಕೆ ಮುಖಾಮುಖಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

20 18 2023 ರಂದು ಬೆಂಗಳೂರು ಹೆಬ್ಬಾಳದ ಅಲುಮಿನಿಯಂ ಅಸೋಸಿಯೇಷನ್ ಸಭಾಂಗಣದಲ್ಲಿ ಜರುಗಿದ ಪ್ರಥಮ ವಿಶ್ವಕನ್ನಡ ಕಲಾ ಸಮ್ಮೇಳನ ಮತ್ತು ಸಂಸ್ಥೆ ಉದ್ಘಾಟನೆ ರಾಜ್ಯ ಪ್ರಶಸ್ತಿ ಪ್ರಧಾನದಲ್ಲಿ ಸಿನಿಮಾ ನಟಿ ಗಿರಿಜಾ ಲೋಕೇಶ್ ಅವರು ವಿಶ್ವಕಲಾ ರತ್ನ ಶ್ರೀ ಸಿ ಆರ್ ಸಿಂಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend