ಕೂಡ್ಲಿಗಿ:ಕೋಟೆ ಬಾಯ್ಸ್ ತಂಡದಿಂದ ಅದ್ಧೂರಿ ಗಣೇಶೋತ್ಸವ…!!!

Listen to this article

ಕೂಡ್ಲಿಗಿ:ಕೋಟೆ ಬಾಯ್ಸ್ ತಂಡದಿಂದ ಅದ್ಧೂರಿ ಗಣೇಶೋತ್ಸವ-ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ. ಶ್ರೀಗಣೇಶ ಚತುರ್ಥಿಯಂದು, ಆಯ್ದ ಸ್ಥಳಗಳಲ್ಲಿ ವಿಧಿವತ್ತಾಗಿ ಶ್ರೀಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಗಲ್ಲಿ ಗಲ್ಲಿಗಳಲ್ಲಿ ಪ್ರಮುಖ ವೃತ್ತಗಳಲ್ಲಿ, ಹಾಗೂ ಕೆಲ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಪದ್ಧತಿಯಂತೆ ಗಣೇಶ ಮೂರ್ತಿ ಕೂಡಿಸಲಾಯಿತು. ಜಿನಿಗಾರ ಮನೆಯಿಂದ ಪದ್ಧತಿ ಪ್ರಕಾರ ಪೂಜೆಗೈದು, ವಾಹನಗಳಲ್ಲಿ ಕೂಡಿಸಿಕೊಂಡು ವಾಧ್ಯಗಳೊಂದಿಗೆ. ಮೆರವಣಿಗೆಯ ಮೂಲಕ ನಿಗಧಿತ ಸ್ಥಳಕ್ಕೆ ಗಣೇಶ ಮೂರ್ತಿ ತಂದು, ಪುರೋಹಿತರ ನಿರ್ಧೇಶನದಂತೆ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಅಂತೆಯೇ ಕೂಡ್ಲಿಗಿ ಪಟ್ಟಣದ ಶ್ರೀಊರಮ್ಮ ದೇವಿ ದೇವಸ್ಥಾನದ ಹತ್ತಿರದ, ಕೋಟೆ ಬಾಯ್ಸ್ ಯುವಕರ ತಂಡದಿಂದ. ಪ್ರತಿ ವರ್ಷದಂತೆ ಜಿನಿಗಾರ ಮನೆಯಿಂದ ಶ್ರೀಗಣೇಶ ಮೂರ್ತಿ ಯನ್ನು, ವಾದ್ಯವೃಂದಒಳಗೊಂಡತೆ ಮೆರವಣೆಗೆ ಮೂಲಕ ವಾಹನದಲ್ಲಿ ತಂದು ಪ್ರತಿಷ್ಠಾಪಿಸಲಾಯಿತು.
ಶ್ರೀಊರಮ್ಮ ದೇವಿ ಅರ್ಚಕರಾದ ಬಡಿಗೇರ ನಾಗರಾಜರವರು, ಶ್ರೀಗಣೇಶ ಮೂರ್ತಿಯನ್ನು ವಿಧಿವತ್ತಾಗಿ ಪೂಜೆಗೈದು ಪ್ರಥಮ ಮಹಾ ಮಂಗಳಾರತಿ ಬೇಳಗಿದರು. ಈ ಸಂದರ್ಭದಲ್ಲಿ ಕೋಟೆಯ ಸಮಸ್ತ ದೈವಸ್ತರು, ಕೋಟೆ ಬಾಯ್ಸ್ ಯುವಕರ ತಂಡದ ಪದಾಧಿಕಾರಿಗಳು ಸರ್ವ ಸದಸ್ಯರು. ಪಟ್ಟಣದ ವಿಬಿದೆಡೆಯ ಯುವಕರು ಮಹಿಳೆಯರು ಮಕ್ಕಳು, ಯುವತಿಯರು, ನಾಗರೀಕರು ತುಂಬಾ ಉತ್ಸುಕತೆಯಿಂದ ಭಾಗವಹಿಸಿ ಶ್ರೀಗಣೇಶ ದೇವರ ಕೃಪೆಗೆ ಪಾತ್ರರಾದರು. ಭಕ್ತರು ಹೊಸ ಉಡುಪುಗಳನ್ನು ಉಟ್ಟು, 21ಕರಿಗೆಡಬು ಸೇರಿದಂತೆ ವಿವಿದ ಸಿಹಿ ಖಾದ್ಯಗಳನ್ನುತರಹವೇರಿ ಹಣ್ಣು ಕಾಯಿಗಳನ್ನು ದೇವರಿಗೆ ನೈವೇಧ್ಯ ಮಾಡಿದರು, ಮಕ್ಕಳು ಪಟಾಕಿ ಸಿಡಿಸಿ ವಿವಿದ ಸಂಗೀತ ಸಂಸ್ಕೃತಿ ಕಾರ್ಯಕ್ರಮಗಳನ್ನ ಆಯೋಜಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend