ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗೆ ದಾರಿ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ….!!!

Listen to this article

ಅಭಿವೃದ್ಧಿ ಕಾರ್ಯರೂಪ ಮತ್ತು ಆಡಳಿತಾತ್ಮಕ ತೆಗೆದುಕೊಂಡ ಕಠಿಣ ನಿಲುವುಗಳು ; ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗೆ ದಾರಿ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್‌. ಟಿ. ಅವರು ದಿ. 12-07-24 ರಂದು ಪಟ್ಟಣದಲ್ಲಿ ತಾಲೂಕು ಕಛೇರಿಯ ಆವರಣದಲ್ಲಿ ಹಲವಾರು ವರ್ಷಗಳಿಂದ ನೆನೆಗುದ್ದಿಗೆ ಬಿದ್ದ ಕಾಂಪೌಂಡ್ ನಿರ್ಮಾಣದ ಭೂಮಿ ಪೂಜೆ, ಪಶು ಆಸ್ಪತ್ರೆಯ ಪರಿಶೀಲನೆ ಮತ್ತು ಕುಂದುಕೊರತೆಗಳ ಆಲಿಸುವಿಕೆ, ರಾಜೀವ್ ಗಾಂಧಿ ನಗರದ ಸ್ವಚ್ಚತೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಿಂದ ಹಿಂದುಳಿದಿರುವಿಕೆಯ ಪರಿಶೀಲನೆ, ರಾತ್ರಿ ವೇಳೆ ವಾಲ್ಮೀಕಿ ನಗರದ ಹೊಸಪೇಟೆ ರಸ್ತೆಯಲ್ಲಿ ಇರುವ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮಹಿಳಾ ವಸತಿ ನಿಲಯಗಳಿಗೆ ಭೇಟಿ ನೀಡಿ ಸಮಸ್ಯೆ – ಸವಾಲುಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಭರವಸೆ ನೀಡಿದರು. ‌ಇಡೀ ದಿನ ಶಾಸಕರು ಅಭಿವೃದ್ಧಿ ಪರ ರೂಪಿಸಿದ ಕಾರ್ಯಕ್ರಮಗಳು, ಸ್ಥಳದಲ್ಲೇ ಸಮಸ್ಯೆಗಳನ್ನು ಆಲಿಸಿ ಆಡಳಿತಾತ್ಮಕವಾಗಿ ತೆಗೆದುಕೊಂಡು ಕಠಿಣ ನಿಲುವುಗಳು, ಕಾರ್ಯರೂಪಕ್ಕೆ ತಂದ ವಿವಿಧ ಭೂಮಿ ಪೂಜೆಗಳನ್ನು ಗಮನಸಿದಾಗ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ನಿಟ್ಟಿನಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರವನ್ನು ಕೊಂಡೈಯ್ಯಲು ಕಾರಣವಾಗಿವೆ. ಅದರ ಜೊತೆಗೆ ದ್ವೇಷ ಮರೆತು ಸ್ವಾರ್ಥವನ್ನು ಬದಿಗೆ ಇಟ್ಟು ಮುಖಂಡರ ಮಾತಿಗೆ ಕಿವಿಗೊಟ್ಟು ಎಲ್ಲರನ್ನೂ ಆತ್ಮ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮತ್ತು ಜನಪರ ಕಾರ್ಯಗಳ ಮಧ್ಯೆ ಪೂಜಾರಹಳ್ಳಿ – ಕನ್ನಿಬೋರಯ್ಯನಹಟ್ಟಿ ಗ್ರಾಮದ ತಂದೆಯನ್ನು ಕಳೆದುಕೊಂಡ ದುಃಖದಲ್ಲಿರುವ ಡಾ. ಉಮೇಶ ಅವರ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ಮತ್ತು ಆತ್ಮ ಸ್ಥೈರ್ಯ ತುಂಬುವ, ಹಾಗೆಯೇ ಆರೋಗ್ಯ ತೊಂದರೆಗಳಿಗೆ ಸಲಹೆ ಸೂಚನೆ ನೀಡುವ ಮತ್ತು ನಿಂಬಳಗೆರೆ ಗ್ರಾಮದ ಕಲ್ಲೇಶ ಅಣ್ಣನವರ ಕುಟುಂಬದ ನಾಮಕರಣ ಕಾರ್ಯಕ್ರಮದಲ್ಲಿ ಪ್ರೀತಿ ಹಂಚುವ, ಪ್ರವಾಸಿ ಮಂದಿರದಲ್ಲಿ ತಡರಾತ್ರಿವರೆಗೂ ಬಡವರ ಕಷ್ಟಗಳನ್ನು ಆಲಿಸುವ – ಬಗೆಹರಿಸುವ ನಿಟ್ಟಿನಲ್ಲಿ ಇತ್ಯಾದಿ ನಡೆ – ನುಡಿ ಮಹತ್ವದ ಬೆಳವಣಿಗೆ ಎಂತಲೂ ಹೇಳಬಹುದು. ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್. ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend