ಕೂಡ್ಲಿಗಿ:ನಿರಂತರವಾಗಿ ಜರುಗುತ್ತಿರುವ ಸರಣಿ ಕಳ್ಳತನ ಪ್ರಕರಣಗಳು, ಕಳ್ಳರಿಗೆ ಕಡಿವಾಣ ಹಾಕಿ ಭಾ.ಕ.ಪ(CPI)ಹಕ್ಕೊತ್ತಾಯ…!!!

Listen to this article

ಕೂಡ್ಲಿಗಿ:ನಿರಂತರವಾಗಿ ಜರುಗುತ್ತಿರುವ ಸರಣಿ ಕಳ್ಳತನ ಪ್ರಕರಣಗಳು, ಕಳ್ಳರಿಗೆ ಕಡಿವಾಣ ಹಾಕಿ ಭಾ.ಕ.ಪ(CPI)ಹಕ್ಕೊತ್ತಾಯ
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿ ಹಗಲು ಹೊತ್ತಿನಲ್ಲಿಯೇ ಮನೆಗಳ ಕಳ್ಳತನ ಯಥೇಚ್ಛವಾಗಿ ನಡೆಯತ್ತಿದ್ದು, ಕೂಡಲೇ ಕಳ್ಳರನ್ನು ಬಂಧಿಸಿ ಭಯ ಬೀತರಾಗಿರುವ ಜನರಿಗೆ ರಕ್ಷಣೆ ಒದಗಿಸು ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಬೇಕೆಂದು. ಭಾರತೀಯ ಕಮ್ಯೂನಿಸ್ಟ್ ಪಕ್ಷ(CPI) ಸಿಪಿಐ ತಾಲೂಕು ಘಟಕ, ಮೇ24ರಂದು ಕೂಡ್ಲಿಗಿ DYSP ರವರಿಗೆ ಹಕ್ಕೊತ್ತಾಯ ಮಾಡಿದೆ. ಪಕ್ಷದ ಪದಾಧಿಕಾರಿಗಳು ಮುಖಂಡ ಹೆಚ್.ವೀರಣ್ಣ ರವರ ನೇತೃತ್ವದಲ್ಲಿ, ಪೊಲೀಸ್ ಅಧಿಕಾರಿ ಮಲ್ಲೇಶಪ್ಪ ಮಲ್ಲಾಪುರ ರವರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವೀರಣ್ಣ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಪಟ್ಟಣದಲ್ಲಿ ಹಾಡುಹಗಲೇ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಜರುಗುತ್ತಿವೆ. ಕಳ್ಳರು ಒಂದರ ನಂತರ ಒಂದು ಮನೆಗಳನ್ನು ಹಾಡುಹಗಲೇ ಕಳ್ಳತನ ಮಾಡಿ, ಲಕ್ಷ ಗಟ್ಟಲೆ ಬೆಲೆ ಬಾಳುವ ಬಂಗಾರ ಬೆಳ್ಳಿ ನಗದು ಹಣವನ್ನು ದೋಚುತ್ತಿದ್ದಾರೆ. ಪಟ್ಟಣದ ನಾಗರೀಕರು ಹಾಗೂ ಸಾರ್ವಜನಿಕರು, ಭಯಬೀತರಾಗಿದ್ದು ಆತಂಕಕ್ಕೀಡಾಗಿದ್ದಾರೆ. ಪಟ್ಟಣದ ಲಕ್ಷ್ಮೀ ಬಜಾರ್ ನಲ್ಲಿ ಪ್ರಮುಖ ಬೀದಿಯಲ್ಲಿರುವ, ಶ್ರೀಮಾರುತಿ ಟೆಕ್ಸ್ ಟೈಲ್ಸ್ ನಲ್ಲಿ ಡ್ರಾ ದಲ್ಲಿರುವ 60ಸಾವಿರ ನಗದು ಕಳ್ಳ ಕದ್ದಿದ್ದಾನೆ. ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಮುಖ ಚಹರೆ ಸ್ಪಷ್ಟವಾಗಿ ದಾಖಲಾಗಿದ್ದು, ಘಟನೆ ಜರುಗಿ ತಿಂಗಳಾದರೂ ಈ ವರೆಗೆ ಯಾವುದೇ ಕ್ರಮ ಜರುಗಿಸಿರುವ ಬಗ್ಗೆ ಮಾಹಿತಿ ಇಲ್ಲ. ಲೋಕೋಪಯೋಗಿ ಇಲಾಖೆ ನೌಕರರಾದ ಹೈದರ್, ಹಾಗೂ ನಿವೃತ್ತ ನೌಕರ ಸೋಮಶೇಖರ್ ಮನೆಗಳಲ್ಲಿ ಸರಣಿ ಹಗಲು ಕಳ್ಳತನ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಿರದ ಸಿಸಿ ಕ್ಯಾಮೆರಾದಲ್ಲಿ, ಕಳ್ಳರ ಚಲನ ವಲನ ಚಹರೆ ದಾಖಲಾಗಿದೆ. ರಾಜೀವ್ ಗಾಂಧಿ ನಗರದಲ್ಲಿನ 5 ಮನೆಗಳಿಗೆ, ಕಳ್ಳರು ಕನ್ನಹಾಕಿ ವಿಫಲವಾಗಿರುವ ಬಗ್ಗೆ ಇಲಾಖೆಗೆ ಅಧೀಕೃತ ಮಾಹಿತಿ ಲಭ್ಯವಾಗಿದೆ. ಪಟ್ಟಣದ ಹೊಸಪೇಟೆ ರಸ್ಥೆಗೆ ಹೊಂದಿಕೊಂಡಿರುವ ಮನೆಯಲ್ಲಿ, ಮೇ23ರಂದು ಹಾಡುಹಗಲೇ ಮಧ್ಯಾಹ್ನ ಮನೆ ಬೀಗ ಮುರಿದು ಚಿನ್ನ ಬೆಳ್ಳಿ ನಗದು ದೋಚಿದ್ದಾರೆ. ಕೂಡ್ಲಿಗಿ ಪಟ್ಟಣದ ದುಸ್ಥಿತಿ ಹೀಗೆ ಮುಂದುವರೆದರೆ, ಸಾರ್ವಜನಿಕರು ನಾಗರೀಕರು ತೀವ್ರ ಭಯಬೀತಿಯಿಂದ ಜೀವನ ನಡೆಸುವ ದೌಭಾಗ್ಯ ಒದಗಲಿದೆ.
ಪಟ್ಟಣದಲ್ಲಿ ಪವನ ಯಂತ್ರ ಹಾಗೂ ಸೋಲಾರ್ ವಿದ್ಯುತ್ ಯಂತ್ರಗಳನ್ನು, ಅಳವಡಿಸುವ ಕೆಲಸಕ್ಕೆಂದು ಬೇರೆ ರಾಜ್ಯಗಳಿಂದ ಕಾರ್ಮಿಕರು ಬಂದು ಉಳಿದು ಕೊಂಡಿದ್ದಾರೆ. ಈ ವ್ಯಕ್ತಿಗಳ ಚಲನ ವಲನಗಳು ಮೇಲ್ನೋಟಕ್ಕೆ, ಅನುಮಾನಾಸ್ಪದ ಎನೆಸಿವಂತಿದ್ದು. ಕಾರಣ ಪಟ್ಟಣಕ್ಕೆ ಯಾರೇ ಹೊಸಬರು ಬಂದು ನೆಲೆಸಿದ್ದಲ್ಲಿ, ಹಾಗೂ ಅನುಮಾನಾಸ್ಪದವಾಗಿ ಗೋಚರಿಸಿದ್ದಲ್ಲಿ. ಇಲಾಖೆ ಅಂತಹವರಿಂದ ಖಾಯಂ ವಿಳಾಸ, ಮತ್ತು ಅವರ ಚಾರಿತ್ರಿಕ ಹಿನ್ನಲೆಯ ಖಚಿತ ಮಾಹಿತಿ ಸಂಗ್ರಹಿಸಬೇಕಾಗಿದೆ ಎಂದು ವೀರಣ್ಣ ಸಲಹೆ ನೀಡಿದರು. ಕೆಲವೊಮ್ಮೆ ಪೊಲೀಸ್ ಇಲಾಖೆ ಸಂಶಯ ಪಡುವಂತೆ, ಅಂತವರೊಟ್ಟಿಗೆ ಸ್ಥಳೀಯರೂ ಕೂಡ ಕೈಜೋಡಿಸಿರಬಹುದಾಗಿದೆ. ಕಾರಣ ಕೂಡಲೇ ಪೋಲಿಸ್ ಇಲಾಖೆ ಕಾರ್ಯಪ್ರವೃತ್ತರಾಗಿ, ಕಳ್ಳರನ್ನು ಹಿಡಿದು ಅವರ ಹೆಡೆಮುರಿ ಕಟ್ಟಬೇಕೆಂದು ಒತ್ತಾಯಿಸಿದರು. ನಾಗರೀಕರಲ್ಲಿ ಹಾಗೂ ಸಾರ್ವಜನಿಕರಲ್ಲಿ, ಪೋಲಿಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಬಗ್ಗೆ ಅಪಾರ ಗೌರವ ಮತ್ತು ನಂಬಿಕೆ ಇದೆ. ಸರಣಿ ಕಳ್ಳತನಗಳು ಹೀಗೆೆ ಸರಣಿಯೋಪಾದಿಯಲ್ಲಿ ಜರುಗತ್ತಲೇ ಇದ್ದಲ್ಲಿ, ಜನರು ವಿಶ್ವಾಸವನ್ನು ಇಲಾಖೆ ಕಳೆದುಕೊಳ್ಳು ಸಂಭವ ಹೆಚ್ಚಿದೆ. ರಾತ್ರಿ ಫಹರೆ ಬೀಟ್ ನ್ನು ಪೊಲೀಸರು ಸಮರ್ಪಕವಾಗಿ ಬಿರ್ವಹಿಸುತ್ತಿಲ್ಲ, ಎಂಬ ಗಂಭಿರ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಇಲಾಖೆಯ ಕೆಲವೇ ಕೆಲ ನಿರ್ಲಕ್ಷ್ಯ ಧೋರಣೆಯ ಸಿಬ್ಬಂದಿ ಎಸಗುವ ಕರ್ಥವ್ಯ ಲೋಪದಿಂದಾಗಿ, ಇಡೀ ಪೋಲಿಸ್ ಸಿಬ್ಬಂದಿಗಳ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಕಾರಣ ಅಧಿಕಾರಿಗಳು ರಾತ್ರಿ ಫಹರೆ ಬೀಟ್ ಗೆ ಧಕ್ಷ ನಿಷ್ಠಾವಂತ ಸಿಬ್ಬಂದಿಯನ್ನ ನೇಮಿಸಬೇಕಿದೆ , ಅಂದಾಗ ಮಾತ್ರ ನಾಗರೀಕರು ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯ ಎಂದರು. ಕೂಡ್ಲಿಗಿ ಪೊಲೀಸರು ಜನರ ನಂಬಿಕೆಯನ್ನು ಹುಸಿಗೊಳಿಸದೇ, ಕಳ್ಳರನ್ನು ಶೀಘ್ರವೇ ಪತ್ತೆ ಹಚ್ಚಬೇಕಿದೆ ಮತ್ತು ಬಂಧಿಸಿ ಜನರಿಗೆ ನೆಮ್ಮದಿ ಹಾಗೂ ರಕ್ಷಣೆ ಒದಗಿಸಬೆೇಂದು ಅವರು ಒತ್ತಾಯಿಸಿದರು. ಇಲಾಖೆಯ ಮಾರ್ಗಸೂಚಿ ಪಾಲಿಸಿ, ಇಲಾಖೆಯೊಂದಿಗೆ ಸಹಕರಿಸಿ-CPI ವಿನಾಯಕ
ಮನವಿ ಸ್ವೀಕರಿಸಿ ಮಾತನಾಡಿದ ಸಿಪಿಐ ವಿನಾಯಕರವರು, ಈಗಾಗಲೇ ಕಳ್ಳತನ ವಾಗಿರುವ ಮನೆಗಳನ್ನ ಪರಿಶೀಲನೆ ಮಾಡಲಾಗಿದೆ. ಇಲಾಖೆಯು ಕಳ್ಳರ ಚಹರೆ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಅಗತ್ಯ ಮಾಹಿತಿ ಸಂಗ್ರಹಿಸಿ ಕಳ್ಳರ ಜಾಡನ್ನು ಹಿಡಿಯಲು ಎಲ್ಲಾ ಪ್ರಯತ್ನ ಮಾಡುತ್ತಿದ್ದು. ಉನ್ನತಾಧಿಕಾರಿಗಳ ನಿರ್ಧೇಶನದಂತೆ ಕಳ್ಳರಿಗಾಗಿ ತಂಡ ರಚಿಸಿ ಕಾರ್ಯಪ್ರವೃತ್ತರಾಗಿದ್ದು, ಸಾರ್ವಜನಿಕರು ಹಾಗೂ ನಾಗರೀಕರು ಪೊಲೀಸರು ಸೂಚಿಸುವ ಮಾರ್ಗ ಸೂಚಿಗಳನ್ನು ಪಾಲಿಸಬೇಕಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಅಗತ್ಯ ಮಾಹಿತಿಗಳನ್ಬು ನೀಡೋ ಮೂಲಕ ಸಹಕಾರ ನೀಡಬೇಕಾಗಿದೆ. ಮನೆಯಿಂದ ಬೇರೆಡೆಗೆ ತೆರಳುವಾಗ ಹಾಗೂ ಬೀಗ ಹಾಕಿ ಹೋಗುವ ಮುನ್ನ, ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕಿದೆ. ಈ ಸಂಬಂಧಿಸಿದಂತೆ ಪಾಲಿಸಬೇಕಿರುವ ಜಾಗ್ರತೆ ಕ್ರಮಗಳ ಕುರಿತು, ಕರ ಪತ್ರಗಳನ್ನು ಹಂಚಲಾಗಿದೆ ಹಾಗೂ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಿಯಾಗಿದೆ. ಆದರೂ ಕೂಡ ಸಾರ್ವಜನಿಕರು ಇಲಾಖೆಯೊಂದಿಗೆ ಸ್ಪಂಧಿಸುತ್ತಿಲ್ಲ ಅಗತ್ಯ ಮಾಹಿತಿ ನೀಡುತ್ತಿಲ್ಲ, ಸಾರ್ವಜನಿಕರು ಹಾಗೂ ಇಲಾಖೆಯೊಂದಿಗೆ ಪರಸ್ಪರ ಭಾಂಧವ್ಯ ಮುಖ್ಯ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು. ಹಾಗಾಗಿ ಮನೆಗೆ ಬೀಗ ಹಾಕಿ ಹೊರ ಪ್ರವಾಶಕ್ಕೆ ತೆರಳುವ ಮುನ್ನ, ಠಾಣಗೆ ಮಾಹಿತಿ ನೀಡಿ ತೆರಳಬೇಕಿದೆ ಇದನ್ನು ಎಲ್ಲರೂ ಪಾಲಿಸಬೇಕೆಂದು ಕರೆನೀಡಿದರು. ಜೊತೆ ಜೊತೆಗೆ ಅಪರಿಚಿರನ್ನ, ಹಾಗೂ ಅನುಮಾನಾಸ್ಪದ ನಡವಳಿಕೆಯ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಠಾಣೆಗೆ ಮಾಹಿತಿ ನೀಡಬೇಕು. ಇಲಾಖೆ ಸೂಚಿಸಿರುವ ಎಲ್ಲಾ ನಿಯಮಗಳನ್ನು, ಪ್ರತಿಯೊಬ್ಬರೂ ಪಾಲಿಸಬೇಕಿದೆ ಅಂದಾಗ ಮಾತ್ರ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ ಎಂದರು. ತಮ್ಮ ಆಧ್ಯ ಕರ್ಥವ್ಯದ ನಿಮಿತ್ತ ತೆರಳಿದ್ದ ಡಿವೈಎಸ್ಪಿ ಮಲ್ಲೆೇಶಪ್ಪ ಮಲ್ಲಾಪುರವರು, ಇದೇ ಸಂದರ್ಭದಲ್ಲಿ ಆಗಮಿಸಿ ಮುಖಂಡರ ಹಕ್ಕೊತ್ತಾಯ ಆಲಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಕರಿಯಪ್ಪ, ಖಜಾಂಚಿ ಯು.ಪೆನ್ನಪ್ಪ, ಅನಂತೇಶ್, ಕುಬೇರ, ಕಂದಗಲ್ಲು ತಿಮ್ಮಣ್ಣ, ವೈ‌.ಮಲ್ಲಿಕಾರ್ಜುನ, ಕೊಟ್ರೇಶ್,ಹರೀಶ್ ಇದ್ದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend